Advertisement

ಕರ್ನಾಟಕದಲ್ಲಿ ನಿರುದ್ಯೋಗಕ್ಕೆ ಬಹುದೊಡ್ಡ ಕಾರಣವೇನು? ಜನಾಭಿಪ್ರಾಯ ಸಂಗ್ರಹಿಸಿದ ಡಿಕೆಶಿ

01:20 PM Apr 11, 2022 | Team Udayavani |

ಬೆಂಗಳೂರು: ಬೆಲೆ ಏರಿಕೆ, ಕೋಮು ವಿಚಾರಗಳು ಪ್ರಬಲವಾಗುತ್ತಿರುವ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಗಂಭೀರ ವಿಚಾರದ ಜನಾಭಿಪ್ರಾಯ ಸಂಗ್ರಹಿಸಿದ್ದಾರೆ.

Advertisement

ಕರ್ನಾಟಕದಲ್ಲಿ ನಿರುದ್ಯೋಗಕ್ಕೆ ಬಹುದೊಡ್ಡ ಕಾರಣ ಏನಿರಬಹುದು? ಈ ಕುರಿತು ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ‘ಕೂ’ ಮಾಡಿದ್ದಾರೆ. ಇದಕ್ಕೆ ಹಲವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವು ಆಯ್ದ ಅಭಿಪ್ರಾಯಗಳು ಇಲ್ಲಿದೆ.

ಇದನ್ನೂ ಓದಿ:ವಿಪಕ್ಷದ ಟೀಕೆಗೆ ನಮ್ಮ ಕೆಲಸಗಳೇ ಉತ್ತರ ಕೊಡಲಿದೆ: ಉಡುಪಿಯಲ್ಲಿ ಸಿಎಂ ಬೊಮ್ಮಾಯಿ

Koo App

ಕರ್ನಾಟಕದಲ್ಲಿ ನಿರುದ್ಯೋಗಕ್ಕೆ ಬಹುದೊಡ್ಡ ಕಾರಣ ಏನಿರಬಹುದು? ಈ ಕುರಿತು ನಿಮ್ಮ ಅಭಿಪ್ರಾಯ ತಿಳಿಸಿ.

Advertisement

D K Shivakumar (@dkshivakumar_official) 11 Apr 2022

‘ವಿದ್ಯಾಭ್ಯಾಸಕ್ಕೆ ತಕ್ಕ ಉದ್ಯೋಗದ ಕೊರತೆ. ಉದ್ಯೋಗ ಸಿಕ್ಕರೂ ಸರಿಯಾದ ಸಂಬಳ ಇಲ್ಲ. ಹೀಗಿರುವಾಗ ನಿರುದ್ಯೋಗ ಹೆಚ್ಚಾಗದೆ ಇರುತ್ತದೆಯೇ?’ ಎಂದು ಶ್ರೀರಾಮ ಎನ್ನುವವರು ಪ್ರಶ್ನಿಸಿದ್ದಾರೆ.

’60 ರಿಂದ 70% ರೆವೆನ್ಯೂ ಮತ್ತು ಉದ್ಯೋಗ ಸೃಷ್ಟಿ ಮಾಡುವ ರಾಜಧಾನಿ ಬೆಂಗಳೂರಿನಲ್ಲಿ ಮುಕ್ಕಾಲು ಭಾಗ “ಅನ್ಯರಾಜ್ಯದವರಿದ್ದಾರೆ”. ಒಬ್ಬ ಕನ್ನಡಿಗ ಸುಮಾರು 5 ಪಟ್ಟು ಸ್ಪರ್ಧೆ ಎದುರಿಸಬೇಕು ಕೆಲಸಕ್ಕೆ ಬೇರೆ ರಾಜ್ಯಗಳಿಗಿಂತ! ಬಿಡಿಎ, ಬಿಬಿಎಂಪಿ, ರೆವೆನ್ಯೂ ಇತ್ಯಾದಿ,ಸರ್ಕಾರವೂ ಸೇರಿ ಭ್ರಷ್ಟಾಚಾರದಿಂದ ಅನ್ಯರಿಗೆ ಹೆಚ್ಚು ಸವಲತ್ತಿನ ಒತ್ತು ಕೊಡುತ್ತವೆ! ನಿರುದ್ಯೋಗ/ಕನ್ನಡಿಗರ ಅವನತಿಗೆ ನಮ್ಮ ರಾಜ್ಯದ ರಾಜಕೀಯವೇ ಕಾರಣ’ ಎನ್ನುತ್ತಾರೆ ಮಂಜುನಾಥ್.

Koo App

60 ರಿಂದ 70% ರೆವೆನ್ಯೂ ಮತ್ತು ಊದ್ಯೋಗ ಸೃಷ್ಟಿ ಮಾಡುವ ರಾಜಧಾನಿ ಬೆಂಗಳೂರಿನಲ್ಲಿ ಮುಕ್ಕಾಲು ಭಾಗ “ಅನ್ಯರಾಜ್ಯದವರಿದ್ದಾರೆ“ ಒಬ್ಬ ಕನ್ನಡಿಗ ಸುಮಾರು 5 ಪಟ್ಟು ಸ್ಪರ್ಧೆ ಎದುರಿಸಬೇಕು ಕೆಲಸಕ್ಕೆ ಬೇರೆ ರಾಜ್ಯಗಳಿಗಿಂತ! BDA BBMP REVENUE etc ,ಸರ್ಕಾರವೂ ಸೇರಿ ಭ್ರಷ್ಟಾಚಾರದಿಂದ ಅನ್ಯರಿಗೆ ಹೆಚ್ಚು ಸವಲತ್ತಿನ ಒತ್ತು ಕೊಡುತ್ತವೆ! ನಿರುದ್ಯೋಗ/ಕನ್ನಡಿಗರ ಅವನತಿಗೆ ನಮ್ಮ ರಾಜ್ಯದ ನರಸತ್ತ ರಾಜಕೀಯವೇ ಕಾರಣ! @bsbommai @h_d_kumaraswamy

Manjunath Papanna (@Manjunath_Papanna) 11 Apr 2022

‘ಪ್ರತಿಭೆಗೆ ಪೂರಕವಲ್ಲದ ವಾತಾವರಣ, ಹಿಂದಿನಿಂದ ನಡೆದುಬಂದ ಅಧಿಕಾರಿಗಳ ಭ್ರಷ್ಟಾಚಾರ, ಅಭಿವೃದ್ದಿಗೆ ಪೂರಕವಲ್ಲದ ಜನವರೋಧಿ ಕಾರ್ಯಕ್ರಮಗಳು, ಚುನಾವಣಾ ಸಮಯಕ್ಕೆ ಸರಿಯಾದವರನ್ನು ಆಯ್ಕೆ ಮಾಡದ ಭ್ರಷ್ಟ ಜನರು, ಅಯೋಗ್ಯ ರಾಜಕಾರಣಿಗಳು,ಹೊರ ದೇಶಗಳು ಅಭಿವೃದ್ದಿ ಕುಂಠಿತಗೊಳಿಸಲು ಮಾಡುವ ಪ್ರಯತ್ನಗಳು’ ಎಂದು ವೆಂಕಟೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಎಲ್ಲವು ಆಟೊಮೇಷನ್ ಆಗಿರುವ ಕಾರಣ ಯಂತ್ರಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಉಪಯೋಗಿಸುತ್ತಾರೆ. ಅದಕ್ಕೆ ಮನುಷ್ಯರ ಅಗತ್ಯತೆ ಕಡಿಮೆಯಾಗಿರುವುದರಿಂದ ನಿರುದ್ಯೋಗ ಸಮಸ್ಯೆಯಾಗಿದೆ’ ಎಂದು ಮೇಘಶ್ರೀ ಪ್ರತಿಕ್ರಿಯಿಸಿದ್ದಾರೆ.

‘ಬಿಜೆಪಿ ಸರ್ಕಾರದ ನೀತಿಗಳು ಕರ್ನಾಟಕದಲ್ಲಿ ಅಲ್ಲ ಭಾರತದಾದ್ಯಂತ ನಿರುದ್ಯೋಗಕ್ಕೆ ಮೂಲ ಕಾರಣ’ ಎನ್ನುತ್ತಾರೆ ಅಮರ್.

Advertisement

Udayavani is now on Telegram. Click here to join our channel and stay updated with the latest news.

Next