Advertisement

ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಪಿಂಕಿ ಎಲ್ಲಿ?

01:55 PM Sep 21, 2020 | Suhan S |

ಯುವ ನಿರ್ದೇಶಕ ಪೃಥ್ವಿಕೋಣನೂರ್‌ ಚಿತ್ರಕಥೆ ಬರೆದು ನಿರ್ದೇಶಿಸಿರುವ “ಪಿಂಕಿ ಎಲ್ಲಿ?’ ಚಿತ್ರ “22ನೇ ಮುಂಬೈ ಫಿಲಂ ಫೆಸ್ಟಿವಲ್‌’ನಲ್ಲಿ “ಇಂಡಿಯಾ ಗೋಲ್ಡ್‌’ ವಿಭಾಗದಿಂದ ಅಧಿಕೃತವಾಗಿ ನಾಮ ನಿರ್ದೇಶನಗೊಂಡಿದೆ.

Advertisement

“ಸಪ್ತಗಿರಿ ಕ್ರಿಯೇಶನ್ಸ್‌’ ಬ್ಯಾನರ್‌ ಅಡಿಯಲ್ಲಿಕೃಷ್ಣೇಗೌಡ ನಿರ್ಮಾಣದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಅಕ್ಷತಾ ಪಾಂಡವಾಪುರ, ಗುಂಜಲಮ್ಮ, ದೀಪಕ್‌ ಸುಬ್ರಮಣ್ಯ, ಸಂಗಮ್ಮ, ಅನೂಪ್‌, ರಾಮಚಂದ್ರ ಮೊದಲಾದಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

“ಪಿಂಕಿ ಎಲ್ಲಿ?’ ಚಿತ್ರಕ್ಕೆ ಅರ್ಜುನ್‌ ರಾಜಾ ಆರ್‌. ಛಾಯಾಗ್ರಹಣ, ಶಿವಕುಮಾರ್‌ ಸ್ವಾಮಿ. ಎಸ್‌ ಸಂಕಲನವಿದೆ. ಮತ್ತೂಂದೆಡೆ “ಪಿಂಕಿ ಎಲ್ಲಿ?’ ಚಿತ್ರ ದಕ್ಷಿಣ ಕೊರಿಯಾದ “ಬುಸಾನ್‌ ಇಂಟರ್‌ನ್ಯಾಶನಲ್‌ ಫಿಲಂ ಫೆಸ್ಟಿವಲ್‌ ‘ನಲ್ಲಿ ವರ್ಲ್ಡ್ ಪ್ರೀಮಿಯರ್‌ಗೂಆಯ್ಕೆಯಾಗಿದ್ದು, ಇದೇ ಅಕ್ಟೋಬರ್‌21 ರಿಂದ 30ರವರೆಗೆ ಚಿತ್ರ ಅಂತರಾಷ್ಟ್ರೀಯ ವೇದಿಕೆಯಲ್ಲಿ ಪ್ರದರ್ಶನವಾಗಲಿದೆ ಎಂದು ನಿರ್ಮಾಪಕಕೃಷ್ಣೇಗೌಡ ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next