Advertisement

ದ.ಆಫ್ರಿಕಾಕ್ಕೆ  ವೈಟ್‌ವಾಶ್‌; ಶ್ರೀಲಂಕಾ ಹೊಸ ಇತಿಹಾಸ

12:30 AM Feb 24, 2019 | |

ಪೋರ್ಟ್‌ ಎಲಿಜಬೆತ್‌: ದಕ್ಷಿಣ ಆಫ್ರಿಕಾಕ್ಕೆ ಅವರದೇ ನೆಲದಲ್ಲಿ ವೈಟ್‌ವಾಶ್‌ ಮಾಡುವ ಮೂಲಕ ಶ್ರೀಲಂಕಾ ತನ್ನ ಟೆಸ್ಟ್‌ ಚರಿತ್ರೆಯಲ್ಲಿ ಹೊಸ ಎತ್ತರ ತಲುಪಿದೆ. ಮೊನ್ನೆ ಮೊನ್ನೆಯ ತನಕ ಸಾಮಾನ್ಯ ಮಟ್ಟದ ತಂಡವಾಗಿ ಗುರುತಿಸಲ್ಪಡುತ್ತಿದ್ದ ಲಂಕಾ ತಂಡ ಈಗ ತನ್ನ ಅಮೋಘ ಸಾಧನೆಯಿಂದ ಕ್ರಿಕೆಟ್‌ ವಿಶ್ವದ ಕಣ್ಣು ಕುಕ್ಕುವಂತೆ ಮಾಡಿದೆ. 

Advertisement

ಪೋರ್ಟ್‌ ಎಲಿಜಬೆತ್‌ನಲ್ಲಿ ನಡೆದ 2ನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯವನ್ನು ಶ್ರೀಲಂಕಾ 8 ವಿಕೆಟ್‌ಗಳಿಂದ ಗೆದ್ದಿತು. ಇದರೊಂದಿಗೆ 2 ಪಂದ್ಯಗಳ ಕಿರು ಸರಣಿಯನ್ನು 2-0 ಅಂತರದಿಂದ ತನ್ನದಾಗಿಸಿಕೊಂಡಿತು. ಮೊದಲ ಟೆಸ್ಟ್‌ ಪಂದ್ಯವನ್ನು ಒಂದು ವಿಕೆಟ್‌ನಿಂದ ರೋಮಾಂಚಕಾರಿ ಯಾಗಿ ಗೆದ್ದ ಶ್ರೀಲಂಕಾ ಇದೇ ಸ್ಫೂರ್ತಿಯಲ್ಲಿ ಹರಿಣಗಳನ್ನು ಬೇಟೆಯಾಡಿತು. ನಿಷೇಧ ಮುಗಿಸಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಮರಳಿದ  ದಕ್ಷಿಣ ಆಫ್ರಿಕಾ ವಿರುದ್ಧ ಅವರದೇ ನೆಲದಲ್ಲಿ ಟೆಸ್ಟ್‌ ಸರಣಿ ಗೆದ್ದ ಕೇವಲ 3ನೇ ತಂಡ ವೆಂಬ ಹೆಗ್ಗ ಳಿಕೆ ಲಂಕೆ ಯ ದ್ದು. ಆಸ್ಟ್ರೇಲಿಯ 5 ಸಲ, ಇಂಗ್ಲೆಂಡ್‌ 2 ಸಲ ಈ ಸಾಧನೆ ಮಾಡಿವೆ.

197 ರನ್‌ ಗುರಿ
ಗೆಲುವಿಗೆ 197 ರನ್ನುಗಳ ಗುರಿ ಪಡೆದ ಶ್ರೀಲಂಕಾ 2 ವಿಕೆಟ್‌ ನಷ್ಟದಲ್ಲಿ ಇದನ್ನು ಸಾಧಿಸಿತು. ಆಗ ಒಶಾದ ಫೆರ್ನಾಂಡೊ 75 ರನ್‌ ಮತ್ತು ಕುಸಲ್‌ ಮೆಂಡಿಸ್‌ 84 ರನ್‌ ಬಾರಿಸಿ ಅಜೇಯರಾಗಿದ್ದರು.
ದಕ್ಷಿಣ ಆಫ್ರಿಕಾದ 222 ರನ್ನುಗಳ ಮೊದಲ ಇನ್ನಿಂಗ್ಸಿಗೆ ಉತ್ತರವಾಗಿ ಶ್ರೀಲಂಕಾ 154 ರನ್‌ ಗಳಿಸಿತ್ತು. ಆದರೆ ದ್ವಿತೀಯ ಸರದಿಯಲ್ಲಿ ತಿರುಗಿ ಬಿದ್ದ ಲಂಕಾ ಬೌಲರ್ ಆತಿಥೇಯರನ್ನು 128ಕ್ಕೆ ಉಡಾಯಿಸಿದರು. ಸುರಂಗ ಲಕ್ಮಲ್‌ 4, ಧನಂಜಯ ಡಿ’ಸಿಲ್ವ 3  ವಿಕೆಟ್‌ ಹಾರಿಸಿದರು. 

ಸಂಕ್ಷಿಪ್ತ ಸ್ಕೋರ್‌: ದಕ್ಷಿಣ ಆಫ್ರಿಕಾ- 222 ಮತ್ತು 128. ಶ್ರೀಲಂಕಾ-154 ಮತ್ತು 2 ವಿಕೆಟಿಗೆ 197. ಪಂದ್ಯಶ್ರೇಷ್ಠ: ಕುಸಲ್‌ ಮೆಂಡಿಸ್‌. ಸರಣಿಶ್ರೇಷ್ಠ: ಕುಸಲ್‌ ಪೆರೆರ.

Advertisement

Udayavani is now on Telegram. Click here to join our channel and stay updated with the latest news.

Next