ಜಾದೂ ಎಂದರೆ ಏನಾದರೂ ಒಂದು ವಸ್ತುವನ್ನು ಮಾಯ ಮಾಡಲೇಬೇಕು. ಅಷ್ಟರಮಟ್ಟಿಗೆ ಮಾಯ ಮಾಡುವ ಮ್ಯಾಜಿಕ್ ಎಂದರೆ ಪ್ರೇಕ್ಷಕರು ಮುಗಿಬೀಳುತ್ತಾರೆ. ಅದರಲ್ಲೂ ಮಕ್ಕಳು ಕಣ್ಮುರೆಪ್ಪೆ ಮುಚ್ಚದೆ ಆಸಕ್ತಿ ಮತ್ತು ಕುತೂಹಲದಿಂದ ಜಾದೂ ಪ್ರದರ್ಶನವನ್ನು ವೀಕ್ಷಿಸುತ್ತಾರೆ. ಅಂಥ ಒಂದು ಮ್ಯಾಜಿಕ್ ಇಲ್ಲಿದೆ. ಇದು ಕಾಯಿನ್ ಮಾಯ ಮಾಡುವ ಮ್ಯಾಜಿಕ್!
ಬೇಕಾಗುವ ವಸ್ತುಗಳು: ಕಾಯಿನ್, ಫೆವಿಕ್ವಿಕ್
ಪ್ರದರ್ಶನ: ಒಂದು ಕಾಯಿನ್‌ಅನ್ನು ಜಾದೂಗಾರ ಕೈಯಲ್ಲಿ ಹಿಡಿದು ಪ್ರದರ್ಶಿಸುತ್ತಾನೆ. ನಂತರ ಮುಷ್ಠಿ ಹಿಡಿದು ಕಾಯಿನ್ ಒಳಗೆ ಹೋಗುವಷ್ಟು ಗ್ಯಾಪ್ ಬಿಟ್ಟುಕೊಳ್ಳುತ್ತಾನೆ. ನಂತರ ನಿಧಾನಕ್ಕೆ ಕಾಯಿನ್‌ಅನ್ನು ಮುಷ್ಠಿಯ ಒಳಗೆ ತೂರಿಸುತ್ತಾನೆ. ನಂತರ ಮಂತ್ರವನ್ನು ಉಚ್ಚರಿಸಿ ಎರಡೂ ಕೈಗಳನ್ನು ಪ್ರೇಕ್ಷಕರ ಮುಂದೆ ಹಿಡಿಯುತ್ತಾನೆ. ಕಾಯಿನ್ ಮಾಯವಾಗಿರುತ್ತೆ!
ತಯಾರಿ: ಈ ಜಾದೂವಿನ ರಹಸ್ಯ ಅಡಗಿರುವುದು ಮುಷ್ಠಿ ಹಿಡಿವ ಕೈಗಳಲ್ಲಿ. ಆ ಕೈನ ಮೇಲ್ಭಾಗದಲ್ಲಿ ಫೆವಿಕ್ವಿಕ್ ಅನ್ನು ಸ್ವಲ್ಪ ಹೆಚ್ಚಾಗಿಯೇ ಹಚ್ಚಿಕೊಂಡಿರಬೇಕು. ಇನ್ನೊಂದು ತಂತ್ರ ಅಡಗಿರುವುದು ಕೊನೆಯಲ್ಲಿ ಕೈಗಳನ್ನು ಪ್ರೇಕ್ಷಕರ ಮುಂದೆ ಹಿಡಿಯುವ ಭಂಗಿಯಲ್ಲಿ. ಮೊದಲು ಜಾದೂಗಾರ ಕಾಯಿನ್ ಅನ್ನು ಮುಷ್ಠಿಯ ಒಳಗೆ ತೂರಿಸಿ ಪ್ರೇಕ್ಷಕರಿಗೆ ಒಮ್ಮೆ ತೋರಿಸುತ್ತಾನೆ. ಪ್ರೇಕ್ಷಕರು ಕಾಯಿನ್ ಒಳಗೆ ಇದೆ ಎಂದುಕೊಳ್ಳುವಷ್ಟರಲ್ಲಿ ಕಾಯಿನ್‌ಅನ್ನು ಇನ್ನೂ ಒಳಗೆ ತೂರಿಸುವ ನೆಪದಲ್ಲಿ ಬೆರಳು ತೂರಿ ಯಾರಿಗೂ ಕಾಣದಂತೆ ಹೊರಕ್ಕೆಳೆದು ಅದನ್ನು ಅದೇ ಕೈನ ಮೇಲ್ಭಾಗದಲ್ಲಿ ಹಚ್ಚಿರುವ ಫೆವಿಕ್ವಿಕ್‌ವೆುಲೆ ಅಂಟಿಸಿಬಿಡಿ. ಇದು ಕ್ಷಣಮಾತ್ರದಲ್ಲಿ ಆಗಬೇಕಾದ ಕೆಲಸ. ನಂತರ ಕೈಗಳನ್ನು ತೋರಿಸುವಾಗ ಅಂಗೈ ಮಾತ್ರ ಕಾಣುವಂತೆ ತೋರಿಸಿ. ಆಗ ಹಿಂದೆ ಕಾಯಿನ್ ಅಂಟಿಸಿದ್ದು ಕಾಣುವುದಿಲ್ಲ.
ವಿನ್ಸೆಂಟ್ ಲೋಬೊ