Advertisement

ಕಾಂಗ್ರೆಸ್‌ ಸಾಧನೆಗೆ ಬಿಜೆಪಿ ಹೆಸರೇಕೆ?

07:08 AM Jun 09, 2020 | Team Udayavani |

ವಿಜಯಪುರ: ಬಿಜೆಪಿ ಸರ್ಕಾರದ ನೀತಿಗಳು ದೇಶದ ಆರ್ಥಿಕತೆಯನ್ನು ಪಾತಾಳಕ್ಕೆ ತಳ್ಳುತ್ತಿವೆ. ಅಲ್ಲದೆ ಬಿಜೆಪಿಯು ಕಾಂಗ್ರೆಸ್‌ನ 60 ವರ್ಷದ ಸಾಧನೆಯನ್ನು ತನ್ನದೇ ಎಂದು ಬಿಂಬಿಸಿಕೊಳ್ಳುತ್ತಿದೆ ಎಂದು ಕೆಪಿಸಿಸಿ ಸದಸ್ಯ ಎ.ಸಿ.ಶ್ರೀನಿವಾಸ್‌ ಆರೋಪಿಸಿದರು.

Advertisement

ಪಟ್ಟಣದ ನಂದಿನಿ ಶಾಲೆಯಲ್ಲಿ ಜೂಮ್‌ ಆ್ಯಪ್‌ ಮೂಲಕ ನಡೆದ ಪಕ್ಷದ ಮುಖಂಡರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಸುಳ್ಳುಸುದ್ದಿ ಹಬ್ಬಿಸುತ್ತಿದೆ. ಬ್ರಿಟಿಷರಿಂದ  ದೋಚಲ್ಪಟ್ಟಿದ್ದ ದೇಶವನ್ನು ಜಾತ್ಯತೀತ ತತ್ವದ ಅಪಾಯದಲ್ಲಿ ಕಟ್ಟಲಾಯಿತು. ವಿಶ್ವದ ಶಕ್ತಿಶಾಲಿ ರಾಷ್ಟ್ರವಾಗಿದೆ. ಕಾಂಗ್ರೆಸ್‌ ಕಾರ್ಯಕರ್ತರು ಈ ಸತ್ಯ ಜನರಿಗೆ ತಿಳಿಸಬೇಕು.

ಕಾಂಗ್ರೆಸ್‌ ಅವಧಿಯಲ್ಲಿ ಸ್ಥಾಪಿಸಲಾದ ಸಾಂವಿಧಾನಿಕ ಸಂಸ್ಥೆಗಳು ಮತ್ತು ಸಾರ್ವಜನಿಕ ಉದ್ಯಮಗಳನ್ನು ಬಿಜೆಪಿ ಖಾಸಗೀಕರಣಗೊಳಿಸುತ್ತಿದೆ. ಅದರ ವಿರುದ ಹೋರಾಡಬೇಕು. ಕಾಂಗ್ರೆಸ್‌ ಈಗ ಸಂಕಷ್ಟದಲ್ಲಿದೆ. ಪಕ್ಷದ ಏಳಿಗೆಗೆ ಕಾರ್ಯಕರ್ತರು ದುಡಿಯಬೇಕು ಎಂದರು.ಕೆಪಿಸಿಸಿ ಸದಸ್ಯ  ಚಿನ್ನಪ್ಪ, ಪ್ರಚಾರ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಚೇತನ್‌ಗೌಡ ಮಾತನಾಡಿದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಿ.ರಾಮಚಂದ್ರಪ್ಪ, ಜಿಪಂ ಸದಸ್ಯೆ ಪಿ.ಅನಂತಕುಮಾರಿ ಚಿನ್ನಪ್ಪ,

ಸುಹೇಲ, ಎಸ್‌ಸಿ ಜಿಲ್ಲಾ ಘಟಕದ ಅಧ್ಯಕ್ಷ  ಚೌಡಪ್ಪನಹಳ್ಳಿ ಲೋಕೇಶ್‌, ತಾಪಂ ಸದಸ್ಯ ದಿನ್ನೂರು ವೆಂಕಟೇಶ್‌, ಮಂಜುನಾಥ್‌, ಯಲುವಹಳ್ಳಿ ನಟರಾಜ, ಸೈಫ‌ುಲ್ಲಾ, ವೀರೇಗೌಡ, ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಮುನಿರಾಜು, ಪಟ್ಟಣ ಕಾಂಗ್ರೆಸ್‌ ಅಧ್ಯಕ್ಷ ವಿ.ಎಂ.ನಾಗರಾಜ, ಪ್ರಧಾನ ಕಾರ್ಯದರ್ಶಿ ಎಸ್‌. ಮಂಜುನಾಥ್‌, ವೆಂಕಗಿರಿಕೋಟೆ ಚಿನ್ನಪ್ಪ, ಬ್ಲಾಕ್‌ ಮಟ್ಟದ ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.