Advertisement

ಕೈ ಕೊಟ್ಟ ವಾಟ್ಸಾಪ್, ಫೇಸ್ ಬುಕ್, ಇನ್‍ಸ್ಟಾಗ್ರಾಂ |ಬಳಕೆದಾರರ ಪರದಾಟ

09:35 PM Oct 04, 2021 | Team Udayavani |

ನವದೆಹಲಿ : ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಫೇಸ್ ಬುಕ್ ಹಾಗೂ ಇನ್‍ಸ್ಟಾಗ್ರಾಂ ಸೋಮವಾರ ಸಂಜೆ   ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ.

Advertisement

ತಾಂತ್ರಿಕ ದೋಷದಿಂದಾಗಿ ಈ ಮೂರು ಆ್ಯಪ್ ಗಳು ಕಾರ್ಯನಿರ್ವಹಿಸುತ್ತಿಲ್ಲ.  ವಾಟ್ಸಾಪ್,  ಫೇಸ್ ಬುಕ್ ಹಾಗೂ ಇನ್‍ಸ್ಟಾಗ್ರಾಂ ಆ್ಯಪ್‍ಗಳು ಕೈ ಕೊಟ್ಟಿದ್ದರಿಂದ ಬಳಕೆದಾರರು ಕೆಲ ಹೊತ್ತು ಪರದಾಡುವಂತಾಗಿದೆ.

ಸಾಮಾಜಿಕ ಜಾಲತಾಣದ ಪ್ರಮುಖ ಮಾಧ್ಯಮಗಳಾದ ಫೇಸ್‌ಬುಕ್ ಹಾಗೂ ಇನ್‍ಸ್ಟಾಗ್ರಾಂ ಕೆಲ ದಿನಗಳ ಕಾಲ ತಾಂತ್ರಿಕ ತೊಂದರೆಯಿಂದಾಗಿ ಬಳಕೆದಾರರಿಗೆ ಸೇವೆ ಸ್ಥಗಿತಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next