ಗೆಲ್ಲೋದು ನಾವೇ ಬೆಟ್ ಉಂಟಾ?
ಕಂಡ್ಲೂರಿನ ಹೊಟೇಲ್ ಒಂದರಲ್ಲಿ ಕಾರ್ಯಕರ್ತರ ಮಾತು ತಮ್ಮ ಅಭ್ಯರ್ಥಿಗಳ ಗೆಲುವಿನ ಲೆಕ್ಕಾಚಾರಕ್ಕೆ ಹೊರಳಿತ್ತು. ನಮ್ಮ ಅಭ್ಯರ್ಥಿ ಗೆದ್ದ ಹಾಗೇ. ಯಾವುದೇ ಅನುಮಾನ ಬೇಡ ಎಂದು ಹೇಳಿದ ಒಂದು ಪಕ್ಷದ ಕಾರ್ಯಕರ್ತನಿಗೆ ಪಕ್ಕದಲ್ಲೇ ಕುಳಿತು ಚಹಾ ಹೀರುತ್ತಿದ್ದ ಮತ್ತೂಂದು ಪಕ್ಷದ ಕಾರ್ಯಕರ್ತ ಅದ್ಹೇಗೆ ನಿಮ್ಮ ಪಕ್ಷದ ಅಭ್ಯರ್ಥಿ ಗೆಲ್ಲೋದು? ಎಂದು ಪ್ರಶ್ನೆ ಹಾಕಿದರು. ಕಳೆದ ಐದು ವರ್ಷದಲ್ಲಿ ಇಡೀ ಕ್ಷೇತ್ರದಲ್ಲಿ ನಾವೇ ಕೆಲಸ ಮಾಡುತ್ತ ಬಂದಿದ್ದೇವೆ. ಗೆಲ್ಲೋದು ನಾವೇ ಬೆಟ್ ಉಂಟಾ ಎಂದು ಕೇಳಿದ್ದಾರೆ. ಚರ್ಚೆ ಮುಂದುವರಿದು 50 ಸಾವಿರ, 1 ಲಕ್ಷ ಬೆಟ್ವರೆಗೂ ಹೋಗಿತ್ತು.
Advertisement
ಎಲ್ಲೆಡೆ ಬಿಸಿಬಿಸಿ ಚರ್ಚೆ ಬಸ್ರೂರಿನ ಹಲವೆಡೆ ಅಭ್ಯರ್ಥಿಗಳ ಗೆಲುವಿನ ಚರ್ಚೆ ನಡೆದಿದೆ. ಅಂಗಡಿ ಮುಂಗಟ್ಟು, ಹೊಟೇಲ್ಗಳಲ್ಲಿ ಲೆಕ್ಕಾಚಾರ ಜೋರಾಗಿದೆ. ಬೆಟ್ಟಿಂಗ್ ಕೂಡ ನಡೆಯುತ್ತಿದೆ ಎಂದು ಮೂಲಗಳು ಹೇಳಿವೆ. ಕಾರ್ಯಕರ್ತರೂ ವಿಪರೀತ ಉತ್ಸಾಹದಿಂದ ಕೂಡಿದ್ದು, ನಿರೀಕ್ಷೆ ಮೇ 15ರತ್ತ ನೆಟ್ಟಿದೆ.