Advertisement
ಇಲ್ಲಿ ಸೇತುವೆಯ ಮಧ್ಯ ಭಾಗ ತಗ್ಗಾಗಿರುವುದರಿಂದ ಹಾಗೂ ನೀರು ಹೊರಗಡೆ ಹೋಗಲು ಸರಿಯಾದ ವ್ಯವಸ್ಥೆ ಇಲ್ಲದಿರುವುದರಿಂದ ಹೊಂಡಗಳು ಸೃಷ್ಟಿಯಾಗುತ್ತದೆ. ಕಳೆದ ವರ್ಷ ರಸ್ತೆ ದುರಸ್ತಿಗೊಳಿಸುವ ಸಂದರ್ಭ ಡಾಮರೀಕರಣ ಕೈಗೊಂಡರೂ ಈ ಬಾರಿ ಸಮಸ್ಯೆ ಮುಂದುವರಿದಿದೆ.
ಸಮಸ್ಯೆಯ ವಿರುದ್ಧ ಕಳೆದ ವರ್ಷ ಸ್ಥಳೀಯರು ಗಿಡ ನೆಡುವ ಮೂಲಕ ಪ್ರತಿಭಟನೆ ನಡೆಸಿದ್ದರು. ಈ ಬಾರಿ ಕೂಡ ಪ್ರತಿಭಟನೆಗೆ ಸಿದ್ಧತೆ ನಡೆಯುತ್ತಿದ್ದು, ಆದಷ್ಟು ಶೀಘ್ರ ಇದರ ದುರಸ್ತಿ ಕುರಿತು ಕ್ರಮಕೈಗೊಳ್ಳಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.