ನವದೆಹಲಿ: ಜರ್ಮನಿಯ ಸರ್ವಾಧಿಕಾರಿ, ಕ್ರೂರಿ ಅಡಾಲ್ಫ್ ಹಿಟ್ಲರ್ ನ ಬಗ್ಗೆ ಯಾರಿಗೆ ಗೊತ್ತಿಲ್ಲ. ರಾಜಕಾರಣಿಯಾಗಿ, ಸರ್ವಾಧಿಕಾರಿಯಾಗಿ ಮೆರೆದಿದ್ದ ಹಿಟ್ಲರ್ ಕೊನೆಗೆ ಆತ್ಮಹತ್ಯೆಗೆ ಶರಣಾಗಿದ್ದ. ಆದರೆ 2008ರಲ್ಲಿ ಮೇಘಾಲಯದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿನ ದಿನಪತ್ರಿಕೆಯ ಹೆಡ್ ಲೈನ್ಸ್ ದೇಶದ ಜನರನ್ನು ಕುತೂಹಲ ಕೆರಳಿಸುವಂತೆ ಮಾಡಿದ್ದು ಸುಳ್ಳಲ್ಲ!
ಇದನ್ನೂ ಓದಿ:CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್
ಹೌದು ಮೇಘಾಲಯದಲ್ಲಿ ಜಾನ್ ಎಫ್ ಕೆನಡಿಯಿಂದ ಅಡಾಲ್ಫ್ ಹಿಟ್ಲರ್ ನ ಬಂಧನ ಎಂಬುದು ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯ ಹೆಡ್ ಲೈನ್ಸ್ ಇದಾಗಿತ್ತು!
ಅಡಾಲ್ಫ್ ಹಿಟ್ಲರ್, ಜಾನ್ ಎಫ್ ಕೆನಡಿ ಎರಡೂ ಪರಿಚಿತವಾದ ಹೆಸರು. ಆದರೆ ಮೇಘಾಲಯದಲ್ಲಿ ನಿಜಕ್ಕೂ ಅಂದು ನಡೆದಿದ್ದೇನು ಎಂಬುದು ಕುತೂಹಲಕ್ಕೆ ಎಡೆಮಾಡಿತ್ತು. 2008ರಲ್ಲಿ ಮೇಘಾಲಯದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಎನ್ ಸಿಪಿ ಅಭ್ಯರ್ಥಿ ಅಡಾಲ್ಫ್ ಹಿಟ್ಲರ್ ಚುನಾವಣಾ ಪ್ರಚಾರ ನಡೆಸುತ್ತಿದ್ದಾಗಲೇ ಅವರನ್ನು ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಜಾನ್ ಎಫ್ ಕೆನಡಿ ಬಂಧಿಸಿದ್ದರು!
ಈ ಸುದ್ದಿ ಮರುದಿನ ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ಅಡಾಲ್ಫ್ ಹಿಟ್ಲರ್ ನನ್ನು ಬಂಧಿಸಿದ ಜಾನ್ ಎಫ್ ಕೆನಡಿ ಎಂಬುದಾಗಿತ್ತು. ಒಂದು ವೇಳೆ 2008ರಲ್ಲಿ ಸಾಮಾಜಿಕ ಜಾಲತಾಣ ಹೆಚ್ಚು ಪ್ರಚಲಿತದಲ್ಲಿ ಇದ್ದಿದ್ದರೆ ತಕ್ಷಣವೇ ವೈರಲ್ ಆಗುತ್ತಿತ್ತು. ಆದರೆ 2008ರಲ್ಲಿ ಪತ್ರಿಕೆಗಳ ಹೆಡ್ ಲೈನ್ಸ್ ತುಂಬಾ ಚರ್ಚೆಯನ್ನು ಹುಟ್ಟುಹಾಕಿತ್ತು ಎಂದು ವರದಿ ವಿವರಿಸಿದೆ.
ಅಂದು ಬಂಧನಕ್ಕೀಡಾಗಿ ಸುದ್ದಿಯಾಗಿದ್ದ ಅಡಾಲ್ಫ್ ಹಿಟ್ಲರ್ ಮೇಘಾಲಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಕಳೆದ ವರ್ಷ ಹಿಟ್ಲರ್ ತೃಣಮೂಲ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು.
ಲೋಕಸಭಾ ಚುನಾವಣೆ ಸನ್ನಿಹಿತವಾಗಿರುವ ಸಂದರ್ಭದಲ್ಲಿ ಚುನಾವಣಾ ಆಯೋಗವು ಎಕ್ಸ್ ನಲ್ಲಿ ಈ ಕುತೂಹಲಕಾರಿ ಮಾಹಿತಿಯನ್ನು ಹಂಚಿಕೊಂಡಿದೆ.