Advertisement
ನವಿ ಮುಂಬೈ ಪೊಲೀಸರ ಪ್ರಕಾರ, ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಸಂಬಂಧ ಹೊಂದಿರುವ ಆರೋಪಿಗಳ ಮೇಲೆ ಕೊಲೆಗೆ ಸಂಚು ಮತ್ತು ಇತರ ಗಂಭೀರ ಅಪರಾಧಗಳ ಆರೋಪ ಹೊರಿಸಲಾಗಿದೆ.
ಆಗಸ್ಟ್ 2023 ಮತ್ತು ಏಪ್ರಿಲ್ 2024 ರ ನಡುವೆ ಸಲ್ಮಾನ್ ಖಾನ್ ಹತ್ಯೆಯ ಯೋಜನೆ ರೂಪಿಸಲಾಗಿತ್ತು ಎಂದು ನವಿ ಮುಂಬೈ ಪೊಲೀಸರ ಚಾರ್ಜ್ ಶೀಟ್‌ನಲ್ಲಿ ಹೇಳಲಾಗಿದೆ. ಇದಕ್ಕಾಗಿ ಸುಮಾರು 60 ರಿಂದ 70 ಮಂದಿ ನಟ ಸಲ್ಮಾನ್ ಖಾನ್ ಅವರ ಚಲನವಲನದ ಮೇಲೆ ನಿಗಾ ಇಡುತ್ತಿದ್ದರು. ತನಿಖೆಯ ವೇಳೆ ಸಲ್ಮಾನ್ ಖಾನ್ ಅವರ ಮುಂಬೈನ ಮನೆ, ಪನ್ವೇಲ್‌ನಲ್ಲಿರುವ ಫಾರ್ಮ್ ಹೌಸ್ ಮತ್ತು ಗೋರೆಗಾಂವ್‌ನ ಫಿಲ್ಮ್ ಸಿಟಿಯಲ್ಲಿನ ಪ್ರತಿಯೊಂದು ಚಲನವಲನವನ್ನು ಗಮನಿಸುತ್ತಿದ್ದರು ಎನ್ನಲಾಗಿದೆ. ಅಷ್ಟು ಮಾತ್ರವಲ್ಲದೆ ಆರೋಪಿಗಳು ಸಲ್ಮಾನ್ ಖಾನ್ ಅವರನ್ನು ಕೊಲ್ಲಲು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗರನ್ನು ನೇಮಿಸಿಕೊಂಡಿದ್ದರು ಎಂದು ಪೊಲೀಸರು ಚಾರ್ಜ್ ಶೀಟ್‌ನಲ್ಲಿ ತಿಳಿಸಿದ್ದಾರೆ.
Related Articles
ಎಲ್ಲಾ ಶೂಟರ್‌ಗಳು ಗೋಲ್ಡಿ ಬ್ರಾರ್ ಮತ್ತು ಅನ್ಮೋಲ್ ಬಿಷ್ಣೋಯ್ ಅವರ ಆದೇಶಕ್ಕಾಗಿ ಕಾಯುತ್ತಿದ್ದರು ಎಂದು ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಆದೇಶ ಬಂದ ತಕ್ಷಣ ಪಾಕಿಸ್ತಾನದಿಂದ ತಂದ ಆಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿ ಸಲ್ಮಾನ್ ಖಾನ್ ಮೇಲೆ ದಾಳಿ ನಡೆಸಲು ತಯಾರಿ ನಡೆಸಲಾಗಿತ್ತು. ಈ ಎಲ್ಲಾ ಶೂಟರ್‌ಗಳು ಪುಣೆ, ರಾಯಗಢ, ನವಿ ಮುಂಬೈ, ಥಾಣೆ ಮತ್ತು ಗುಜರಾತ್‌ನಲ್ಲಿ ನೆಲೆಸಿದ್ದರು ಎನ್ನಲಾಗಿದ್ದು ಬಳಿಕ ಸಲ್ಮಾನ್ ಖಾನ್ ಹತ್ಯೆ ನಡೆಸಿ ಇವರೆಲ್ಲರೂ ಕನ್ಯಾಕುಮಾರಿಗೆ ತೆರಳಿ ಅಲ್ಲಿ ಒಟ್ಟಾಗಿ ಬಳಿಕ ಅಲ್ಲಿಂದ ಬೋಟ್ ಮೂಲಕ ಶ್ರೀಲಂಕಾ ಕಡೆಗೆ ತೆರಳಿ ಅಲ್ಲಿಂದ ಯಾವ ಯಾವ ದೇಶಕ್ಕೆ ಹೋಗಬೇಕು ಎಂದು ಪ್ಲಾನ್ ಮಾಡಲಾಗಿತ್ತು.
Advertisement
ಇದನ್ನೂ ಓದಿ: Tragedy: ಯುವಕನಿಗೆ ನಿದ್ದೆಯಲ್ಲಿ ನಡೆಯುವ ಅಭ್ಯಾಸ… ಆರನೇ ಮಹಡಿಯಿಂದ ಬಿದ್ದು ಮೃತ್ಯು