Advertisement
ಬಿಹಾರದ ರಾಜಧಾನಿ ಪಾಟ್ನಾದಲ್ಲಿ ನಾಲ್ಕು ಹೊಸ ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ ಒಬ್ಬರು ಬಿಹಾರದ ಖ್ಯಾತ ವೈದ್ಯರೇ ಆಗಿದ್ದಾರೆ. ಬ್ಲ್ಯಾಕ್ ಫಂಗಸ್‌ಗೆ ಹೋಲಿಸಿದರೆ ವೈಟ್ ಫಂಗಸ್ ಅತ್ಯಂತ ಅಪಾಯಕಾರಿ. ಮಹಾರಾಷ್ಟ್ರ, ಗುಜರಾತ್‌ನಲ್ಲಿ ಅದು ಅತ್ಯಂತ ವೇಗವಾಗಿ ಹರಡುತ್ತಿದೆ. ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಹೊಸ ಸಮಸ್ಯೆ ಹೆಚ್ಚಿನ ಸವಾಲು ತಂದೊಡ್ಡಲಿದೆ ಎಂದು ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮೈಕ್ರೋಬಯಾಲಜಿ ವಿಭಾಗದ ಮುಖ್ಯಸ್ಥ ಡಾ| ಎಸ್.ಎನ್. ಸಿಂಗ್ ಎಚ್ಚರಿಸಿದ್ದಾರೆ.
- ಬ್ಲ್ಯಾಕ್ ಫಂಗಸ್‌ಗೆ ಹೋಲಿಸಿ ದರೆ ಅತ್ಯಂತ ಅಪಾಯಕಾರಿ
- ಶ್ವಾಸಕೋಶ, ಉಗುರು, ಚರ್ಮ, ಹೊಟ್ಟೆ, ಕಿಡ್ನಿ, ಮೆದುಳು, ಬಾಯಿ, ಖಾಸಗಿ ಅಂಗ ಗಳಿಗೆ ತೊಂದರೆಯಾಗುವ ಆತಂಕ
- ಹೈ ರೆಸೊಲ್ಯೂಷನ್ ಕಂಪ್ಯೂಟೆಡ್ ಟೋಮೋಗ್ರಫಿ (ಎಚ್‌ಆರ್‌ಸಿಟಿ) ಪರೀಕ್ಷೆ ನಡೆಸಿದಾಗ ಪತ್ತೆಯಾಗುತ್ತದೆ.
- ಇಂಥ ಸಮಸ್ಯೆ ಕಾಣಿಸಿಕೊಂಡವರಲ್ಲಿ ಕೊರೊನಾ ಸೋಂಕಿನ ಮಾದರಿಯ ಲಕ್ಷಣಗಳು ಕಂಡುಬರುತ್ತವೆ.
- ಸೋಂಕು ಪತ್ತೆ ಪರೀಕ್ಷೆ ನಡೆಸಿದಾಗ ನೆಗೆಟಿವ್ ಫಲಿತಾಂಶ
- ಸೋಂಕಿತರ ಶ್ವಾಸಕೋಶದಲ್ಲಿ ಸಮಸ್ಯೆ ಇರುವುದು ಗೊತ್ತಾಗುತ್ತದೆ.
Related Articles
- ಬ್ಲಾಕ್ ಫಂಗಸ್‌ನಿಂದ ಮೂಗು ಮತ್ತು ಶ್ವಾಸಕೋಶಗಳಿಗೆ ಸಮಸ್ಯೆ
- ರೋಗ ನಿರೋಧಕ ಶಕ್ತಿ ಕಡಿಮೆ ಇರು ವವ ರಲ್ಲಿ, ಮಧುಮೇಹ ಇರುವವರಲ್ಲಿ
- ಅನಾರೋಗ್ಯ ಪೀಡಿತ ರು, ಸ್ಟಿರಾಯ್ಡ ತೆಗೆದು ಕೊಳ್ಳುವವರಲ್ಲಿ
- ಮೆಡಿಕಲ್ ಆಕ್ಸಿಜನ್ ತೆಗೆದುಕೊಳ್ಳುವ ರಿಗೂ ಆತಂಕ ತಪ್ಪಿದ್ದಲ್ಲ
Advertisement