Advertisement

ವೀಲ್‌ ಬೇರಿಂಗ್‌ ಸಮಸ್ಯೆ ಮತ್ತು ಪರಿಹಾರಗಳು

01:21 PM Nov 16, 2018 | |

ಕಾರಿನಲ್ಲಿ ವೀಲ್‌ ಬೇರಿಂಗ್‌ ಸಮಸ್ಯೆಗಳು ಕೆಲವೊಮ್ಮೆ ಕಾಣಿಸಿಕೊಳ್ಳಬಹುದು. ಇದರಿಂದ ಸುಗಮ ಚಾಲನೆಗೆ ಸಮಸ್ಯೆಯಾಗುತ್ತದೆ. ಕಾರಿನ ವೀಲ್‌ ಬೇರಿಂಗ್‌ ಸಮಸ್ಯೆ ಪತ್ತೆ ಮಾಡೋದು ಹೇಗೆ? ಅದರಿಂದೇನು ಸಮಸ್ಯೆಗಳಾಗಬಹುದು ಎಂಬುದನ್ನು ನೋಡೋಣ. ಕಾರಿನ ಚಕ್ರವನ್ನು ಹಿಡಿದಿಟ್ಟುಕೊಳ್ಳುವ ಹಬ್‌ನ ಒಳಭಾಗದಲ್ಲಿ ಬೇರಿಂಗ್‌ ಇರುತ್ತದೆ. ಈ ಬೇರಿಂಗ್‌ ಸವೆತ, ಇದರಲ್ಲಿನ ಆಯಿಲ್‌ ಅಂಶಗಳು ಕಡಿಮೆಯಾಗುವುದು, ಬಾಲ್‌ ಗಳು ತಳೆದಾಗ ಸಮಸ್ಯೆಗಳಾಗುತ್ತವೆ.

Advertisement

1. ಟಯರ್‌ ಸವೆತ
ವೀಲ್‌ ಬೇರಿಂಗ್‌ ಸಮಸ್ಯೆಯಿಂದ ಟಯರ್‌ ನೇರವಾಗಿರದೆ ವಕ್ರವಾಗಿ ಓಡಬಹುದು ಇದರಿಂದ ಬೇಕಾಬಿಟ್ಟಿ ಟಯರ್‌ ಸವೆಯಬಹುದು. ಟಯರ್‌ನ ಬಟನ್‌ಗಳನ್ನು ಗಮನಿಸಿದರೆ ಇದು ಅರಿವಿಗೆ ಬರುತ್ತದೆ.

2. ಟಯರ್‌ ಭಾಗದಿಂದ ಶಬ್ದ
ಟಯರ್‌ ಭಾಗದಿಂದ ಬರ ಬರನೆ ಶಬ್ದ ಬರುತ್ತಿದ್ದರೆ, ಕೀರಲು ಧ್ವನಿ ಇದ್ದರೆ ಅದು ಬೇರಿಂಗ್‌ ಸಮಸ್ಯೆಯಾಗಿರುತ್ತದೆ.

3. ಸ್ಟೀರಿಂಗ್‌ ವೀಲ್‌ ವೈಬ್ರೇಷನ್‌
ಚಾಲನೆ ವೇಳೆ ಹೆಚ್ಚಾಗಿ ವೇಗದ ಚಾಲನೆಯಲ್ಲಿ ಸ್ಟೀರಿಂಗ್‌ ವೀಲ್‌ ವೈಬ್ರೇಷನ್‌ ಬರಬಹುದು. ಇದಕ್ಕೆ ಎರಡು ಕಾರಣಗಳು ಪ್ರಮುಖ ಒಂದು ವೀಲ್‌ ಅಲೈನ್‌ಮೆಂಟ್‌, ಇನ್ನೊಂದು ವೀಲ್‌ ಬೇರಿಂಗ್‌. ಇತ್ತೀಚೆಗೆ ವೀಲ್‌ ಅಲೈನ್‌ಮೆಂಟ್‌ ಮಾಡಿಸಿದ್ದು ಅದು ಸರಿಯಾಗಿದೆ ಎಂದಾದರೆ ಬೇರಿಂಗ್‌ ಸಮಸ್ಯೆಯೇ ಇರಬಹುದು.

4. ಚಕ್ರ ಬಳುಕುವಿಕೆ
ಇದನ್ನು ಗುರುತಿಸುವುದು ತುಸು ಕಷ್ಟ. ಕಾರನ್ನು ಜಾಕ್‌ ಹಾಕಿ ಮೇಲೆತ್ತಿ, ಕೈಯಲ್ಲಿ ಚಕ್ರವನ್ನು ಹಿಂದಕ್ಕೂ ಮುಂದಕ್ಕೂ ತಿರುಗಿಸಿ ನೋಡಬೇಕು. ಈ ಸಂದರ್ಭದಲ್ಲಿ ಚಕ್ರ ತುಸು ಬಳಕಿದಂತೆ ಕಂಡರೆ ಅದು ಬೇರಿಂಗ್‌ ಸಮಸ್ಯೆಯಾಗಿರುತ್ತದೆ.

Advertisement

ವೀಲ್‌ ಬೇರಿಂಗ್‌ ಆಯುಷ್ಯ
ಸುಮಾರು 80ರಿಂದ 1 ಲಕ್ಷ ಕಿ.ಮೀ. ವರೆಗೆ ಬೇರಿಂಗ್‌ಗಳ ಆಯುಷ್ಯ ಇರುತ್ತದೆ. ಗಮನಿಸಿ ಇದು ಉತ್ತಮ ಚಾಲನಾ ಹವ್ಯಾಸ, ಕ್ರಮಿಸುವ ರಸ್ತೆಯ ಗುಣಮಟ್ಟದ ಮೇರೆಗೆ ನಿರ್ಧಾರವಾಗುತ್ತದೆ. ಸುಮಾರು 80 ಸಾವಿರ ಕಿ.ಮೀ. ಕಾರು ಓಡಾಡಿದೆ ಎಂದರೆ ಅದು ಹಾಳಾಗುವಲ್ಲಿವರೆಗೆ ಕಾಯದೆ, ಅದನ್ನು ಬದಲಾಯಿಸುವುದು ಒಳ್ಳೆಯದು.

ಬೇರಿಂಗ್‌ ಸಮಸ್ಯೆಯಿಂದ ಏನಾಗುತ್ತದೆ?
ಒಂದು ವೇಳ ಬೇರಿಂಗ್‌ ಸಮಸ್ಯೆಯಿದ್ದೂ ಅದರ ಬಗ್ಗೆ ಗಮನ ಹರಿಸಿದಿದ್ದರೆ, ಹೆಚ್ಚಿನ ಹಾನಿ ಉಂಟಾಗಬಹುದು. ವಿಶೇಷವಾಗಿ ಟಯರ್‌ ವೇಗವಾಗಿ ಸವೆದು ಹಾಳಾಗುತ್ತದೆ. ಜತೆಗೆ ಕಾರು ವೇಗವಾಗಿ ಚಾಲನೆ ವೇಳೆ ಒಂದು ಬದಿಗೆ ಎಳೆದಂತಾಗಿ, ನಿಯಂತ್ರಣ ತಪ್ಪಬಹುದು. ಬ್ರೇಕ್‌ ಪ್ಯಾಡ್‌ ಮತ್ತು ರೋಟರ್‌ ವೇರ್‌ಗಳಿಗೆ ಹಾನಿಯಾಗಿ ಹೆಚ್ಚಿನ ಹಾನಿಯಾಗಬಹುದು. ಇದರಿಂದಾಗಿ ಬೇರಿಂಗ್‌ ಹಾಳಾದ ಬಗ್ಗೆ ತುಸು ಗಮನ ಹರಿಸಿ, ಕೂಡಲೇ ರಿಪೇರಿ ಮಾಡಿಸುವುದು ಉತ್ತಮ

 ಈಶ 

Advertisement

Udayavani is now on Telegram. Click here to join our channel and stay updated with the latest news.

Next