Advertisement

ವಿಶ್ವಪ್ರತಿಭೆಗಳ ನೆರವಿಲ್ಲದೆ ಆ್ಯಪಲ್‌,ಐಬಿಎಂಗಳು ಎಲ್ಲಿರುತ್ತಿದ್ದವು?

12:28 PM Apr 26, 2017 | Karthik A |

ನ್ಯೂಯಾರ್ಕ್‌/ವಾಷಿಂಗ್ಟನ್‌: ‘ಜಗತ್ತಿನಾದ್ಯಂತದ ಅತ್ಯುತ್ತಮ ಉತ್ಪನ್ನಗಳು ಹಾಗೂ ಪ್ರತಿಭೆಗಳನ್ನು ಸೆಳೆದುಕೊಳ್ಳದೇ ಇರುತ್ತಿದ್ದರೆ ಆ್ಯಪಲ್‌, ಸಿಸ್ಕೋ, ಐಬಿಎಂನಂಥ ಅಮೆರಿಕದ ದಿಗ್ಗಜ ಕಂಪೆನಿಗಳು ಈಗ ಎಲ್ಲಿರುತ್ತಿದ್ದವು?’ ‘ಅಮೆರಿಕ ಫ‌ಸ್ಟ್‌’ ಎಂದು ಹೇಳಿಕೊಂಡು, ವೀಸಾ ನೀತಿ ಬಿಗಿಗೊಳಿಸುತ್ತಿರುವ ಅಮೆರಿಕಕ್ಕೆ ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌ ಕೇಳಿದ ಪ್ರಶ್ನೆಯಿದು. ಮಂಗಳವಾರ ನ್ಯೂಯಾರ್ಕ್‌ನಲ್ಲಿ ಮಾತನಾಡಿದ ಅವರು, ಪಟೇಲ್‌, ಅಮೆರಿಕದ ರಕ್ಷಣಾತ್ಮಕ ನೀತಿಯನ್ನು ಕಟು ಪದಗಳಿಂದ ಖಂಡಿಸಿದ್ದಾರೆ. ‘ದೊಡ್ಡ ದೊಡ್ಡ ಕಂಪೆನಿಗಳು ವಿಶ್ವದ ಪ್ರತಿಭೆಗಳನ್ನು ಆಯ್ದುಕೊಂಡಿರದೇ ಇರುತ್ತಿದ್ದರೆ ಈಗ ಆ ಕಂಪೆನಿಗಳು ಎಲ್ಲಿರುತ್ತಿದ್ದವು? ಇಂತಹ ಪ್ರಕ್ರಿಯೆಗಳಿಗೆ ನೀತಿ ನಿಬಂಧನೆಗಳು ಅಡ್ಡಿಯಾದರೆ, ಆಗ ರಕ್ಷಣಾ ನೀತಿಗಳನ್ನು ಅನುಸರಿಸುವ ರಾಷ್ಟ್ರಗಳ ಸಂಪತ್ತು ಸೃಷ್ಟಿಸುವ ಕಂಪೆನಿಗಳ ಮೇಲೆ ಭಾರೀ ದುಷ್ಪರಿಣಾಮ ಬೀರುವುದು ಖಚಿತ,’ ಎಂದಿದ್ದಾರೆ. 

Advertisement

ಬೆಲೆ ಕೊಡುತ್ತೇವೆ: ‘ಭಾರತೀಯ ಕಂಪೆ‌ನಿಗಳು ಅಮೆರಿಕದಲ್ಲಿ ಮಾಡಿರುವ ಹೂಡಿಕೆಗಳಿಗೆ ನಾವು ಬೆಲೆ ಕೊಡುತ್ತೇವೆ. ಜತೆಗೆ, ಎರಡೂ ದೇಶಗಳ ನಡುವಿನ ವ್ಯಾಪಾರ ಸಂಬಂಧ ಯಾವತ್ತೂ ಬಲಿಷ್ಠವಾಗಿರುವಂತೆ ನೋಡಿಕೊಳ್ಳುತ್ತೇವೆ’ ಎಂದು ಅಮೆರಿಕ ಮಂಗಳವಾರ ಹೇಳಿದೆ.  ಹೊಸ ವೀಸಾ ನೀತಿಯಲ್ಲಿ ಏನಾದರೂ ಬದಲಾವಣೆ ತರಲು ಸಾಧ್ಯವೇ ಎಂಬುದನ್ನು ಪರಿಶೀಲಿಸುತ್ತೇವೆ ಎಂದಿದೆ. ಭಾರತದ ಐಟಿ ಕಂಪೆನಿಗಳಾದ ಇನ್ಫೋಸಿಸ್‌, ಟಿಸಿಎಸ್‌ ಮತ್ತು ಕಾಗ್ನೆಜೆಂಟ್‌ ವಿರುದ್ಧ ಕಿಡಿಕಾರಿದ್ದ ಶ್ವೇತಭವನ, ಎಚ್‌1ಬಿ ವೀಸಾದ ಲಾಟರಿ ವ್ಯವಸ್ಥೆಯ ಲ್ಲಿ ಹೆಚ್ಚುವರಿ ಟಿಕೆಟ್‌ ಹಾಕಿ ವೀಸಾದ ಸಿಂಹಪಾಲನ್ನು ಪಡೆಯಲು ಯತ್ನಿಸಿವೆ ಎಂದು ಆರೋಪಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next