Advertisement

ಅಗ್ನಿ ದುರಂತ: ಬಿಎಂಸಿ ಎಚ್ಚರವಾಗೋದು ಯಾವಾಗ? ಶಿವಸೇನೆಗೆ ಬಿಜೆಪಿ

03:08 PM Dec 29, 2017 | Team Udayavani |

ಮುಂಬಯಿ : ಮುಂಬಯಿಯ ಕಮಲಾ ಮಿಲ್ಸ್‌ ಕಟ್ಟಡದಲ್ಲಿ 14 ಮಂದಿಯನ್ನು ಬಲಿಪಡೆದಿರುವ ಭೀಕರ ಅಗ್ನಿ ಅವಘಡಕ್ಕೆ ಕಾರಣರು ಯಾರು ಎಂಬ ಬಗ್ಗೆ ಈಗ ಆರೋಪ-ಪ್ರತ್ಯಾರೋಪಗಳ ನಿರ್ಲಜ್ಜ   ಮಾತಿನ ಕಾಳಗ ರಾಜಕೀಯ ಪಕ್ಷಗಳ ನಡುವೆ ಆರಂಭಗೊಂಡಿದೆ.

Advertisement

ಇದು ನಿಜಕ್ಕೂ ದುರದೃಷ್ಟಕರ ಘಟನೆ ಎಂದು ಹೇಳಿರುವ ಬಿಜೆಪಿಯ ಸಂಸದ ಕಿರೀಟ್‌ ಸೋಮಯ್ಯ ಬೃಹನ್‌ ಮುಂಬಯಿ ಮುನಿಸಿಪಲ್‌ ಕಾರ್ಪೊರೇಶನ್‌ ನಡೆಸುತ್ತಿರುವ ಶಿವಸೇನೆಯೇ ಈ ದುರ್ಘ‌ಟನೆಗೆ ಕಾರಣ ಎಂದು ದೂರಿದ್ದಾರೆ. ಭದ್ರತಾ ಲೋಪವೇ ಈ ದುರಂತಕ್ಕೆ ಹೇತು ಎಂದವರು ಟೀಕಿಸಿದ್ದಾರೆ.

“ಎರಡೇ ವಾರಗಳ ಅವಧಿಯೊಳಗೆ ನಡೆದಿರುವ ಎರಡನೇ ಭೀಕರ ಅಗ್ನಿ ದುರಂತ ಇದಾಗಿದ್ದು ಕಮಲಾ ಮಿಲ್ಸ್‌ ಬೆಂಕಿಯಲಿ 14 ಜೀವಗಳು ಬೆಂದು ಹೋಗಲು ಬಿಎಂಸಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೇ ಕಾರಣ ಎಂದು ಸೋಮಯ್ಯ ಹೇಳಿದ್ದಾರೆ.

ಕಮಲಾ ಮಿಲ್ಸ್‌ ಆವರಣದೊಳಗೆ ಹಲವು ಅನಧಿಕೃತ ಕಾನೂನು ಬಾಹಿರ ಅಂಗಡಿಗಳು ಇದ್ದವು. ಇವುಗಳಲ್ಲಿ ಕೆಲವನ್ನು ಈಚೆಗಷ್ಟೇ ಸಕ್ರಮಗೊಳಿಸಲಾಗಿದೆ. ಬೆಂಕಿ ಸಂಭವಿಸಿದ ಸ್ಥಳ ಕೂಡ ಕಾನೂನು ಬಾಹಿರವಾಗಿತ್ತು ಎಂದು ಸೋಮಯ್ಯ ಹೇಳಿದರು.

ಮುಂಬಯಿ ಬೆಂಕಿ ಅವಘಡವನ್ನು ಅನುಸರಿಸಿ ಲೋಕಸಭೆಯಲ್ಲಿಂದು ಸೋಮಯ್ಯ ಮತ್ತು ಶಿವಸೇನೆಯ ಅರವಿಂದ ಸಾವಂತ್‌ ವಾದ – ಪ್ರತಿವಾದಕ್ಕೆ ಇಳಿದರು. 

Advertisement

ಈ ದುರ್ಘ‌ಟನೆ ಬಗ್ಗೆ ರಾಜ್ಯ ಸರಕಾರ ಮತ್ತು ಬಿಎಂಸಿ ಖಂಡಿತವಾಗಿಯೂ ತನಿಖೆ ನಡೆಸಲಿವೆ ಮತ್ತು ತಪ್ಪುಗಾರರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಲಿದೆ ಎಂಬ ವಿಶ್ವಾಸ ನಮಗಿದೆ. ಅಂತೆಯೇ ರಾಜ್ಯ ಸರಕಾರ ತನಿಖೆಗೆ ಆದೇಶಿಸಿದೆ ಎಂದು ಕೇಂದ್ರ ಸಹಾಯಕ ಸಚಿವ ಹಂಸರಾಜ್‌ ಆಹಿರ್‌ ಹೇಳಿದರು.

ದುರ್ಘ‌ಟನೆ ಬಗ್ಗೆ ತೀವ್ರ ಶೋಕ, ಆಘಾತ ವ್ಯಕ್ತಪಡಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಅವರು “ತನಿಖೆಗೆ ಆದೇಶಿಸಲಾಗಿದೆ’ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next