Advertisement
ವಾಟ್ಸಾಪ್ ಬಳಕೆದಾರರು ಹಲವು ತಿಂಗಳುಗಳಿಂದ ಕಾಯುತ್ತಿದ್ದ, ಬಹು ನಿರೀಕ್ಷಿತ ಫೀಚರ್ಸ್ ಅನ್ನು ಪರಿಚಯಿಸಿದೆ. ಈಗ ಮಲ್ಟಿ ಡಿವೈಸ್ ವೈಶಿಷ್ಟ್ಯವನ್ನು ಹೊರತಂದಿರುವ ವಾಟ್ಸಾಪ್, ಇನ್ನು ಮುಂದೆ ವಾಟ್ಸಾಪ್ ವೆಬ್ಗಾಗಿ ಸ್ಮಾರ್ಟ್‌ಫೋನ್ ಅನ್ನು ಆನ್‍ಲೈನ್‍ನಲ್ಲಿ ಇಡುವ ಅಗತ್ಯವಿಲ್ಲ. ತನ್ನ ಮಲ್ಟಿ ಡಿವೈಸ್ ಕನೆಕ್ಟ್ ಫೀಚರ್ಸ್ ಅನ್ನು ಇದೀಗ ಆಂಡ್ರಾಯ್ಡ್ ಮತ್ತು ಐಓಎಸ್ ಎರಡೂ ಆವೃತ್ತಿಗಳಲ್ಲಿಯೂ ಕೂಡ ಅಪ್ಡೇಟ್ ಮಾಡಿದೆ.
Related Articles
Advertisement
ಈ ಹೊಸ ಫೀಚರ್ ಆರಂಭಿಕ ಹಂತದಲ್ಲಿದೆ. ವಾಟ್ಸಾಪ್ ನಲ್ಲಿರುವ ಲಿಂಕ್ಡ್ ಡಿವೈಸಸ್ ಸೆಟ್ಟಿಂಗ್‍ನಿಂದ ಬೀಟಾ ಎಂದು ಲೇಬಲ್ ಮಾಡಲಾದ ವೈಶಿಷ್ಟ್ಯವನ್ನು ಬಳಕೆದಾರರು ಆಯ್ಕೆ ಮಾಡಬೇಕು. ಈ ಹೋಸ ಫೀಚರ್ ಬಳಸುವ ವೇಳೆ ಬಳಕೆದಾರರು ಆನ್‍ಲೈನ್‍ನಲ್ಲಿ ಇದ್ದಾರೆಯೆ ಎಂದು ಖಚಿತಪಡಿಸಿಕೊಳ್ಳಬೇಕಾಗಿಲ್ಲ. ಸ್ಮಾರ್ಟ್ ಫೋನ್ ಆಫ್ ಲೈನ್ ಹೋದ 14 ದಿನಗಳ ವರೆಗೆ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗುತ್ತದೆ. ಒಂದು ವೇಳೆ ಮೊಬೈಲ್ ಚಾರ್ಜ್ ಖಾಲಿಯಾದರೂ ವಾಟ್ಸಾಪ್ ವೆಬ್ ಕಾರ್ಯನಿರತವಾಗಿರುತ್ತದೆ.
ವಾಟ್ಸ್ಆ್ಯಪ್ ಡಿವೈಸ್ ಬಳಕೆ ಹೇಗೆ?
- ಮೊದಲಿಗೆ ಫೋನ್‌ನಲ್ಲಿ ವಾಟ್ಸಾಪ್ ತೆರೆದು, ನಂತರ ಮೇಲಿನ ಬಲ ಮೂಲೆಯಲ್ಲಿರುವ ಮೂರು-ಚುಕ್ಕೆಗಳ ಐಕಾನ್ ಮೇಲೆ ಟ್ಯಾಪ್ ಮಾಡಬೇಕು.
- ಲಿಂಕ್ಡ್ ಡಿವೈಸ್ ಮೇಲೆ ಟ್ಯಾಪ್ ಮಾಡಬೇಕು.
- ನಂತರ “ಮಲ್ಟಿ-ಡಿವೈಸ್ ಬೀಟಾ” ಮೇಲೆ ಟ್ಯಾಪ್ ಮಾಡಿ, ಇದರಲ್ಲಿ ವಾಟ್ಸಾಪ್ ಒಂದು ಪೇಜ್ ಅನ್ನು ಡಿಸ್ ಪ್ಲೇ ಮಾಡಲಿದೆ.
- ಇದೀಗ “ಜಾಯಿನ್ ಬೀಟಾ” ಬಟನ್ ಮೇಲೆ ಟ್ಯಾಪ್ ಮಾಡಿ ಮತ್ತು “ಕಂಟಿನ್ಯೂ” ಬಟನ್ ಒತ್ತಬೇಕು.
- ಇದಾದ ನಂತರ ಕ್ಯುಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಸ್ಮಾರ್ಟ್‌ಫೋನ್ ಅನ್ನು ವಾಟ್ಸಾಪ್ ವೆಬ್‌ಗೆ ಲಿಂಕ್ ಮಾಡಬೇಕು.