Advertisement

#What’s App: ಸಂದೇಶಗಳನ್ನು ಕಳುಹಿಸಿದ 7 ದಿನಗಳ  ಬಳಿಕವೂ ಅಳಿಸುವ ಆಯ್ಕೆ..!

01:19 PM Nov 24, 2021 | Team Udayavani |

ʼಪ್ರತಿಯೊಬ್ಬರಿಗೂ ಅಳಿಸಿ’(ಡಿಲೀಟ್‌ ಟು ಎವ್ರಿವನ್) ವೈಶಿಷ್ಟ್ಯದ ಸಮಯವನ್ನು ವಿಸ್ತರಿಸಲು ವಾಟ್ಸ್‌ ಆ್ಯಪ್ ಯೋಜಿಸುತ್ತಿದೆ ಎಂದು ಬಹಳ ಹಿಂದೆಯೇ ವರದಿಯಾಗಿದೆ. ಈಗ, ಮೆಸೇಜಿಂಗ್ ಅಪ್ಲಿಕೇಶನ್ ವೈಶಿಷ್ಟ್ಯಕ್ಕಾಗಿ ವಿಭಿನ್ನ ಸಮಯದ ಮಿತಿಗಳನ್ನು ಪರೀಕ್ಷಿಸುತ್ತಿದೆ.

Advertisement

ಪ್ರಸ್ತುತ, ಬಳಕೆದಾರರು ಒಂದು ಗಂಟೆ, ಎಂಟು ನಿಮಿಷಗಳು ಮತ್ತು ಹದಿನಾರು ಸೆಕೆಂಡುಗಳ ನಂತರ ಒಮ್ಮೆ ಕಳುಹಿಸಿದ ಸಂದೇಶವನ್ನು ಅಳಿಸುವ ಆಯ್ಕೆಯನ್ನು ಮಾತ್ರ ಹೊಂದಿದ್ದಾರೆ. ಆದಾಗ್ಯೂ, ವಾಟ್ಸಾಪ್ ಬಳಕೆದಾರರು ತಮ್ಮ ಸಂದೇಶಗಳನ್ನು ಕಳುಹಿಸಿದ ಏಳು ದಿನಗಳ ನಂತರ ಗ್ರೂಪ್‌ ನಿಂದ ಅಥವಾ ವೈಯಕ್ತಿಕ ಸಂದೇಶಗಳನ್ನು ಅಳಿಸಬಹುದು ಎಂದು ವಾಟ್ಸ್‌ ಆ್ಯಪ್ ಮಾಹಿತಿ ನೀಡಿದೆ.

ಪ್ರತಿಯೊಬ್ಬರಿಗೂ ಅಳಿಸು ವೈಶಿಷ್ಟ್ಯವು ಉಪಯುಕ್ತ ಸಾಧನವಾಗಿದೆ, ಇದು ಒಬ್ಬ ವ್ಯಕ್ತಿಗೆ ನೀವು ತಪ್ಪಾಗಿ ಕಳುಹಿಸಿದ ಸಂದೇಶವನ್ನು ಅಳಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, ನೀವು ಸಂದೇಶವನ್ನು ಕಳುಹಿಸುದ ಒಂದು ಗಂಟೆಯವರೆಗೆ ಮಾತ್ರ ಅಳಿಸಬಹುದಾದ ಅವಕಾಶ ಇತ್ತು. ನೀವು ಈ ಗಡುವನ್ನು ತಪ್ಪಿಸಿಕೊಂಡರೆ, ನೀವು ಎಲ್ಲರಿಗೂ ಕಳುಹಿಸಿದ ಗ್ರೂಪ್ ಅಥವಾ ವೈಯಕ್ತಿಕ ಸಂದೇಶವನ್ನು ಅಳಿಸಲು ಸಾಧ್ಯವಿಲ್ಲ.‌

ಇದನ್ನೂ ಓದಿ:-ಆಪ್,ಕಾಂಗ್ರೆಸ್ ಎರಡೂ ಗೋವಾಕ್ಕೆ ಬಂದ ವಲಸೆ ಹಕ್ಕಿಗಳು: ದೇವೇಂದ್ರ ಫಡ್ನವೀಸ್ ವ್ಯಂಗ್ಯ

ಈ ಆಯ್ಕೆಯನ್ನು ಬಳಕೆದಾರರಿಗೆ ಸುಲಭಗೊಳಿಸಲು ಮತ್ತು ಸಮಯದ ಮಿತಿ ವಿಸ್ತರಿಸಲು ವಾಟ್ಸ್‌ ಆ್ಯಪ್ ಈಗ ಕೆಲಸ ಮಾಡುತ್ತಿದೆ.  ಸಂದೇಶ ಅಳಿಸಬಹುದಾದ ಸಮಯದ ಮಿತಿಯನ್ನು 7 ದಿನಗಳು ಮತ್ತು 8 ನಿಮಿಷಗಳವರೆಗೆ ಬದಲಾಯಿಸಲು ಯೋಜಿಸುತ್ತಿದೆ ಎಂದು ಖಚಿತಪಡಿಸಿದೆ.

Advertisement

ಈ ಹಿಂದೆ ವಾಟ್ಸ್‌ ಆ್ಯಪ್ ಸಮಯ ಮಿತಿ ಅನ್ನು ತೆಗೆದುಹಾಕುತ್ತದೆ ಮತ್ತು ಬಳಕೆದಾರರು ಸಂದೇಶಗಳನ್ನು ಕಳುಹಿಸುವ ಗಂಟೆಗಳು, ದಿನಗಳು, ವರ್ಷಗಳ ನಂತರವೂ ಎಲ್ಲರಿಗೂ ಸಂದೇಶಗಳನ್ನು ಅಳಿಸುವ ಆಯ್ಕೆಯನ್ನು ತೆರೆಯುತ್ತದೆ ಎಂದು ಊಹಿಸಲಾಗಿತ್ತು. ಆದರೆ ಈಗ ವಾಟ್ಸಾಪ್ ಪ್ರಸ್ತುತ ಸಮಯದ ಮಿತಿಯನ್ನು ದಿನಗಳ ಮಟ್ಟಿಗೆ ಮಾರ್ಪಡಿಸಲು ಯೋಜಿಸುತ್ತಿದೆ.

ಈ ವೈಶಿಷ್ಟ್ಯವು ಇನ್ನೂ ಅಭಿವೃದ್ಧಿ ಹಂತದಲ್ಲಿದೆ ಎಂದು ವಾಟ್ಸ್‌ ಆ್ಯಪ್ ಸಂಸ್ಥೆಯ ಸಲಹೆಗಾರ ವರದಿ ಮಾಡಿದ್ದಾರೆ. ಆದ್ದರಿಂದ ವಾಟ್ಸ್‌ ಆ್ಯಪ್  ತನ್ನ ಯೋಜನೆಯನ್ನು ಮತ್ತೆ ಬದಲಾಯಿಸಬಹುದು ಅಥವಾ ಹೊಸ ಸಮಯದ ಮಿತಿಯನ್ನು ಪರಿಚಯಿಸಬಹುದು.

ಈ ಸಂಬಂಧ ವಾಟ್ಸ್‌ ಆ್ಯಪ್ ಆಡಿಯೋ ಸಂದೇಶಗಳಿಗಾಗಿ ಹೊಸ ಪ್ಲೇಬ್ಯಾಕ್ ಆಯ್ಕೆಗಳನ್ನು ಕೂಡ ನವೀಕರಿಸಲು ಪರೀಕ್ಷಿಸುತ್ತಿದೆ. ಇದರ ಜೊತೆಗೆ ಇತರ ಅಪ್‌ ಡೇಟ್‌ಗಳನ್ನು ನೀಡುವ ಸಾಧ್ಯತೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next