Advertisement

ಲೆನಿನ್‌ ಪ್ರತಿಮೆ ಇರಿಸಿದವರೇ ತೆಗೆಸಿದ್ದಾರೆ:ಬಿಜೆಪಿ ನಾಯಕ ವಿವಾದ

11:26 AM Mar 09, 2018 | Team Udayavani |

ಹೊಸದಿಲ್ಲಿ : ತ್ರಿಪುರದ ಬೆಲೋನಿಯಾದಲ್ಲಿ ನಡೆದಿದ್ದ  ಪ್ರತಿಮೆ ಧ್ವಂಸ ಕುರಿತಾದ ವರದಿಗಳನ್ನು ತಪ್ಪೆಂದು ಹೇಳಿರುವ ಬಿಜೆಪಿಯ ರಾಮ ಮಾಧವ್‌ ಅವರ “ಲೆನಿನ್‌ ಪ್ರತಿಮೆಯನ್ನು ಸ್ಥಾಪಿಸಿದವರೇ ಅದನ್ನು ತೆಗೆದಿದ್ದಾರೆಯೇ ಹೊರತು ಪ್ರತಿಮೆ ಧ್ವಂಸ ಕೃತ್ಯ ನಡೆದಿಲ್ಲ’ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. 

Advertisement

ಸಿಪಿಎಂ ನ ಮಾಣಿಕ್‌ ಸರ್ಕಾರ್‌ ಅವರು ರಾಜೀನಾಮೆ ನೀಡಿ ರಾಜ್ಯದಲ್ಲಿ ಬಿಜೆಪಿ ಸರಕಾರಕ್ಕೆ ಅವಕಾಶ ಮಾಡಿಕೊಟ್ಟ ಮರುದಿನವೇ ಬಲೋನಿಯಾ ಕಾಲೇಜು ಚೌಕದಲ್ಲಿದ್ದ ವ್ಲಾದಿಮಿರ್‌ ಲೆನಿನ್‌ ಅವರ ಪ್ರತಿಮೆಯನ್ನು ಬುಲ್‌ಡೋಜರ್‌ ಮೂಲಕ ಕಿತ್ತೆಸೆಯಲಾದ ವಿಡಿಯೋ ಚಿತ್ರಿಕೆ ದೇಶಾದ್ಯಂತ ಭಾರೀ ಸುದ್ದಿ ಮಾಡಿ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು. 

“ಲೆನಿನ್‌ ಪ್ರತಿಮೆಯನ್ನು ಯಾರು ಸ್ಥಾಪಿಸದ್ದರೋ ಅವರೇ ಅದನ್ನು ತೆಗೆಸಿದ್ದಾರೆ. ಇದು ಪ್ರತಿಮೆ ಧ್ವಂಸದ ಕೃತ್ಯವಲ್ಲ. ತ್ರಿಪುರದಲ್ಲಿ ಎಲ್ಲಿಯೂ ಯಾವುದೇ ಪ್ರತಿಮೆಯನ್ನು ಧ್ವಂಸ ಮಾಡಲಾಗಿಲ್ಲ. ಲೆನಿನ್‌ ಪ್ರತಿಮೆ ಧ್ವಂಸ ಮಾಡಲಾಯಿತೆಂಬ ಮಾಹಿತಿ ಸರಿಯಲ್ಲ. ಖಾಸಗಿ ಜಾಗದಲ್ಲಿ ಆ ಪ್ರತಿಮೆಯನ್ನು ಹಾಕಿಸಿದವರೇ ಅದನ್ನು ತೆಗೆಸಿದ್ದಾರೆ. ಆದುದರಿಂದ ಇದು ಪ್ರತಿಮೆ ಭಂಜನೆ ಕೃತ್ಯವಲ್ಲ’ ಎಂದು ರಾಮ ಮಾಧವ್‌ ಸ್ಪಷ್ಟಪಡಿಸಿದ್ದಾರೆ. ಅವರ ಹೇಳಿಕೆಯನ್ನು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. 

ವಿಚಿತ್ರವೆಂದರೆ ಲೆನಿನ್‌ ಪ್ರತಿಮೆ “ಧ್ವಂಸ’ ವರದಿ ಎಲ್ಲೆಡೆ ಹರಡುತ್ತಲೇ ಪೆರಿಯಾರ್‌, ಡಾ. ಬಿ ಆರ್‌ ಅಂಬೇಡ್ಕರ್‌, ಮಹಾತ್ಮ ಗಾಂಧಿ, ಶ್ಯಾಮಪ್ರಸಾದ್‌ ಮುಖರ್ಜಿ ಅವರ ಪ್ರತಿಮೆಗಳನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದರು. ಅದಾಗಿ ಈಗ ಹನುಮಾನ್‌ ದೇವರ ವಿಗ್ರಹ ಕೂಡ ದುಷ್ಕರ್ಮಿಗಳ ದಾಳಿಗೆ ಗುರಿಯಾದ ಘಟನೆ ನಡೆದಿದೆ. 

Advertisement

Udayavani is now on Telegram. Click here to join our channel and stay updated with the latest news.

Next