Advertisement

Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ

09:53 AM Dec 20, 2024 | Team Udayavani |

ವಾಷಿಂಗ್ಟನ್‌: ಪಾಕಿಸ್ಥಾನದ ಖಂಡಾಂತರ ಕ್ಷಿಪಣಿಗಳ ಅಭಿವೃದ್ಧಿ (Missile Development) ಯೋಜನೆಗೆ ಸಹಾಯ ಮಾಡಿದ ಆರೋಪದ ಮೇಲೆ ಅಲ್ಲಿನ 4 ಸಂಸ್ಥೆಗಳಿಗೆ ಅಮೆರಿಕ ನಿರ್ಬಂಧ ಹೇರಿದೆ. ಪಾಕಿಸ್ಥಾನ (Pakisthan) ದೀರ್ಘ‌ ಶ್ರೇಣಿಯ ಕ್ಷಿಪಣಿಗಳನ್ನು ಅಭಿವೃದ್ಧಿ ಮಾಡಲಿದೆ ಎಂಬ ಬೆದರಿಕೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ಅಮೆರಿಕ ಹೇಳಿದೆ. ಬೈಡೆನ್‌ ಸರಕಾರದ ಕ್ರಮ ದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ರುವ   ಪಾಕಿಸ್ಥಾನಕ್ಕೆ ಮತ್ತಷ್ಟು ಸಂಕಷ್ಟ ಉಂಟಾಗಬಹುದು ಎನ್ನಲಾಗಿದೆ.

Advertisement

ಪಾಕ್‌ ಸರಕಾರಿ ಸ್ವಾಮ್ಯದ ವಿಮಾನಯಾನ ಹಾಗೂ ರಕ್ಷಣ ಸಂಸ್ಥೆ ‌ ನ್ಯಾಶನಲ್‌ ಡೆವಲಪ್‌ಮೆಂಟ್‌ ಕಾಂಪ್ಲೆಕ್ಸ್‌ (ಎನ್‌ಡಿಸಿ)ಗೂ ನಿರ್ಬಂಧ ವಿಧಿ ಸ ಲಾಗಿದೆ. ಪಾಕ್‌ ಖಂಡಾಂತರ ಕ್ಷಿಪಣಿಗಳ ಅಭಿವೃದ್ಧಿ ಯೋಜನೆ ಮುಂದುವರಿಸಲು ಬೇಕಾದ ಸಾಧನಗಳನ್ನು ಸಂಗ್ರಹಿಸಲು ಎನ್‌ಡಿಸಿ ಕೆಲಸ ಮಾಡಿದೆ. ಶಾಹೀನ್‌ ಸರಣಿಯ ಕ್ಷಿಪಣಿ ಸೇರಿ ಇತರ ಖಂಡಾಂತರ ಕ್ಷಿಪಣಿ ಅಭಿವೃದ್ಧಿಗೂ ಎನ್‌ಡಿಸಿಯೇ ಕಾರಣ ಎಂದು ಅಮೆರಿಕ ನಿರ್ಬಂಧ ಹೇರಿದೆ.

ಬೈಡೆನ್‌ ಸರಕಾರದ ಕ್ರಮದ ವಿರುದ್ಧ ಪಾಕ್‌ ಸರಕಾರ ಪ್ರತಿಕ್ರಿಯಿಸಿ ” ಇದು ಪಕ್ಷಪಾತ ನಿರ್ಧಾರ. ಇದರಿಂದ ನಮ್ಮ ಪ್ರಾದೇಶಿಕ ಭದ್ರತೆಗೆ ತೊಡಕಾಗಲಿದೆ ಎಂದು ಟೀಕಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next