Advertisement
ಈ ಬಗ್ಗೆ ಪರೀಕ್ಷಾರ್ಥ ಪ್ರಯೋಗ ನಡೆಯುತ್ತಿದ್ದು, ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ವಾಟ್ಸಾಪ್ ಹೇಳಿದೆ. ಕಳೆದ ತಿಂಗಳಷ್ಟೇ ಫಾರ್ವರ್ಡ್ ಸಂದೇಶಗಳಿಗೆ “ಫಾರ್ವರ್ಡೆಡ್’ ಲೇಬಲ್ ಪ್ರದರ್ಶಿಸುವ ವ್ಯವಸ್ಥೆ ಯನ್ನದು ಮಾಡಿತ್ತು. ಗುರುವಾರ ವಾಟ್ಸಾಪ್ ಕೈಗೊಂಡ ಕ್ರಮಗಳ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದ ಸರಕಾರ, ನೋಟಿಸ್ ನೀಡಿತ್ತು. ಸುಳ್ಳು ಸುದ್ದಿ ಹರಡುವಿಕೆ ತಡೆಯಲು ಇನ್ನಷ್ಟು ಹೊಣೆಯುಕ್ತ ಕ್ರಮ ಕೈಗೊಳ್ಳಿ ಎಂದಿತ್ತು. ಪ್ರಚೋದಕ ಅಥವಾ ದ್ವೇಷಯುತ ಸಂದೇಶ ಕಂಡುಬಂದಾಗ ಕಳುಹಿಸಿದವರನ್ನು ಗುರುತಿಸುವ ಅಗತ್ಯವೂ ಇದೆ ಎಂದಿತ್ತು.
ಸುಳ್ಳು ಸುದ್ದಿ ಹರಡದಂತೆ ಸಾರ್ವತ್ರಿಕ ಚುನಾವಣೆಗೆ ಮುನ್ನ ಕಠಿನ ಕ್ರಮ ಕೈಗೊಳ್ಳುವುದಾಗಿ ಚು. ಆಯೋಗಕ್ಕೆ ವಾಟ್ಸಾಪ್ ಮಾಹಿತಿ ನೀಡಿದೆ. ವಿದೇಶಗಳಲ್ಲಿ ಈಗಾಗಲೇ ಪರಿಚಯಿಸಲಾದ ಸುಳ್ಳು ಸುದ್ದಿ ಪತ್ತೆ ಕ್ರಮಗಳನ್ನು ಭಾರತದಲ್ಲೂ ಪರಿಚಯಿಸುವೆ ಎಂದಿದೆ. ವಾಟ್ಸಾಪ್
ಮುಖ್ಯಸ್ಥರು ಹಾಗೂ ಉನ್ನತ ಅಧಿ ಕಾರಿಗಳು ಭಾರತಕ್ಕೆ ಆಗಮಿಸಿದ್ದು, ರಾಜಕಾರಣಿಗಳು, ವಿವಿಧ ಅಧಿಕಾರಿ ಗಳನ್ನು ಭೇಟಿ ಮಾಡಿ ಸುಳ್ಳು ಸುದ್ದಿ ಪ್ರಸರಣ ತಡೆ ಸಂಬಂಧ ಕ್ರಮಗಳನ್ನು ಹೇಗೆ ಕೈಗೊಳ್ಳಬಹುದು ಎಂದು ಚರ್ಚಿಸಿದ್ದಾರೆ. ಈಗಾಗಲೇ ಬ್ರೆಜಿಲ್ ಹಾಗೂ ಮೆಕ್ಸಿಕೋದಲ್ಲಿ ಪರಿಚಯಿಸಲಾಗಿರುವ “ವೆರಿಫಿಕಾಡೋ’ ವ್ಯವಸ್ಥೆಯನ್ನು ಭಾರತದಲ್ಲೂ ಪರಿಚಯಿಸಲಾಗುತ್ತದೆ. ಹಲವು ಮಾಧ್ಯಮ ಸಂಸ್ಥೆಗಳನ್ನು ನೇಮಿಸಿಕೊಂಡು, ವಾಟ್ಸಾಪ್‌ನಲ್ಲಿ ಹರಡುವ ಸುದ್ದಿಗಳ ವಾಸ್ತವಾಂಶ ಪರಿಶೀಲಿಸುವ ವ್ಯವಸ್ಥೆ ಇದು.