Advertisement

ದೆಹಲಿ ದಂಗೆ: ಮುಸ್ಲಿಂ ಬಂಧುಗಳ ಮನೆಯಲ್ಲಿ ಸಪ್ತಪದಿ ತುಳಿದ ಹಿಂದೂ ಯುವತಿ

09:22 AM Feb 28, 2020 | Hari Prasad |

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ಪರ-ವಿರೋಧ ಹೋರಾಟದ ಹಿನ್ನಲೆಯಲ್ಲಿ ಉತ್ತರ ದೆಹಲಿ ಭಾಗದಲ್ಲಿ ಭುಗಿಲೆದ್ದಿದ್ದ ಹಿಂಸಾಚಾರ ಸಂದರ್ಭದಲ್ಲಿ ನಡೆದ ಸೌಹಾರ್ಧ ವಿವಾಹವೊಂದು ಇದೀಗ ಸುದ್ದಿಯಲ್ಲಿದೆ.

Advertisement

ಇಲ್ಲಿನ ಮುಸ್ಲಿಂ ಬಾಹುಳ್ಯವಿರುವ ಪ್ರದೇಶದಲ್ಲಿ ವಾಸಿಸುತ್ತಿದ್ದ 23 ವರ್ಷ ಪ್ರಾಯದ ಸಾವಿತ್ರಿ ಎಂಬ ಯುವತಿಯ ವಿವಾಹ ನಿಗದಿಯಾಗಿತ್ತು. ಹೊಸ ಜೀವನಕ್ಕೆ ಪ್ರವೇಶಿಸುವ ಕನಸು ಕಾಣುತ್ತಿದ್ದ ಸಾವಿತ್ರಿಗೆ ಬರಸಿಡಿಲಂತೆ ಬಂದೆರಗಿದ್ದು ದೆಹಲಿ ಹಿಂಸಾಚಾರ. ಮದುವೆ ನಡೆಯಬೇಕಿದ್ದ ಪ್ರದೇಶದಲ್ಲೇ ಹಿಂಸಾಚಾರ ಭುಗಿಲೆದ್ದ ಕಾರಣ ಸಾವಿತ್ರಿ ಮದುವೆಯನ್ನು ಮುಂದೂಡಲೇಬೇಕಾದ ಅನಿವಾರ್ಯತೆ ಸಾವಿತ್ರಿ ಕುಟುಂಬದವರದ್ದಾಯಿತು.

ಆದರೆ ವಿಚಿತ್ರವೆಂಬಂತೆ ತಮ್ಮ ನೆರೆ ಮನೆಯ ಯುವತಿಯ ಮದುವೆಯೊಂದು ಗಲಭೆಗಳ ಕಾರಣಕ್ಕೆ ಮುಂದೂಡಬೇಕಾದ ಅನಿವಾರ್ಯತೆಯನ್ನು ಕಂಡ ಆ ಪ್ರದೇಶದ ಮುಸ್ಲಿಂ ಬಾಂಧವರು ಸಾವಿತ್ರಿ ತಂದೆಯಲ್ಲಿ ಮಾತನಾಡಿ ತಮ್ಮದೇ ಮನೆಯಲ್ಲಿ ಆಕೆಯ ಮದುವೆ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next