Advertisement

ಕರ್ನಾಟಕದಲ್ಲಿ ಆತ್ಮಹತ್ಯೆ ಹೆಚ್ಚಲು ಕಾರಣವೇನು?

06:55 AM Apr 26, 2018 | |

ಬೆಂಗಳೂರು: ಎಐಸಿಸಿ ಅಧ್ಯಕ್ಷರಾಗಿ ರಾಹುಲ್‌ಗಾಂಧಿ ಆಯ್ಕೆಯಾದ ಬಳಿಕ ಕಾಂಗ್ರೆಸ್‌ನ ಅಧಃಪತನವಾಗುತ್ತಿದೆ ಎಂದು ವ್ಯಂಗ್ಯವಾಡಿರುವ ಕೇಂದ್ರ ಸಚಿವ ಅನಂತಕುಮಾರ್‌, ಗುರುವಾರ ರಾಜ್ಯ ಪ್ರವಾಸ ಕೈಗೊಳ್ಳಲಿರುವ ರಾಹುಲ್‌ ಗಾಂಧಿಯವರಿಗೆ ಸ್ವಾಗತದ ಹಿನ್ನೆಲೆಯಲ್ಲಿ ಐದು ಪ್ರಶ್ನೆಗಳನ್ನು ಕೇಳಿದ್ದು, ಪ್ರವಾಸದ ವೇಳೆ ಉತ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.

Advertisement

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷರಾಗಿ ರಾಹುಲ್‌ ಗಾಂಧಿ ಆಯ್ಕೆಯಾಗುತ್ತಿದ್ದಂತೆ ಹಿಮಾಚಲ ಪ್ರದೇಶ, ಮೇಘಾಲಯಗಳಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರ ಕಳೆದುಕೊಂಡಿದೆ. ರಾಹುಲ್‌ಗಾಂಧಿ ಸಾರಥ್ಯ ಎಂದರೆ
ಕಾಂಗ್ರೆಸ್‌ ಪತನ. “ಭಾರತ್‌ ಖೋಜೋ’ (ಭಾರತಶೋಧಿಸಿ ) ಎನ್ನುತ್ತಾ ರಾಹುಲ್‌ಗಾಂಧಿ ರಾಜಕೀಯ ಜೀವನ ಆರಂಭಿಸಿದರು. ಈಗ ರಾಹುಲ್‌ಗಾಂಧಿ ಹೋದಲ್ಲೆಲ್ಲಾ ಕಾಂಗ್ರೆಸ್‌ ಸೋತಿದೆ. ಆ ಮೂಲಕ “ಭಾರತ್‌ ಖೋಜೋ’ ಅಭಿಯಾನವನ್ನು “ಕಾಂಗ್ರೆಸ್‌ ಖೋಜೋ’ ಆಗಿ ರೂಪಿಸಿದ ಕೀರ್ತಿ ಅವರಿಗೆ ಸಲ್ಲಬೇಕು ಎಂದು ಹೇಳಿದರು.

ಪ್ರಶ್ನೆ 1: ರಾಜ್ಯದಲ್ಲಿ ಕಳೆದ ನಾಲ್ಕೂವರೆ ವರ್ಷದಲ್ಲಿ 3718 ರೈತರ ಆತ್ಮಹತ್ಯೆ ವರದಿಯಾಗಿದ್ದು, ದೇಶದಲ್ಲೇ ಅತಿ ಹೆಚ್ಚು
ಆತ್ಮಹತ್ಯೆ ಸಂಭವಿಸಿದೆ. ಬಿಜೆಪಿ ಸರ್ಕಾರವಿರುವ ರಾಜ್ಯಗಳಲ್ಲಿ ಕೈಗೊಂಡ ಕ್ರಮಗಳಿಂದ ರೈತರ ಆತ್ಮಹತ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಹೀಗಿರುವಾಗ ಕರ್ನಾಟಕದಲ್ಲಿ ಆತ್ಮಹತ್ಯೆ ಹೆಚ್ಚಲು ಕಾರಣವೇನು?

ಪ್ರಶ್ನೆ 2: ಈ ಹಿಂದೆ ಡಾ.ಮನಮೋಹನ್‌ಸಿಂಗ್‌ ಅವರು ಪ್ರಧಾನಿಯಾಗಿದ್ದ 2004-2014ರವರೆಗಿನ ಅವಧಿಯಲ್ಲಿ ಕರ್ನಾಟಕ ಪ್ರಕೃತಿ ವಿಕೋಪ, ಬರಕ್ಕೆ ತುತ್ತಾದಾಗ ನೀಡಿದ ಪರಿಹಾರ 4822 ಕೋಟಿ ರೂ. ಮಾತ್ರ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 2014ರಿಂದ 2017ರವರೆಗೆ ಬಿಡುಗಡೆ ಮಾಡಿರುವ ಪರಿಹಾರ 5693.69 ಕೋಟಿ ರೂ. ಕೇಂದ್ರ ಸರ್ಕಾರದ ಅನುದಾನವನ್ನು
ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫ‌ಲವಾಗಿದೆ. ಕೇಂದ್ರದ ಅನುದಾನವನ್ನು ಸಮರ್ಪಕವಾಗಿ
ಬಳಸಿಕೊಳ್ಳದಿರಲು ಕಾರಣವೇನು?

ಪ್ರಶ್ನೆ 3: ಇತ್ತೀಚೆಗೆ ಅತ್ಯಾಚಾರ ಘಟನೆಗಳನ್ನು ಖಂಡಿಸಿ ರಾಹುಲ್‌ಗಾಂಧಿಯವರು ಇಂಡಿಯಾ ಗೇಟ್‌ ಬಳಿ ಮಧ್ಯರಾತ್ರಿ ಮೇಣದಬತ್ತಿಮೆರವಣಿಗೆ ನಡೆಸಿದ್ದರು. ರಾಜ್ಯದಲ್ಲಿ ಕಳೆದ ನಾಲ್ಕೂವರೆ ವರ್ಷದಲ್ಲಿ 3857 ಲೈಂಗಿಕ ದೌರ್ಜನ್ಯ ಪ್ರಕರಣ, 800ಕ್ಕೂ ಹೆಚ್ಚು ದಲಿತ ಮಹಿಳೆಯರ ಮೇಲೆ ಅತ್ಯಾಚಾರ, 7523 ಮಹಿಳೆಯರ ಹತ್ಯೆ ನಡೆದಿದೆ. ಇದನ್ನು ಖಂಡಿಸಿ ಇಲ್ಲಿಯೂ ಮೇಣದಬತ್ತಿ ಬೆಳಗಿಸಿ ಪ್ರತಿಭಟನೆ ನಡೆಸುವಿರಾ?

Advertisement

ಪ್ರಶ್ನೆ 4: ಕೋಮು ಸೌಹಾರ್ದತೆಗಾಗಿ ಇತ್ತೀಚೆಗೆ ಕಾಂಗ್ರೆಸ್‌ ಮುಖಂಡರು ಹೊಟ್ಟೆಭರ್ತಿ “ಚೋಲೆ ಬಟೂರ’ ಆಹಾರ ಸೇವಿಸಿ ಬೆಳಗ್ಗೆ 11ರಿಂದ ಮಧ್ಯಾಹ್ನ 2ರವರೆಗೆ ಧರಣಿ ನಡೆಸಿದರು. ರಾಜ್ಯದಲ್ಲಿ 2015ನೇ ಸಾಲಿನಲ್ಲಿ 254 ಕೋಮು ಗಲಭೆ ಘಟನೆ ವರದಿಯಾಗಿದೆ. ಹಾಗಾದರೆ, ಪಿಎಫ್ಐ, ಎಸ್‌ ಡಿಪಿಐ ಸಂಘಟನೆಯ 175 ಕಾರ್ಯಕರ್ತರ ವಿರುದಟಛಿದ ಕ್ರಿಮಿನಲ್‌ ಪ್ರಕರಣಗಳನ್ನು ವಾಪಸ್‌ ಪಡೆದಿರುವುದಕ್ಕೆ ಉತ್ತರ ನೀಡಬೇಕು? 

ಪ್ರಶ್ನೆ 5: 10.7 ಕಿ.ಮೀ. ಉದ್ದದ ಆರ್ಟಿರಿಯಲ್‌ ರಸ್ತೆ ಅಭಿವೃದ್ಧಿಗೆ 468 ಕೋಟಿ ರೂ. ವೆಚ್ಚ ನಿಗದಿಪಡಿಸಲಾಗಿದೆ. ಆದರೆ ಇಸ್ರೋ ಮಂಗಳಯಾನ ಯೋಜನೆಗೆ ಮಾಡಿದ ವೆಚ್ಚ  50 ಕೋಟಿ ರೂ. ಅಂದರೆ ಮಂಗಳಯಾನ ಯೋಜನೆ ವೆಚ್ಚಕ್ಕಿಂತ 18 ಕೋಟಿ ರೂ. ಹೆಚ್ಚು ಹಣವನ್ನು 10 ಕಿ.ಮೀ. ಉದ್ದದ ರಸ್ತೆಗೆ ನಿಗದಿಪಡಿಸಿರುವುದನ್ನು ಹೋಲಿಸಿ ರಾಹುಲ್‌ ಗಾಂಧಿ ಏನು ಹೇಳುತ್ತಾರೆ?

Advertisement

Udayavani is now on Telegram. Click here to join our channel and stay updated with the latest news.

Next