Advertisement

ಭಕ್ತಿಯಿದ್ದಡೆ ಭಗವಂತ: ಕಾಶಿ ಜಗದ್ಗುರು

11:02 AM Mar 20, 2018 | Team Udayavani |

ವಾಡಿ: ಶ್ರದ್ಧಾ ಭಕ್ತಿಯಿಂದ ಪೂಜಿಸುವ ಸ್ಥಳದಲ್ಲಿ ದೇವರಿದ್ದಾನೆ. ಪಾಪ ಕರ್ಮಗಳ ಪ್ರಾಯಾಶ್ಚಿತಕ್ಕೆ ಗುರುಕೃಪೆಯೇ ಮದ್ದು ಎಂದು ಕಾಶಿ ಜಗದ್ಗುರು ಶ್ರೀ ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ನುಡಿದರು.

Advertisement

ಕೊಲ್ಲೂರ ಗ್ರಾಮದ ಐತಿಹಾಸಿಕ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ 12 ಜ್ಯೋತೀರ್ಲಿಂಗಗಳ ಪ್ರತಿಷ್ಠಾಪನಾ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಬೆಳಗಿನ ಪೂಜೆ ಶಿವನ ಸಾನ್ನಿಧ್ಯಕ್ಕೆ ಅರ್ಪಿಸುವುದು ನಿತ್ಯದ ಕಾಯಕವಾಗಬೇಕು. ಶಿವಲಿಂಗದ ದರ್ಶನ ಶಿವನ ಒಲಿಕೆಗೆ ಮಾರ್ಗವಾಗಿದೆ. ನಿಶ್ಚಲವಾದ ಪಾವಿತ್ರ್ಯದ ಮನಸ್ಸು ಶಿವನಿಗೆ ನೈವೇದ್ಯ. ಧರ್ಮ ಸಂಸ್ಕಾರ ಜಾಗೃತಿಯಿಂದ ಸಮಾಜದ ಪ್ರಗತಿ ಸಾಧ್ಯವಿದೆ. ಬದುಕಿನಲ್ಲಿ ಆಧ್ಯಾತ್ಮದ ಚಿಂತನೆ ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಮನಸ್ಸುವ ಕಟ್ಟುವ ಕಾರ್ಯ ಮಾಡಬೇಕಾದವರು ಒಡೆಯಲು ನಿಲ್ಲಬಾರದು. ಧರ್ಮದ ವಿಚಾರಗಳನ್ನು ಎತ್ತಿ ಹಿಡಿದು ಮನುಷ್ಯ ಪ್ರೀತಿಗೆ ಪಾತ್ರರಾಗಬೇಕು. ದೇವಾಲಯಗಳು ಭಕ್ತಿಯ ಪ್ರತೀಕ. ದೇವರ ಮಹಾಶಕ್ತಿಯನ್ನೇ ನಂಬಿ ಬದುಕುವ ಕಟ್ಟುತ್ತಿರುವ ಕೋಟ್ಯಂತರ ಜನಕ್ಕೆ ಜೀವಪರ ಸಂಸ್ಕಾರ ನೀಡುವುದು ಧರ್ಮ ಸಿದ್ಧಾಂತವಾಗಿದೆ. 

ಎಲ್ಲರನ್ನೂ ಒಂದುಗೂಡಿಸಿಕೊಂಡು ಹೋಗುವುದು ಮಾನವ ಧರ್ಮವಾಗಿದೆ. ಚಿಂತನೆಗಳ ಹೆಸರಿನಲ್ಲಿ ಧರ್ಮ ಒಡೆಯುವ ಹುನ್ನಾರ ನಡೆದಿದ್ದು, ಎಚ್ಚರವಾಗಿರಬೇಕು ಎಂದು ನುಡಿದರು. ಗ್ರಾಮದಲ್ಲಿ ಕಾಶಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಸಂಭ್ರಮದಿಂದ ನಡೆಯಿತು. 

Advertisement

ಶ್ರೀರಾಮಲಿಂಗೇಶ್ವರ ದೇವಸ್ಥಾನದಲ್ಲಿ ಐದು ದಿನಗಳಿಂದ ಕಾಶಿ ಸ್ವಾಮೀಜಿಗಳ ತಂಡದಿಂದ ಹೋಮ, ಹವನ, ಯಾಗಗಳು ನಡೆಸಿ 12 ಜ್ಯೋತೀರ್ಲಿಂಗ ಹಾಗೂ ನವಗೃಹಗಳ ಪ್ರತಿಷ್ಠಾಪನೆ ನಡೆಯಿತು. ಮುಸ್ಲಿಂ ಸಮುದಾಯಕ್ಕೆ ಸೇರಿದ ಕೊಲ್ಲೂರ ಗ್ರಾಮದ ಭಾಷುಮಿಯ್ನಾ ದಿಡ್ಡಿಮನಿ ಎಂಬ ಭಕ್ತ ಕಾಶಿಯಿಂದ ಶಿವಲಿಂಗ ಹೊತ್ತು ತಂದು ಭಕ್ತಿ ಮೆರೆದರು. ಕಾಶಿ ಜಗದ್ಗುರುಗಳ ಪಾದ ಪೂಜೆ ಮಾಡಿ ಗಮನ ಸೆಳೆದರು. 

ಮುಖಂಡರಾದ ಲಿಂಗಾರೆಡ್ಡಿಗೌಡ ಬಾಸರೆಡ್ಡಿ, ಶರಣಗೌಡ ಹಿರೆಡ್ಡಿ, ಶರಣು ಸಾಹುಕಾರ ಬಿರಾಳ, ಸಂಗಾರೆಡ್ಡಿ ಹೋತಪೇಟೆ, ಲಿಂಗಾರೆಡ್ಡಿಗೌಡ ಪೊಲೀಸ್‌ಪಾಟೀಲ, ಸಾಹೇಬಗೌಡ ಪೊಲೀಸ್‌ ಪಾಟೀಲ, ಶಿವುಕುಮಾರ ಪೂಜಾರಿ, ಶಾಂತಿನಾಥ ಹಿರೇಗೌಡ, ರಾಚಯ್ಯಸ್ವಾಮಿ ನಪುರಿ, ಕುಬೇಂದ್ರರೆಡ್ಡಿ ಕರೆಡ್ಡಿ, ಸಿದ್ದಣ್ಣ ಕುಲಕುಂದಿ, ಶರಣಗೌಡ ಕರೆಡ್ಡಿ, ಮಲ್ಲಿನಾಥ ಪೂಜಾರಿ, ಪ್ರವೀಣರೆಡ್ಡಿ ತಿಪ್ಪರೆಡ್ಡಿ, ಕೃಷ್ಣಾರೆಡ್ಡಿ ಈರೆಡ್ಡಿ, ಭಾಷುಮಿಯ್ನಾ ದಿಡ್ಡಿಮನಿ, ರುದ್ರುಗೌಡ ಯಾಳಗಿ, ಅರುಣಕುಮಾರ ಕುಡುಗುಂಟಿ, ಪ್ರವೀಣಕುಮಾರ
ಜೀರ್‌, ಶಂಕ್ರು ದೇಸಾಯಿ ಸೇರಿದಂತೆ ಸಾವಿರಾರು ಜನ ಗ್ರಾಮಸ್ಥರು ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next