Advertisement

ಬಜೆಟ್‌ ಮೇಲೆ ಮಾರುಕಟ್ಟೆಯ ನಿರೀಕ್ಷೆಯೇನು?

08:10 PM Jan 31, 2022 | Team Udayavani |

ನವದೆಹಲಿ: ಫೆ.1ರಂದು ಸಚಿವೆ ನಿರ್ಮಲಾ ಸೀತಾರಾಮನ್‌ “ಪೇಪರ್‌ ಲೆಸ್‌’ ಬಜೆಟ್‌ ಮಂಡಿಸಲಿದ್ದು ಷೇರುಮಾರುಕಟ್ಟೆ ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ.

Advertisement

ಮಾರುಕಟ್ಟೆಯು ಮೂಲತಃ ಸ್ಥಿರತೆಯನ್ನು ಬಯಸುತ್ತಿದೆ. ಅದರೊಂದಿಗೆ ಸರ್ಕಾರದ ನೀತಿ ನಿರೂಪಣೆಗಳು, ಯೋಜನೆಗಳು ಈಗ ಹೇಗಿವೆಯೋ ಹಾಗೆಯೇ ಯಥಾವತ್ತಾಗಿ ಮುಂದುವರಿಯಲಿ ಎಂಬ ಆಶಯವನ್ನು ಬಂಡವಾಳಗಾರರು, ಉದ್ಯಮಿಗಳು ಹೊಂದಿದ್ದಾರೆ.

ಹಾಗಾಗಿ, ಹೊಸ ಯೋಜನೆಗಳಲ್ಲಿ ಸರ್ಕಾರದ ಹೂಡಿಕೆ ಈಗ ಸದ್ಯಕ್ಕೆ ಬೇಡ ಎನ್ನುವುದು ಅವರ ವಾದ. ಆದರೆ, ಅಂಥ ಹೊಸ ಯೋಜನೆಗಳೇನಾದರೂ ಬಜೆಟ್‌ನಲ್ಲಿ ಘೋಷಿಸಲ್ಪಟ್ಟರೆ ಅದು ಹಣಕಾಸು ಕೊರತೆಗೆ ಕಾರಣವಾಗುತ್ತೆ ಅನ್ನೋದು ಎಲ್ಲರ ಅನಿಸಿಕೆ.

ಇನ್ನು, ಮೂಲಸೌಕರ್ಯ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಘೋಷಿಸಿರುವ ಯೋಜನೆಗಳನ್ನು ಮತ್ತಷ್ಟು ಮುಂದುವರಿಸಿದರೆ ಒಳ್ಳೆಯದು ಎನ್ನಲಾಗುತ್ತಿದೆ.

ರಿಯಲ್‌ ಎಸ್ಟೇಟ್‌ ಉದ್ಯಮವು, ಮನೆಗಳು 2ನೇ ಹಾಗೂ 3ನೇ ಬಾರಿ ಮಾರಾಟವಾದಾಗ ಕೆಲವಾರು ತೆರಿಗೆ ವಿನಾಯ್ತಿಗಳು ಸಿಗಲೆಂದು ಆಶಿಸುತ್ತಿದೆ. ಹಾಗೆಯೆ, ಗೃಹ ಸಾಲ ಆಧಾರಿತ ಹೊರೆಗಳನ್ನು ಇಳಿಸುವ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದೆ.

Advertisement

ಆಟೋಮೊಬೈಲ್‌ ಕಂಪನಿಗಳು, ಇ-ವಾಹನಗಳ ಬೆಳವಣಿಗೆಗೆ ಪೂರಕವಾದ ವಾತಾವರಣಕ್ಕೆ ಕಾಯುತ್ತಿದೆ. ಬ್ಯಾಟರಿ ಪ್ಯಾಕ್‌ಗಳ ಮೇಲಿನ ಶೇ.18 ಜಿಎಸ್‌ಟಿಯನ್ನು ಶೇ.5ಕ್ಕೆ ಇಳಿಸುವ ಕುರಿತು ನಿರೀಕ್ಷೆ ಹೊಂದಿದೆ. ಹಾಗೆಯೇ ವಾಹನ ಚಾರ್ಜಿಂಗ್‌ ಕೇಂದ್ರಗಳನ್ನು ಹೆಚ್ಚಿಸುವ ಕುರಿತು ನಿರೀಕ್ಷೆಯನ್ನು ಹೊಂದಲಾಗಿದೆ.

ಇನ್ನು, ಔಷಧಿಗಳನ್ನು ತಯಾರಿಸುವ ಕಂಪನಿಗಳಿಗೆ ಹೆಚ್ಚಿನ ಉತ್ತೇಜನ ಕುರಿತಾದ ಆಶಾದಾಯಕ ಅಂಶಗಳು ಈ ಬಾರಿಯ ಬಜೆಟ್‌ನಲ್ಲಿ ಘೋಷಿಸುವ ನಿರೀಕ್ಷೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next