Advertisement

ನುಡಿದದ್ದು ನಡೆದದ್ದು’ಹೊತ್ತಿಗೆ ಬಿಡುಗಡೆ

06:45 AM Apr 28, 2018 | Team Udayavani |

ಬೆಂಗಳೂರು: “ನುಡಿದಂತೆ ನಡೆದಿದ್ದೇವೆ’ ಎಂಬ ಕಾಂಗ್ರೆಸ್‌ ಘೋಷಣೆಗೆ ಪ್ರತಿಯಾಗಿ ಬಿಜೆಪಿ ಶುಕ್ರವಾರ “ನುಡಿದದ್ದು ನಡೆದದ್ದು’ಕಿರುಹೊತ್ತಿಗೆ ಬಿಡುಗಡೆ ಮಾಡಿದ್ದು, “2013ರಲ್ಲಿ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಹೇಳಿದ್ಯಾವುದನ್ನೂ ಮಾಡಿಲ್ಲ. ಇದು ಮಾತು ತಪ್ಪಿದ ಸರ್ಕಾರ’ ಎಂದು ಆರೋಪಿಸಿದೆ.

Advertisement

ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ದಿನವೇ ಹೊರತಂದ ಈ ಕಿರುಹೊತ್ತಿಗೆಯಲ್ಲಿ ಕಳೆದ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಇಲಾಖಾವಾರು ನೀಡಿದ್ದ ಒಟ್ಟಾರೆ 269 ಭರವಸೆಗಳು ಮತ್ತು ಅವುಗಳ ಸದ್ಯದ ಸ್ಥಿತಿಗತಿಯನ್ನು ಪಟ್ಟಿಮಾಡಿರುವ ಬಿಜೆಪಿ,ಈವರೆಗೆ ಪ್ರಣಾಳಿಕೆಯಲ್ಲಿನ ಯಾವೊಂದೂ ಅಂಶಗಳೂ ಈಡೇರಿಲ್ಲ ಎಂದು ದೂರಿದೆ.

ಶುಕ್ರವಾರ ಕಿರುಹೊತ್ತಿಗೆ ಬಿಡುಗಡೆ ಮಾಡಿದ ಸಂಸದೆ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ, ಕಾಂಗ್ರೆಸ್‌ ಗೃಹ ಇಲಾಖೆ ಬಲವರ್ಧನೆ ಮಾಡುವುದಾಗಿ ಹೇಳಲಾಗಿತ್ತು. ಆದರೆ, ವಾಸ್ತವವಾಗಿ ಬಲವರ್ಧನೆಯನ್ನು ಮತ್ತಷ್ಟು ಕುಗ್ಗಿಸಲಾಗಿದೆ.

ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ, ಎಚ್‌.ವೈ. ಮೇಟಿ ಲೈಂಗಿಕ ಹಗರಣ, ಮುಖ್ಯಮಂತ್ರಿ ಪುತ್ರನ ವಿರುದಟಛಿದ ದೂರು, ಹ್ಯೂಬ್ಲೆಟ್‌ ವಾಚ್‌ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳನ್ನು ತನ್ನ ಇಚ್ಛೆಯಂತೆ ವರದಿ ನೀಡಲು ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯರಾದ ಅಶ್ವತ್ಥನಾರಾಯಣ ಮತ್ತು ಭಾರತಿ ಶೆಟ್ಟಿ,ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ
ಮಂಜುಳಾ ಇದ್ದರು.

Advertisement

ವಿಶೇಷ ಕಾನೂನು ಪ್ರಸ್ತಾಪವೇ ಇಲ್ಲ: ಬೆಂಗಳೂರು ನಗರ ಆಡಳಿತಕ್ಕಾಗಿ ವಿಶೇಷ ಕಾನೂನು ರಚಿಸುವುದಾಗಿ ಕಾಂಗ್ರೆಸ್‌
ಹೇಳಿಕೊಂಡಿತ್ತು. ಆದರೆ, 5 ವರ್ಷಗಳಲ್ಲಿ ಇದರ ಪ್ರಸ್ತಾಪವೇ ಆಗಲಿಲ್ಲ. ಉಕ್ಕಿನ ಸೇತುವೆ ನಿರ್ಮಾಣಕ್ಕೆ ಅನುಮತಿ ನೀಡಿ, ಕಿಕ್‌ ಬ್ಯಾಕ್‌ ಪಡೆದ ಆರೋಪ ಸರ್ಕಾರದ ಮೇಲಿದೆ. ವೃಕ್ಷ ಸಂವರ್ಧನೆ ಮಾಡುವುದಾಗಿ ಹೇಳಿತ್ತು. ಆದರೆ,ಮೆಟ್ರೋ, ಸ್ಟೀಲ್‌ ಬ್ರಿಡ್ಜ್, ವೈಟ್‌ಟಾಪಿಂಗ್‌ಗಾಗಿ ಮರ ಕಡಿದರೆ ಹೊರತು, ಮರನೆಟ್ಟಿದ್ದು ಕಾಣಲಿಲ್ಲ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದರು.

ಕೇಂದ್ರ ಚುನಾವಣಾ ಆಯೋಗಕ್ಕೆ ದೂರು
ಬೆಂಗಳೂರು
: ರಾಜ್ಯ ಚುನಾವಣಾ ಆಯೋಗದ ವಿರುದ್ಧ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ತಿಳಿಸಿದರು.

ನಗರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ವಿರುದ್ಧದ ಟಿವಿ ಜಾಹಿರಾತಿಗೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗದ ಸಲಹೆ-ಸೂಚನೆಯಂತೆ ಮಾರ್ಪಾಡು ಮಾಡಿಕೊಂಡು, ಅದಕ್ಕೆ ಲಿಖೀತ ಅನುಮತಿ ಪಡೆಯಲಾಗಿದೆ. ತದನಂತರವೇ ಪ್ರಸಾರ ಮಾಡಲಾಗುತ್ತಿದೆ. ಆದಾಗ್ಯೂ ತಡೆ ನೀಡಿರುವುದು ಸರಿ ಅಲ್ಲ. ಇದರ ವಿರುದಟಛಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಹೇಳಿದರು. ಶುಕ್ರವಾರ ಸಮಾವೇಶವೊಂದರಲ್ಲಿ ವಂದೇ ಮಾತರಂ ಹಾಡುವಾಗ ಸಿಎಂ ಸಿದ್ದರಾಮಯ್ಯ ಅವರು ಎದ್ದುನಿಲ್ಲದೆ ಅಗೌರವ ಸೂಚಿಸಿದ್ದಾರೆ. ಇದಕ್ಕಾಗಿ ರಾಜ್ಯದ ಕ್ಷಮೆ ಕೇಳಬೇಕು ಎಂದು ಇದೇ ವೇಳೆ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next