Advertisement

ಸುಶಾಂತ್ ಸಿಂಗ್ ಆತ್ಮಹತ್ಯೆಗೂ ಮುನ್ನ ಗೂಗಲ್ ನಲ್ಲಿ ಹುಡುಕಾಡಿದ ವಿಷಯ ಯಾವುದು ಗೊತ್ತಾ?

04:07 PM Aug 03, 2020 | Nagendra Trasi |

ಮುಂಬೈ:ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸ್ ಕಮೀಷನರ್ ಪರಂ ಬೀರ್ ಸಿಂಗ್

Advertisement

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಸುಶಾಂತ್ ಸಿಂಗ್ ಸಾಯುವ ಮೊದಲು ಗೂಗಲ್ ನಲ್ಲಿ ಕೆಲವು ಮಾಹಿತಿ ಸರ್ಚ್ (ಹುಡುಕು) ಮಾಡಿರುವ ವಿಷಯ ಬಹಿರಂಗಗೊಳಿಸಿದ್ದಾರೆ.

ಮುಂಬೈ ಪೊಲೀಸ್ ಕಮಿಷನರ್ ಸಿಂಗ್ ಅವರು ನೀಡಿರುವ ಮಾಹಿತಿ ಪ್ರಕಾರ, ಸುಶಾಂತ್ ಸಿಂಗ್ ಗೂಗಲ್ ನಲ್ಲಿ ಅತೀ ಹೆಚ್ಚು ಬಾರಿ “ನೋವಿಲ್ಲದ ಸಾವು” , ಸ್ಕಿಜೋಫ್ರೇನಿಯಾ(ತೀವ್ರ ತರದ ಖಿನ್ನತೆ) ಹಾಗೂ ಬೈಪೊಲಾರ್ ಡಿಸಾರ್ಡರ್(ಮಾನಸಿಕ ಕಾಯಿಲೆ) ವಿಷಯದ ಕುರಿತು ಹುಡುಕಾಡಿರುವುದಾಗಿ ತಿಳಿಸಿದ್ದಾರೆ.

ಮಾಜಿ ಕಾರ್ಯದರ್ಶಿ, ಉಡುಪಿ ಮೂಲದ ದಿಶಾ ಸಾಲಿಯಾನ್ ಸಾವಿನ ಪ್ರಕರಣದಲ್ಲಿ ಸುಶಾಂತ್ ಸಿಂಗ್ ವಿರುದ್ಧ ಆರೋಪ ಕೇಳಿ ಬರತೊಡಗಿದ ನಂತರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಸುಶಾಂತ್ ಸಾಯೋದಕ್ಕಿಂತ ಐದು ದಿನದ ಮೊದಲು ದಿಶಾ ಆತ್ಮಹತ್ಯೆಗೆ ಶರಣಾಗಿದ್ದಳು. ಅಷ್ಟೇ ಅಲ್ಲ ತನ್ನ ಬಗ್ಗೆ ಏನೆಲ್ಲಾ ಲೇಖನ, ವರದಿಗಳು ಬಂದಿದೆ ಎಂಬ ಬಗ್ಗೆ ಸುಶಾಂತ್ ಗೂಗಲ್ ನಲ್ಲಿ ಹುಡುಕಾಡಿರುವುದಾಗಿ ಸಿಂಗ್ ವಿವರಿಸಿದ್ದಾರೆ.

Advertisement

ಜೂನ್ 14(2020)ರಂದು ಸುಶಾಂತ್ ಸಿಂಗ್ ರಜಪೂತ್ ಮುಂಬೈನ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಮುಂಬೈನಲ್ಲಿಯೇ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಗಿತ್ತು. ಜುಲೈ26ರಂದು ಸುಶಾಂತ್ ತಂದೆ ಕೆಕೆ ಸಿಂಗ್ ಅವರು ರಿಯಾ ಚಕ್ರವರ್ತಿ(ಸುಶಾಂತ್ ಗೆಳತಿ) ವಿರುದ್ಧ ಬಿಹಾರದಲ್ಲಿ ದೂರು ದಾಖಲಿಸಿದ್ದರು.

ಪಾಟ್ನಾದಿಂದ ಆಗಮಿಸಿದ್ದ ಪೊಲೀಸರ ತಂಡ ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದೆ. ಏತನ್ಮಧ್ಯೆ ಪಾಟ್ನದ ಪೊಲೀಸ್ ವರಿಷ್ಠಾಧಿಕಾರಿ ವಿನಯ್ ತಿವಾರಿ ಭಾನುವಾರ ಮುಂಬೈಗೆ ಆಗಮಿಸುತ್ತಿರುವಂತೆಯೇ ಬಿಎಂಸಿ (ಮುಂಬೈ ಮಹಾನಗರ ಪಾಲಿಕೆ) ಅಧಿಕಾರಿಗಳು ರಾತ್ರಿ ಬಲವಂತವಾಗಿ ಕ್ವಾರಂಟೈನ್ ಗೆ ಕಳುಹಿಸಿರುವುದಾಗಿ ವರದಿಯಾಗಿದೆ.

ಯಾವುದೇ ಅಧಿಕಾರಿಯನ್ನು ಕ್ವಾರಂಟೈನ್ ಕಳುಹಿಸಿರುವ ಕಾರ್ಯದಲ್ಲಿ ನಮ್ಮದು ಯಾವ ಕೈವಾಡವೂ ಇಲ್ಲ. ಇದು ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳ ಕೆಲಸವಾಗಿದೆ ಎಂದು ಮುಂಬೈ ಪೊಲೀಸ್ ಕಮಿಷನರ್ ಸಿಂಗ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next