ನವದೆಹಲಿ:ಗುಂಪು ಥಳಿತಕ್ಕೆ ಕಾರಣವಾಗುವಂತಹ ನಕಲಿ ಸಂದೇಶಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹೊಸ ವಿಧಾನ (ಟೂಲ್ಸ್)ವನ್ನು ಡೆವಲಪ್ ಮಾಡುವುದಾಗಿ ಫೇಸ್ ಬುಕ್ ಮಾಲಕತ್ವದ ವಾಟ್ಸ್ ಆ್ಯಪ್ ಕೇಂದ್ರ ಸರ್ಕಾರಕ್ಕೆ ಭರವಸೆ ನೀಡಿರುವುದಾಗಿ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ್ ಪ್ರಸಾದ್ ಮಂಗಳವಾರ ತಿಳಿಸಿದ್ದಾರೆ.
ವಾಟ್ಸ್ ಆ್ಯಪ್ ಸಿಇಒ ಕ್ರಿಸ್ ಡೇನಿಯಲ್ಸ್ ಜೊತೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯಾವುದೇ ರೀತಿಯ ನಕಲಿ ಸಂದೇಶಗಳನ್ನು ಹಾಕಿದ ಮೂಲ ಕಂಡುಹಿಡಿಯಲು ಅನುಕೂಲವಾಗುವಂತಹ ತಂತ್ರಜ್ಞಾನ ಡೆವಲಪ್ ಮಾಡುವಂತೆ ವ್ಯಾಟ್ಸ್ ಆ್ಯಪ್ ಸಿಇಒಗೆ ಸೂಚಿಸಿರುವುದಾಗಿ ಹೇಳಿರುವುದಾಗಿ ರಾಯಟರ್ಸ್ ವರದಿ ಮಾಡಿದೆ.
ನಕಲಿ ಸಂದೇಶಗಳ ಪತ್ತೆಗಾಗಿ ರಾಕೆಟ್ ವಿಜ್ಞಾನದ ಅಗತ್ಯವೇನಿಲ್ಲ ಎಂದ ರವಿಶಂಕರ್ ಪ್ರಸಾದ್, ಆ ನಿಟ್ಟಿನಲ್ಲಿ ತಂತ್ರಜ್ಞಾನ ಅಭಿವೃದ್ದಿಪಡಿಸುವಲ್ಲಿ ವ್ಯಾಟ್ಸ್ ಆ್ಯಪ್ ಭಾರತದ ಕಾನೂನು ಸಂಸ್ಥೆಯ ಜೊತೆ ಕಾರ್ಯನಿರ್ವಹಿಸುತ್ತಿದೆ ಎಂದು ವಿವರಿಸಿದರು.
ಎಲ್ಲಾ ರೀತಿಯಿಂದಲೂ ವ್ಯಾಟ್ಸ್ ಆ್ಯಪ್ ಭಾರತದ ಕಾನೂನನ್ನು ಅನುಸರಿಸುವ ಮೂಲಕ ಕಾರ್ಯನಿರ್ವಹಿಸಬೇಕಾಗಿದೆ ಎಂದು ವ್ಯಾಟ್ಸ್ ಆ್ಯಪ್ ಸಿಇಒ ಡೇನಿಯಲ್ ಜೊತೆ ಮಾತುಕತೆ ವೇಳೆ ಸ್ಪಷ್ಟಪಡಿಸಿರುವುದಾಗಿ ಹೇಳಿದರು.
ಗುಂಪು ಥಳಿತ ಅಥವಾ ಅಶ್ಲೀಲತೆ, ಹತ್ಯೆಯನ್ನು ಪ್ರಚೋದಿಸುವಂತಹ, ಭೀತಿಗೊಳಿಸುವ ಬೆಳವಣಿಗೆ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ವ್ಯಾಟ್ಸ್ ಆ್ಯಪ್ ಮೊದಲು ಇಂತಹ ಸಮಸ್ಯೆಯನ್ನು ನಿವಾರಿಸಲು ಉತ್ತರ ಕಂಡುಕೊಳ್ಳಬೇಕಾಗಿದೆ ಎಂದು ತಿಳಿಸಿ