ಹರಿಹರ: ನನ್ನ ಯೋಗ್ಯತೆ ಪ್ರಶ್ನಿಸಿದರೆ, ಹಗುರವಾಗಿ ಮಾತನಾಡಿದರೆ 30 ವರ್ಷದ ನಿಮ್ಮ ಚಾರಿತ್ರ್ಯ ಹರಣ ಮಾಡಬೇಕಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಎಸ್.ರಾಮಪ್ಪ ಮಾಜಿ ಸಚಿವ ಡಾ|ವೈ.ನಾಗಪ್ಪನವರಿಗೆ ಎಚ್ಚರಿಸಿದರು. ನಗರದ ಎಸ್.ಎಸ್.ಕೆ. ಕಲ್ಯಾಣಮಂಟಪದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ನಡಿಗೆ ಸ್ವರಾಜ್ಯದ ಕಡೆಗೆ ಹಾಗೂ ಜನವೇದನಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಸೋಮವಾರದ ಕಿಸಾನ್‌ಸಭೆಯಲ್ಲಿ ಡಾ|ವೈ.ನಾಗಪ್ಪ ತಮ್ಮ ಬಗ್ಗೆ ಆಡಿದ ಮಾತುಗಳಿಗೆ ತೀಕ್ಷ ¡ವಾಗಿ ತಿರುಗೇಟು ನೀಡಿದರು. ಮುಂಚಿನಿಂದಲೂ ವೈ.ನಾಗಪ್ಪ ನನ್ನನ್ನು ಟೀಕಿಸುತ್ತಲೇ ಬಂದಿದ್ದರೂ ಹಿರಿಯರೆಂದು ಸುಧಾರಿಸಿಕೊಂಡಿದ್ದೆ, ಆದರೆ ಅವರು ಮಿತಿ ಮೀರಿ ನನ್ನ ಯೋಗ್ಯತೆ ಪ್ರಶ್ನಿಸಿ, ತುತ್ಛವಾಗಿ ಮಾತನಾಡಿದರೆ ಸಹಿಸಲಾಗದು.
ಅವರ 30ವರ್ಷದ ಚಾರಿತ್ರ್ಯ ಎಂತದ್ದು ಎಂಬುದನ್ನು ನಾನು ಸಹ ಬಹಿರಂಗಪಡಿಸಬೇಕಾಗುತ್ತದೆ ಎಂದರು. ದಶಕಗಟ್ಟಲೇ ನಾನು ನಾಗಪ್ಪನವರ ಹಿಂಬಾಲಕನಾಗಿ ದುಡಿದಿದ್ದೇನೆ. ಅವರು ಪಕ್ಷದ ಟಿಕೆಟ್ ತರುವಲ್ಲಿ ನಮ್ಮ ಶ್ರಮವೂ ಇದೆ. ಚುನಾವಣೆಯಲ್ಲೂ ಹಗಲಿರುಳು ಶ್ರಮಿಸಿ ಅವರನ್ನು ಗೆಲ್ಲಿಸಿ, ಖುಷಿಪಟ್ಟಿದ್ದೇವೆ. ನಾಗಪ್ಪರ ರಾಜಕೀಯ ಏಳ್ಗೆಯಲ್ಲಿ ನನ್ನತೆ ಅನೇಕರ ತ್ಯಾಗ, ಪ್ರಯತ್ನವಿದೆ. ಅದನ್ನವರು ಮರೆಯಬಾರದು ಎಂದರು.
ಕಳೆದ ಚುನಾವಣೆಯಲ್ಲಿ ನಾಗಪ್ಪ ಪ್ರಚಾರಕ್ಕೆ ಬರದಿದ್ದರೂ 42 ಸಾವಿರ ಮತ ಗಳಿಸಿ 2ನೇ ಸ್ಥಾನ ಪಡೆದದ್ದು ನನ್ನ ಜನಬೆಂಬಲಕ್ಕೆ ಸಾಕ್ಷಿ. ಸೋತರೂ ನಿರಂತರವಾಗಿ ಪಕ್ಷ ಸಂಘಟನೆ ಮಾಡಿದ್ದಲ್ಲದೇ, ಕಳೆದ 4 ವರ್ಷಗಳಿಂದ ತಾಲೂಕಿನಾದ್ಯಂತ ಸಾವಿರಾರು ಜನರಿಗೆ ಸರ್ಕಾರಿ ಸೌಕರ್ಯ ದೊರಕಿಸಿಕೊಟ್ಟಿದ್ದೇನೆ. ಯಾರೇನೆ ಹೇಳಿದರೂ ಪಕ್ಷದ ನನಗೆ ಟಿಕೆಟ್ ಸಿಗುವುದು ಹಾಗೂ ಕ್ಷೇತ್ರದ ಮತದಾರರು ನನ್ನನ್ನೆ ಗೆಲ್ಲಿಸುವುದು ನಿಶ್ಚಿತವಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ, ಪಕ್ಷದಲ್ಲಿ ಬೇಕಾಬಿಟ್ಟಿ ಟಿಕೆಟ್ ನೀಡುವ ಪದ್ಧತಿಯಿಲ್ಲ. ತಾಲೂಕಿನ ಕಾರ್ಯಕರ್ತರು,ಜಿಲ್ಲಾ ಮುಖಂಡರ ಅಭಿಪ್ರಾಯ, ಅಭ್ಯಥಿಗಳ ಹಿನ್ನೆಲೆ, ಸಾಧನೆ ಅವಲೋಕಿಸಲಾಗುತ್ತದೆ. ಎಸ್. ರಾಮಪ್ಪ ಚುನಾವಣೆಯಲ್ಲಿ ಸೋತರೂ ಗೆದ್ದವರಷ್ಟೇ ಕ್ರಿಯಾಶೀಲವಾಗಿ ಪಕ್ಷದ, ಜನಸಾಮಾನ್ಯರ ಕೆಲಸಮಾಡುತ್ತಿದ್ದಾರೆ ಎಂದರು.
ನಗರ ಕಾಂಗ್ರೆಸ್ ಅಧ್ಯಕ್ಷ ಡಿ.ಜಿ.ರಘುನಾಥ್ ಮಾತನಾಡಿ, ಎಸ್.ರಾಮಪ್ಪಗೆ ಟಿಕೆಟ್ ತಪ್ಪಿಸಲು ಕೆಲವರು ಒಳಸಂಚು ನಡೆಸಿದ್ದು, ನಿನ್ನೆಯ ಸಭೆ ಅದರ ಭಾಗವಾಗಿದೆ. ಇಷ್ಟು ದಿನ ಮನೆಯಲ್ಲಿದ್ದು, ಚುನಾವಣೆ ಸಮೀಪಿಸಿದಾಗ ಓಡಿ ಬರುವವರ ಯೋಗ್ಯತೆಗೆ ಏನೆನ್ನುತ್ತಾರೆ ಎಂದು ಪ್ರಶ್ನಿಸಿದ ಅವರು, ತಾಲೂಕಿನಾದ್ಯಂತ ಪಕ್ಷದ ಕಾರ್ಯಕರ್ತರು, ಜನರು ಎಸ್.ರಾಮಪ್ಪರೆ ಕಾಂಗ್ರೆಸ್ ಮುಖಂಡರೆಂದು ಒಪ್ಪಿಕೊಂಡಾಗಿದೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ಅಬಿದಲಿ, ನಗರಸಭೆ ಅಧ್ಯಕ್ಷೆ ಆಶಾ ಮರಿಯೋಜಿರಾವ್, ಸದಸ್ಯರಾದ ಶಂಕರ್ ಖಟಾವಕರ್, ಬಿ.ರೇವಣಸಿದ್ದಪ್ಪ, ರತ್ನಮ್ಮ, ನಿಂಬಕ್ಕ ಚಂದಾಪುರ್, ಎಸ್.ಎಂ.ವಸಂತ್, ಎಪಿಎಂಸಿ ಅಧ್ಯಕ್ಷ ಮಹದೇವಪ್ಪಗೌಡ, ಸದಸ್ಯರಾದ ಮಂಜುನಾಥ್ ಪಟೇಲ್, ಮುಖಂಡರಾದ ಡಿ.ಕುಮಾರ, ಎಚ್. ಎಚ್.ಬಸವರಾಜ್, ರಾಮಚಂದ್ರ ಕಲಾಲ್, ಬೆಣ್ಣೆಹಳ್ಳಿ ಹಾಲೇಶಪ್ಪ, ಎಲ್.ಬಿ.ಹನುಮಂತಪ್ಪ, ಕೆ.ಜಡಿಯಪ್ಪ, ಕುಂಬಳೂರು ವಿರೂಪಾಕ್ಷಪ್ಪ, ಜಿ.ವಿ.ವೀರೇಶ್, ಸಿ.ಎನ್.ಹುಲಿಗೇಶ್, ಬಿ.ಮಗುªಮ್ ಮತ್ತಿತತರಿದ್ದರು.