Advertisement

“ಭಗವಂತನ ಸಂದೇಶ ಅಳವಡಿಸಿಕೊಂಡಾಗ ನೆಮ್ಮದಿ’

06:20 AM Jul 30, 2017 | |

ನೀರ್ಚಾಲು: ಎಲ್ಲ ಧರ್ಮಗಳ ಸಾರವೂ ಧರ್ಮ ನ್ಯಾಯ ನಿಷ್ಠೆಗಳ ಬದುಕನ್ನು ಸವೆಸುವುದೇ ಆಗಿದೆ. ಭಗವಂತನ ಸಂದೇಶಗಳನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಂಡಾಗ ಜೀವನದಲ್ಲಿ ನೆಮ್ಮದಿ ಸಾಧ್ಯ ಎಂದು ಬೇಳ ಇಗರ್ಜಿಯ ಧರ್ಮಗುರುಗಳಾದ ಅತೀ ವಂ| ವೆಲೇರಿಯನ್‌ ಫ್ರಾಂಕ್‌ ಹೇಳಿದರು.

Advertisement

ಅವರು ಆರ್ಟ್‌ ಆಫ್‌ ಲಿವಿಂಗ್‌ ನೀರ್ಚಾಲು ಘಟಕದ ನೇತೃತ್ವದಲ್ಲಿ ಬೇಳ ವಿ.ಎಂ. ಆಡಿಟೋರಿಯಂನಲ್ಲಿ ಆರಂಭ ಗೊಂಡ ಭಗವದ್ಗೀತಾ ಜ್ಞಾನ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಇಂದು ಸಚ್ಚಾರಿತ್ರÂದ ಸಂದೇಶಗಳ ಅರಿವಿನ ಕೊರತೆ ಯುವಜನಾಂಗದಲ್ಲಿ ಕಾಣುತ್ತಿದೆ. ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಈ ನಿಟ್ಟಿನಲ್ಲಿ ಸಹಕಾರಿಯಾಗಿದೆ ಎಂದರು. 

ಆರ್ಟ್‌ ಆಫ್‌ ಲಿವಿಂಗ್‌ನ ಇಂಟರ್‌ ನ್ಯಾಶನಲ್‌ ಟೀಚರ್‌ ಸಜಿ ಯೂಸುಫ್‌ ನಿಸ್ಸಾನ್‌ ಅವರು ಗುರುವಾರದಿಂದ ರವಿವಾರದ ತನಕ ಪ್ರತೀ ದಿನ ಸಂಜೆ 6ರಿಂದ 8.30ರ ತನಕ ಭಗವದ್ಗೀತೆಯ ಸಾರವನ್ನು ನಿತ್ಯ ಜೀವನದಲ್ಲಿ ಯಾವ ರೀತಿ ಅಳವಡಿಸಿಕೊಳ್ಳಬೇಕು ಎಂಬ ಸಂದೇಶವನ್ನು ನೀಡುತ್ತಿದ್ದಾರೆ.

ಉದ್ಘಾಟನಾ ಸಮಾರಂಭದಲ್ಲಿ ಬದಿಯಡ್ಕ ಗ್ರಾಮ ಪಂಚಾಯತ್‌ ಅಧ್ಯಕ್ಷ ಕೆ.ಎನ್‌. ಕೃಷ್ಣ ಭಟ್‌, ಆರ್ಟ್‌ ಆಫ್‌ ಲಿವಿಂಗ್‌ನ ಐ.ನಾರಾಯಣ ಮಾಸ್ಟರ್‌, ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಜಯದೇವ ಖಂಡಿಗೆ, ಕೌಮುದಿ ನೇತ್ರಚಿಕಿತ್ಸಾಲಯದ ಡಾ| ಸುನಿಲ್‌, ವಿ.ಎಂ. ಆಡಿಟೋರಿಯಂನ ಮಾಲಕ ವಸಂತ ರೈ ಬೇಳ, ಸುಮೇರು ಸಂಧ್ಯಾದ ಸಂಚಾಲಕ ಮನೋಜ್‌ ಉಪಸ್ಥಿತರಿದ್ದು ಶುಭಾಶಂಸನೆಗೈದರು. ರವಿ ಮೆಣಸಿನಪಾರೆ ಅವರು ಸ್ವಾಗತಿಸಿದರು. ಗಣೇಶ್‌ ನೀರ್ಚಾಲು ಅವರು ವಂದಿಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next