Advertisement
* ಪ್ರಮಾಣಿತ ಘೋಷಣೆ
Related Articles
Advertisement
ಕಾಲೇಜಿನ ಪ್ರಿನ್ಸಿಪಾಲರು ಅರ್ಜಿಯನ್ನು ಪರಿಶೀಲಿಸಿ ತಮ್ಮ ಅನುಮೋದನೆಯೊಂದಿಗೆ ವಿಶ್ವವಿದ್ಯಾಲಯದ ಕಚೇರಿಗೆ ಕಳುಹಿಸಿಕೊಡುತ್ತಾರೆ. ವಿಶ್ವವಿದ್ಯಾಲಯ ಅಗತ್ಯ ವಿಚಾರಣೆಯನ್ನು ಮಾಡಿ, ಹೆಸರು ಬದಲಾವಣೆಗೆ ಅನುಮತಿ ಕೊಡುತ್ತದೆ. ಅರ್ಜಿಯನ್ನು ನಿರಾಕರಿಸಿದಲ್ಲಿ ಅದಕ್ಕೆ ಕಾರಣವನ್ನು ವಿಶ್ವವಿದ್ಯಾಲಯ, ವಿದ್ಯಾರ್ಥಿಗೆ ತಿಳಿಸಬೇಕು.
ರಹದಾರಿ ಪತ್ರ: ಒಮ್ಮೆ ಒಂದು ಹೆಸರಿನಲ್ಲಿ ಪಡೆದುಕೊಂಡ ಪಾಸ್‌ಪೋರ್ಟ್‌ನಲ್ಲಿ ಹೆಸರು ಬದಲಾವಣೆ ಮಾಡಬೇಕಾದಲ್ಲಿ ನಿಗದಿತ ನಮೂನೆಯಲ್ಲಿ ಪ್ರಮಾಣಿತ ಘೋಷಣೆಯನ್ನು ಮಾಡಿ ಎರಡು ವರ್ತಮಾನ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ, ನಿಗದಿತ ಶುಲ್ಕದೊಂದಿಗೆ, ಘೋಷಣೆ, ವರ್ತಮಾನ ಪತ್ರಿಕೆಗಳ ಪ್ರತಿಗಳು ಮತ್ತು ಅರ್ಜಿ ಇವುಗಳನ್ನು ಸ್ಥಳೀಯ ಪಾಸ್‌ಪೋರ್ಟ್ ಆಫೀಸಿಗೆ ಕಳುಹಿಸಿಕೊಡಬೇಕು. ಅರ್ಜಿಯ ಜೊತೆಗೆ ಪಾಸ್‌ಪೋರ್ಟನ್ನು ಕಳುಹಿಸಬೇಕು. ಇದಕ್ಕೆ ನಿಗದಿತ ಶುಲ್ಕ ಇರುತ್ತದೆ.
ಸಂಸ್ಥೆಯ ಹೆಸರು: ಒಬ್ಬ ವ್ಯಕ್ತಿ ಯಾವುದೇ ಹೆಸರನ್ನು ಇಟ್ಟುಕೊಳ್ಳಬಹುದು. ನಿಮ್ಮ ಹೆಸರು ಗೋಪಾಲನಾಗಿದ್ದರೆ, ನನ್ನ ಹೆಸರು ಗೋಪಾಲನಾಗಲು ಯಾವುದೇ ಅಡ್ಡಿಯೂ ಇಲ್ಲ. ಒಮ್ಮೆ ಇಟ್ಟುಕೊಂಡ ಹೆಸರನ್ನು ಬೇಕಾದಾಗ ಸುಲಭವಾಗಿ ಬದಲಾಯಿಸಿಕೊಳ್ಳಲೂಬಹುದು. ಸಂಸ್ಥೆಗಳಿಗೂ ಆ ಸ್ವಾತಂತ್ರ್ಯವಿದೆಯೇ ಎಂಬುದನ್ನು ನೋಡೋಣ. ಸಂಸ್ಥೆ ಎಂದರೆ ಕಂಪನಿ, ಸಹಕಾರ ಸಂಸ್ಥೆ ಅಥವಾ ಸಂಘ ಆಗಬಹುದು.(ಮುಂದುವರಿಯುವುದು) * ಎಸ್.ಆರ್. ಗೌತಮ್ (ಕೃಪೆ: ನವ ಕರ್ನಾಟಕ ಪ್ರಕಾಶನ)