ಕೋಲ್ಕತಾ : ಮೋರ್ಬಿ ಸೇತುವೆ ಅವಘಡದಲ್ಲಿ ಜೀವ ಕಳೆದುಕೊಂಡವರಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬುಧವಾರ ಸಂತಾಪ ಸೂಚಿಸಿದ್ದಾರೆ.
“ರಾಜಕೀಯಕ್ಕಿಂತ ಜನರ ಜೀವನ ಮುಖ್ಯವಾದ ಕಾರಣ ನಾನು ಅದರ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ನಾನು ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಅನೇಕರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಇನ್ನೂ ಕಾಣೆಯಾಗಿದ್ದಾರೆ. ಮೊರ್ಬಿ ಘಟನೆಯ ಬಗ್ಗೆ ತನಿಖೆ ಮಾಡಲು ಸುಪ್ರೀಂ ಕೋರ್ಟ್ ಅಡಿಯಲ್ಲಿ ನ್ಯಾಯಾಂಗ ಆಯೋಗವನ್ನು ಮಾಡಬೇಕು” ಎಂದು ಒತ್ತಾಯಿಸಿದರು.
ಜಾರಿ ನಿರ್ದೇಶನಾಲಯ (ಇಡಿ) ಮತ್ತು ಸೆಂಟ್ರಲ್ ಬ್ಯೂರೋ ಆಫ್ ಇಂಡಿಯಾ (ಸಿಬಿಐ) ಯನ್ನು ತರಾಟೆಗೆ ತೆಗೆದುಕೊಂಡ ಮಮತಾ, “ಇಡಿ ಮತ್ತು ಸಿಬಿಐ ಮೋರ್ಬಿ ಘಟನೆಯಲ್ಲಿ ಭಾಗಿಯಾಗಿರುವ ಅಪರಾಧಿಗಳ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ. ಅವರು ಸಾಮಾನ್ಯ ಜನರ ವಿರುದ್ಧ ಮಾತ್ರ ಕ್ರಮ ತೆಗೆದುಕೊಳ್ಳುತ್ತಾರೆ. ಉತ್ತರದಾಯಿತ್ವ ಇರಬೇಕು ಎಂದು ಕಿಡಿ ಕಾರಿದರು.
“ನಾನು ಪ್ರಧಾನಿಯ ಬಗ್ಗೆ ಏನನ್ನೂ ಮಾತನಾಡುವುದಿಲ್ಲ ಏಕೆಂದರೆ ಅದು ಅವರ ರಾಜ್ಯವಾಗಿದೆ .ನಾನು ರಾಜಕೀಯದ ಬಗ್ಗೆ ಏನನ್ನೂ ಮಾತನಾಡುವುದಿಲ್ಲ” ಎಂದು ಅವರು ಹೇಳಿದರು.
ಮೋರ್ಬಿ ಸೇತುವೆ ಕುಸಿತದ ದುರಂತದಲ್ಲಿ ಇದುವರೆಗೆ ಕನಿಷ್ಠ 135 ಜನರು ಅಸುನೀಗಿದ್ದು, ಮತ್ತು 170 ಜನರನ್ನು ರಕ್ಷಿಸಲಾಗಿದೆ.