ಪಿಯುಸಿ ಕಲಿತ ನಂತರ ಮುಂದೇನು ಎಂಬ ಪ್ರಶ್ನೆ ವಿದ್ಯಾರ್ಥಿಗಳಲ್ಲಿ ಹುಟ್ಟುವುದು ಸಾಮಾನ್ಯ. ಕೃಷಿಯಲ್ಲಿ, ವಿಜ್ಞಾನದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಅಗ್ರಿಕಲ್ಚರಲ್ ಬಯೋಟೆಕ್ನೋಲೊಜಿಸ್ಟ್ ಕೋರ್ಸ್ ಉತ್ತಮ ಆಯ್ಕೆಗಳಲ್ಲಿ ಒಂದಾಗಿದೆ.
Agricultural ಬಯೋಟೆಕ್ನೋಲೊಜಿಸ್ಟ್ ಹುದ್ದೆಯ ವಿಶೇಷತೆ ಏನು?
ಆಧುನಿಕ ಉಪಕರಣಗಳನ್ನು ಬಳಸಿಕೊಂಡು ಸಸ್ಯ ಮತ್ತು ಪ್ರಾಣಿಗಳಿಂದ ಲಭಿಸುವ ಗೊಬ್ಬರಗಳ ಇಳುವರಿಯನ್ನು ಹೆಚ್ಚಿಸಲು ಅಗ್ರಿಕಲ್ಚರಲ್ ಬಯೋಟೆಕ್ನೋಲೊಜಿಸ್ಟ್ ರೈತರಿಗೆ ಸಹಾಯ ಮಾಡುತ್ತಾರೆ. ಕೃಷಿಯಲ್ಲಿ ಸಹಾಯಕವಾದ ಜೀವ ಜಂತುಗಳನ್ನು ಉಳಿಸಲು ಮತ್ತು ಬೆಳೆಗಳಿಗೆ ರೋಗ ಬಾರದಂತೆ ರಕ್ಷಿಸಲು ಹೊಸ ಉತ್ಪನ್ನಗಳನ್ನು ಸೃಷ್ಟಿಸುತ್ತಾರೆ.
ಏನೆಲ್ಲಾ ಕೌಶಲ್ಯಗಳ ಅಗತ್ಯವಿದೆ?
- ಹೊಂದಿಕೊಳ್ಳುವಿಕೆ
- ತಾಂತ್ರಿಕ ಪರಿಣತಿ
- ಸಮಯ ಪ್ರಜ್ಞೆ ಮತ್ತು ಸಾಂಸ್ಥಿಕ ಕೌಶಲ್ಯಗಳು
ಅಗ್ರಿಕಲ್ಚರಲ್ ಬಯೋಟೆಕ್ನೋಲೊಜಿಸ್ಟ್ ಕಲಿಕೆಗೆ ಬೇಕಾಗುವ ಶೈಕ್ಷಣಿಕ ಅರ್ಹತೆ?
1ನೇ ಹಂತ: ಪಿಯುಸಿಯಲ್ಲಿ ವಿಜ್ಞಾನ ವಿಭಾಗ ಆಯ್ದುಕೊಳ್ಳಿ.
2ನೇ ಹಂತ: ಐಸಿಎಆರ್- ಎಐಇಇಎ ಪ್ರವೇಶ ಪರೀಕ್ಷೆ ಬರೆಯಬೇಕು
3ನೇ ಹಂತ: ಪದವಿಯಲ್ಲಿ ಬಿಎಸ್.ಸಿ (ಅಗ್ರಿಕಲ್ಚರಲ್ ಬಯೋಟೆಕ್ನೋಲಜಿ) ಆಯ್ದುಕೊಳ್ಳಿ.
4ನೇ ಹಂತ: ಸ್ನಾತಕೋತ್ತರ ಪದವಿ (ಅಗ್ರಿಕಲ್ಚರಲ್ ಬಯೋಟೆಕ್ನೋಲಜಿ) ಪಡೆಯಬೇಕು.
ಯಾಕೆ ಈ ಕೋರ್ಸ್ ಅನ್ನು ಆಯ್ಕೆ ಮಾಡಬೇಕು?
ಅಗ್ರಿಕಲ್ಚರಲ್ ಬಯೋಟೆಕ್ನೋಲೊಜಿಸ್ಟ್ ಎನ್ನುವುದು ವಿಶೇಷವಾದ ಕ್ಷೇತ್ರ.
ಪ್ರಸ್ತುತ ಆರ್ಥಿಕವಾಗಿ ಮತ್ತು ಭವಿಷ್ಯದಲ್ಲಿ ಬೇಡಿಕೆ ಹೆಚ್ಚುತ್ತಿರುವ ಕ್ಷೇತ್ರ ಇದಾಗಿದೆ.
ಈ ಕೋರ್ಸ್ ಗೆ ಎಲ್ಲೆಲ್ಲಾ ಅವಕಾಶಗಳಿವೆ?
ರಾಸಿ ಸೀಡ್ಸ್(Raasi Seeds)
ಗೋದ್ರೆಜ್ ಆಗ್ರೋವೆಟ್ ಲಿಮಿಟೆಡ್
ಡುಪಾಂಟ್ ಇಂಡಿಯಾ(Dupont India)
ಯಾವ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಬಹುದು?
ಜೆನೆಟಿಕ್ ಎಂಜಿನಿಯರಿಂಗ್(Genetic Engineering)
ಮೊಲೆಕ್ಯುಲರ್ ಮಾರ್ಕರ್ಸ್(Molecular Markers)
ಮೊಲೆಕ್ಯುಲರ್ ಡಯಗ್ನೊಸ್ಟಿಕ್ಸ್(Molecular Diagnostics)