Advertisement

ಪ್ರಧಾನಿ ಮೋದಿ ಜತೆ ಮಾತುಕತೆ ನಡೆಸಿದ್ರೆ ತಪ್ಪೇನು, ಅವರು ನವಾಜ್ ಷರೀಫ್ ಅಲ್ಲ: ಠಾಕ್ರೆ

06:01 PM Jun 08, 2021 | Team Udayavani |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಮಾತುಕತೆ ನಡೆಸಿದರೆ ತಪ್ಪೇನಿದೆ? ನಾನೇನು ಪಾಕಿಸ್ತಾನದ ನವಾಜ್ ಷರೀಫ್ ಅವರನ್ನು ಭೇಟಿಯಾಗಲು ಹೋಗಿಲ್ಲ…ಇದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಂಗಳವಾರ(ಜೂನ್ 08) ಪ್ರಧಾನಿ ಮೋದಿ ಭೇಟಿ ನಂತರ ನೀಡಿದ ಪ್ರತಿಕ್ರಿಯೆ.

Advertisement

ಮರಾಠ ಮೀಸಲಾತಿ ಸೇರಿದಂತೆ ಹಲವು ವಿಚಾರಗಳು ಕುರಿತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ನಿಯೋಗ ಇಂದು ಭೇಟಿಯಾಗಿ ಮಾತುಕತೆ ನಡೆಸಿದ್ದರು. ವರದಿಯ ಪ್ರಕಾರ ಠಾಕ್ರೆ ಜತೆ ಉಪಮುಖ್ಯಮಂತ್ರಿ ಅಜಿತ್ ಪವಾರ್, ಹಿರಿಯ ಕಾಂಗ್ರೆಸ್ ಮುಖಂಡ ಅಶೋಕ್ ಚವಾಣ್ ಜತೆಗಿದ್ದರು. ಏತನ್ಮಧ್ಯೆ ಠಾಕ್ರೆ  ಪ್ರತ್ಯೇಕವಾಗಿ ಪ್ರಧಾನಿ ಮೋದಿ ಅವರ ಜತೆ ಹತ್ತು ನಿಮಿಷಗಳ ಕಾಲ ಮಾತುಕತೆ ನಡೆಸಿದ್ದರು.

ಪ್ರಧಾನಿ ಮೋದಿ ಅವರ ಜತೆ ಪ್ರತ್ಯೇಕವಾಗಿ ಮಾತನಾಡಿರುವ ಬಗ್ಗೆ ಪ್ರಶ್ನಿಸಿದ ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಿದ ಠಾಕ್ರೆ, ನಾನು ಭೇಟಿಯಾಗಿದ್ದು ವೈಯಕ್ತಿವಾಗಿ ವಿನಃ, ರಾಜಕೀಯ ವಿಚಾರಕ್ಕಾಗಿ ಅಲ್ಲ. ನಾವು ರಾಜಕೀಯ ಪಕ್ಷವಾಗಿ ಜತೆಗಿಲ್ಲಾ, ಆದರೆ ನಮ್ಮ ಆತ್ಮೀಯ ಸಂಬಂಧ ಮುರಿದಿಲ್ಲ. ನಮಗೆ ಪ್ರಧಾನಿ ಮೋದಿಯವರ ಜತೆ ಉತ್ತಮ ಬಾಂಧವ್ಯ ಇದೆ. ನಾವು ರಾಜಕೀಯವಾಗಿ ಜತೆಗಿಲ್ಲದಿರಬಹುದು, ಅದರ ಅರ್ಥ ನಮ್ಮ ಬಾಂಧವ್ಯ ಮುರಿದು ಬಿದ್ದಿದೆ ಎಂದಲ್ಲ. ನಾನೇನು ನವಾಜ್ ಷರೀಫ್ ಅವರನ್ನು ಭೇಟಿಯಾಗಲು ಹೋಗಿದ್ದಲ್ಲ ಎಂದು ತಿಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next