Advertisement
ಸುಮಾರು ತಿಂಗಳ ಹಿಂದೆ ಸ್ಥಳವನ್ನು ನಿಗದಿಪಡಿಸಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲಾಗಿದೆ. 2021-22 ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಸುಮಾರು 20 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿದೆ.
Related Articles
Advertisement
ಅಲ್ಲದೆ ಘಟಕ ಗ್ರಾಮದ ಆರಾಧ್ಯ ದೈವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ನಿರ್ಮಾಣ ಗೊಂಡಿದ್ದು, ಪ್ರತಿ ಶನಿವಾರ ಅತಿ ಹೆಚ್ಚು ಸಂಖ್ಯೆ ಯಲ್ಲಿ ಜನರು ದರ್ಶನ ಪಡೆಯಲು ಹೋಗುತ್ತಿದ್ದು, ಇದರಿಂದ ಜನರಿಗೆ ಕೂಡ ತುಂಬಾ ಸಮಸ್ಯೆ ಉಂಟಾಗುತ್ತಿದೆ.
ಎಂ. ಸೂಗೂರು ಗ್ರಾಪಂ ವ್ಯಾಪ್ತಿಯ ಮಣ್ಣೂರು ಗ್ರಾಮದಲ್ಲಿ ನಿರ್ಮಿಸಿರುವ ಸಮುದಾಯ ಭವನ ಹಾಗೂ ಗ್ರಂಥಾಲಯ ಉದ್ಘಾಟನೆ ಭಾಗ್ಯ ಕಾಣದೇ ನಿರುಪಯುಕ್ತವಾಗಿದೆ.
2021 -22 ನೇ ಸಾಲಿನ ಗ್ರಾಮ ವಿಕಾಸ್ ಯೋಜನೆ ಅಡಿಯಲ್ಲಿ ಭವನ ಅಂದಾಜು ಲಕ್ಷ ಗಟ್ಟಲೆ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಕಳೆದ ಎರಡು – ಮೂರು ತಿಂಗಳ ಹಿಂದೆ ಕಾಮಗಾರಿ ಪೂರ್ಣಗೊಂಡಿದ್ದರೂ ಅಧಿಕಾರಿಗಳ ಮತ್ತು ಜನಪ್ರತಿನಿದಿಗಳ ದೀರ್ಘ ಮೌನದಿಂದ ಕಟ್ಟಡ ಉದ್ಘಾಟನೆಗೊಳ್ಳುತ್ತಿಲ್ಲ.
ಇನ್ನೂ ಸರಕಾರ ಮಕ್ಕಳ ವಿದ್ಯಾಭ್ಯಾಸ ಕ್ಕೆ ಎಂದು ಪ್ರತಿ ಗ್ರಾಪಂ ಗೆ ಗ್ರಂಥಾಲಯ ನಿರ್ಮಿಸುತ್ತಿದ್ದು, ಇದರಿಂದ ಮಕ್ಕಳಿಗೆ ಉತ್ತಮ ತಿಳುವಳಿಕೆ ಹಾಗೂ ಹವ್ಯಾಸ, ವಿವಿಧ ವಿಚಾರಗಳು ತಿಳಿದುಕೊಳ್ಳಲು ಸಹಕರಿಯಾಗಲಿದೆ. ಇದಕ್ಕೆ ಸರಕಾರ ಹೆಚ್ಚಿನ ಆಸಕ್ತಿ ತೋರಿ ಕೂಡಲೇ ಅನುದಾನ ಮಂಜೂರು ಮಾಡಲು ಮುಂದಾದರು ಇಲ್ಲಿ ಮಾತ್ರ ಕಟ್ಟಡ ನಿರ್ಮಾಣ ವಾದರೂ ಉದ್ಘಾಟನೆ ಭಾಗ್ಯ ಸಿಗದೇ ಅನಾಥ ವಾಗಿದೆ ಇದರಿಂದ ಮಕ್ಕಳು ಪುಸ್ತಕ ಓದಲು, ಪತ್ರಿಕೆಗಳು ಓದಲು, ವಿಚಾರ ಗಳು ತಿಳಿದುಕೊಳ್ಳಲು ಪಕ್ಕದ ಊರಿಗೆ ಹೋಗಬೇಕಾಗಿದೆ.
ಉದ್ದೇಶ: ಸಮುದಾಯ ಭವನಜನರ ಸಾಂಸ್ಕೃತಿಕ ಮತ್ತು ಸಮಾಜದ ಕೆಲವೊಂದು ಕಾರ್ಯಕ್ರಮಗಳು ಏರ್ಪಡಿಸಲು ಆಯಾ ಪ್ರತಿಯೊಂದು ಸಮುದಾಯದವರಿಗೆ ಅನುಕೂಲವಾಗಲಿ ಎಂದು ನಿರ್ಮಾಣ ಮಾಡಲಾಗಿದ್ದರೂ ಸರಿಯಾದ ನಿರ್ವಹಣೆ ಮತ್ತು ಕೆಲ ಜನಪ್ರ ತಿನಿಧಿಗಳ ನಿರ್ಲಕ್ಷ್ಯದಿಂದ ಸಮುದಾಯ ಭವನ ಹಾಗೂ ಗ್ರಂಥಾಲಯ ಪಾಳು ಬೀಳುತ್ತಿವೆ. ಮೀನಮೇಷ
ಸರಕಾರಿ ವೆಚ್ಚದಲ್ಲಿ ಕಟ್ಟಡವೆಲ್ಲ ಪೂರ್ಣಗೊಳಿಸಲಾಗಿದೆ. ಆದರೆ ಅಧಿಕಾರಿಗಳು ಮತ್ತು ಜನಪ್ರತಿನಿದಿನಗಳು ಬಂದು ರಿಬ್ಬನ್ ಕಟ್ ಮಾಡಿದರೆ ಸಾಕು. ಅಂತಹ ಮುಹೂರ್ತ ಇನ್ನೂ ಕೂಡಿ ಬರುತ್ತಿಲ್ಲ. ಹೀಗಿದ್ದಾಗ ಎಷ್ಟು ಖರ್ಚು ಮಾಡಿ ಯಾವ ಕಟ್ಟಡ ನಿರ್ಮಿಸಿದರೆ ಏನು ಪ್ರಯೋಜನ ಎಂಬುದು ಸಮುದಾಯದ ಜನರ ಮಾತು. ಉತ್ತಮ ವಾತಾವರಣ
ಸಮು ದಾಯ ಭವನ ಹಾಗೂ ಗ್ರಂಥಾಲಯ ಹತ್ತಿರ ದೇವಸ್ಥಾನ ಇದ್ದು, ಸ್ವಚ್ಛಂದ ಮತ್ತು ಶಾಂತತೆಯಿಂದ ಕೂಡಿದೆ. ಉದ್ಘಾಟನೆ ಗೊಂಡರೆ ಸಮುದಾಯದ ಜನರಿಗೆ ಉಪಯೋಗವಾಗಲಿದೆ.ಆದ್ದರಿಂದ ಕೂಡಲೇ ಉದ್ಘಾಟನೆ ಮಾಡಿ ಸಮುದಾಯದ ಜನರಿಗೆ ಅನುಕೂಲ ಮಾಡಿಕೊಡಬೇಕಾಗಿದೆ. ಸಮುದಾಯ ಭವನ ಹಾಗೂ ಗ್ರಂಥಾಲಯ ಮತ್ತು ತ್ಯಾಜ್ಯ ವಿಲೇವಾರಿ ಘಟಕ ಕಾಮಗಾರಿ ಪೂರ್ಣಗೊಂಡು ತಿಂಗಳು ಗಳೆ ಕಳೆದಿದೆ. ಆದರೆ ಉದ್ಘಾಟನೆಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹಿಂದೆ – ಮುಂದೆ ನೋಡುತ್ತಿದ್ದು, ಗ್ರಾಪಂ ಸದಸ್ಯರುಗಳು ಸೇರಿ ನಾವು ಕೂಡ ಶಾಸಕರಿಗೆ ತಿಳಿಸಿದ್ದೇವೆ ಶೀಘ್ರದಲ್ಲೇ ಬಂದು ಉದ್ಘಾಟನೆ ಮಾಡಲಿದ್ದಾರೆ. ವೀರನಗೌಡ ಪಿಡಿಒ ಎಂ. ಸೂಗೂರು ಗ್ರಾಪಂ ಘಟಕ, ಭವನ, ಗ್ರಂಥಾಲಯ ಉದ್ಘಾಟನೆ ಮಾಡಬೇಡಿ ಅಂತ ನಾನು ಯಾರಿಗೂ ಹೇಳಿಲ್ಲ. ಈ ವಿಷಯ ಕೂಡ ನನಗೆ ಯಾರು ತಿಳಿಸಿಲ್ಲ ಆದ್ದರಿಂದ ಮುಂದಿನ ದಿನಗಳಲ್ಲಿ ಒಂದು ಸಮಯ ತೆಗೆದುಕೊಂಡು ಉದ್ಘಾಟನೆ ಮಾಡುತ್ತೇವೆ. ಎಂ. ಎಸ್. ಸೋಮಲಿಂಗಪ್ಪ ಶಾಸಕರು ಸಿರುಗುಪ್ಪ