Advertisement
ಇಲ್ಲಿಯವರೆಗೇನಿತ್ತು?:ಗೂಗಲ್ ಡ್ರೈವ್‌ನಲ್ಲಿ ನಮ್ಮ ವಾಟ್ಸ್‌ಆ್ಯಪ್ ಸಂದೇಶಗಳು, ಚಿತ್ರಗಳು, ವಿಡಿಯೋಗಳನ್ನು ಬ್ಯಾಕಪ್ ಆಯ್ಕೆಯಡಿ ಸಹಜವಾಗಿ ಉಳಿಸಿಕೊಳ್ಳಬಹುದಿತ್ತು. ಇದಕ್ಕಾಗಿ ನಾವು, ನಮಗೆ ಗೂಗಲ್ ನೀಡಿರುವ ಉಚಿತ 15 ಜಿಬಿಯನ್ನು ಬಳಸಿಕೊಳ್ಳಬೇಕಾದ ಅಗತ್ಯವಿರಲಿಲ್ಲ. ಇನ್ನು ಮುಂದೆ ನಾವು ಸಂದೇಶಗಳನ್ನು ಕಾಪಿಟ್ಟುಕೊಳ್ಳಲು ಅನ್ಯ ಮಾರ್ಗಗಳನ್ನು ಹುಡುಕಿಕೊಳ್ಳಬೇಕು. ಒಂದು ತಿಂಗಳು ಮುಂಚಿತವಾಗಿಯೇ ವಾಟ್ಸ್‌ಆ್ಯಪ್ ನಮಗೆ ಸಂದೇಶಗಳನ್ನು ಕಳುಹಿಸಿ ಈ ಬಗ್ಗೆ ಎಚ್ಚರಿಸಲಿದೆ.
1. ವಾಟ್ಸ್‌ಆ್ಯಪ್‌ನ ಸೆಟ್ಟಿಂಗ್ಸ್ ಆಯ್ಕೆಗೆ ಹೋಗಿ, ಅಲ್ಲಿ ಸ್ಟೋರೇಜ್ ಆ್ಯಂಡ್ ಡಾಟಾಕ್ಕೆ ಹೋಗಬೇಕು. ಅಲ್ಲಿ ಮ್ಯಾನೇಜ್ ಸ್ಟೋರೇಜನ್ನು ಆಯ್ದುಕೊಳ್ಳಬೇಕು. ಇದರ ಮೂಲಕ ಗೂಗಲ್ ಖಾತೆಗಳಲ್ಲಿ ನಿಮಗೆ ಉಚಿತವಾಗಿರುವ 15 ಜಿಬಿ ಸ್ಥಳಕ್ಕೆ ಮಾಹಿತಿಗಳನ್ನು ರವಾನಿಸುವಂತೆ ವ್ಯವಸ್ಥೆ ಮಾಡಿಕೊಳ್ಳಬಹುದು. 2. ವಾಟ್ಸ್‌ಆ್ಯಪ್‌ನಲ್ಲಿ ಸ್ಟೋರೇಜ್ ರಿವ್ಯೂ ಆಯ್ಕೆಯಡಿ ಎಷ್ಟು ದತ್ತಾಂಶವನ್ನು ನಾವು ಸಂಗ್ರಹಿಸುತ್ತಿದ್ದೇವೆ ಎಂದು ತಿಳಿಯಬಹುದು. ಒಂದು ವೇಳೆ ಗೂಗಲ್‌ಗೆ ಹಣ ಪಾವತಿಸಲು ಬಯಸುವುದಿಲ್ಲವಾದರೆ, ವಾಟ್ಸ್‌ಆ್ಯಪ್ ಚಾಟ್ ಟ್ರಾನ್ಸ್‌ಫರ್ ಆಯ್ಕೆಯಡಿ ಮಾಹಿತಿಗಳನ್ನು ಆ್ಯಂಡ್ರಾಯ್ಡ ಆ್ಯಪ್‌ಗಳಿಗೆ ಕಳಿಸಿಕೊಳ್ಳಬಹುದು.