ಪಣಜಿ: ಕಳೆದ 8 ಶತಮಾನಗಳ ಹಿಂದೆ ಮಧ್ವಾಚಾರ್ಯರು ಗೋವಾಕ್ಕೆ ಆಗಮಿಸಿ ತಮ್ಮ ಸಿದ್ಧಾಂತವನ್ನು ಜಾಗೃತಗೊಳಿಸಿದ್ದಾರೆ. ಮನುಷ್ಯರಿಗೆ ದೇವರು ಚಿಂತಿಸುವ ಶಕ್ತಿ ನೀಡಿದ್ದಾನೆ. ಆದರೆ ನಮಗೆ ಮನುಷ್ಯ ಜನ್ಮ ನೀಡಿ ನಾವು ದೇವರ ಚಿಂತನೆ ಮಾಡದಿದ್ದರೆ ಏನು ಲಾಭ. ನಾವು ದೇವರಿಗೆ ಏಕೆ ನಮಸ್ಕಾರ ಮಾಡುತ್ತೇವೆ ಎಂಬುದು ನಮಗೆ ಗೊತ್ತಿಲ್ಲ. ದೇವರು ಸರ್ವೋತ್ತಮ ಎಂಬುದು ನಮಗೆ ಅರಿವಿರಬೇಕು ಎಂದು ಶ್ರೀ ಗೋಕರ್ಣ ಪರ್ತಗಾಳಿ ಶೀವೋತ್ತಮ ಮಠದ ಶ್ರೀ ಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿ ಆಶೀರ್ವನ ನೀಡಿದರು.
ಜೂನ್ 1 ರಂದುಗೋವಾದ ಮಡಗಾಂವನ ಶ್ರೀ ವಿದ್ಯಾನಿಕೇತನ ಮಠಗ್ರಾಮದಲ್ಲಿ ಉತ್ತರಾಧಿಮಠದ ಶ್ರೀಗಳು ಮತ್ತು ಶ್ರೀ ಗೋಕರ್ಣ ಪರ್ತಗಾಳಿ ಜೀವೊತ್ತಮ ಮಠದ ಶ್ರೀಗಳ ಸಮಾಗಮ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ಸ್ವಾಮೀಜಿಗಳು ಆಶೀರ್ವಚನ ನೀಡಿದರು.
ವೈಕುಂಠ ಲೋಕದಲ್ಲಿ ನಮಗೆ ಮುಕ್ತಿ ದೊರಕಲು ದೇವರು ಯಾವುದಾದರೂ ಐಡಿ ಕಾರ್ಡ ನೀಡಿದ್ದಾರೆಯೇ..ಇಲ್ಲ. ಐಡಿ ಕಾರ್ಡ ನಾವೇ ಸ್ವತಃ ಮಾಡಿಕೊಳ್ಳಬೇಕಾಗುತ್ತದೆ. ದೇವರ ಮೇಲೆ ವಿಶ್ವಾಸವಿಟ್ಟು, ದೇವರ ಚಿಂತನೆ, ಜ್ಞಾನ ವೃದ್ಧಿ ಪಡಿಸಿಕೊಳ್ಳಬೇಕು. ದೇವರಿಗೆ ಈತ ಉತ್ತಮ ಭಕ್ತ ಎಂದು ಅನ್ನಿಸಿದಾಗ ಇಂತಹ ವ್ಯಕ್ತಿಗೆ ನನ್ನ ವೈಕುಂಠ ಲೋಕದಲ್ಲಿ ಪ್ರವೇಶ ನೀಡಬೇಕು ಎಂದು ದೇವರು ನಿರ್ಣಯಿಸುತ್ತಾರೆ. ಆಗ ನಮಗೆ ಮುಕ್ತಿ ದೊರೆಯುತ್ತದೆ ಎಂದು ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ನುಡಿದರು.
ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಉತ್ತರಾಧಿಮಠದ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿಗಳು ಆಶೀರ್ವಚನ ನೀಡಿ, ಇಂತಹ ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಮತ್ತು ಮಧ್ವ ಸಿದ್ಧಾಂತ ಮತ್ತು ಸನಾತನ ಸಿದ್ದಾಂತದ ಪ್ರಚಾರವಾಗಬೇಕು. ಶ್ರೀ ಮಧ್ವಾಚಾರ್ಯರ ಸಿದ್ಧಾಂತವು ಭೀನ್ನವೇನಲ್ಲ. ವೇದಗಳ ಸಿದ್ಧಾಂತಗಳಲ್ಲಿ ಹೇಳಿರುವಂತೆಯೇ ಶ್ರೀ ಮಧ್ವಾಚಾರ್ಯರ ಸಿದ್ಧಾಂತವಾಗಿದೆ. ಇತರ ಧರ್ಮಿಯರ ಆಕ್ರಮದಿಂದ ಈ ಸಿದ್ದಾಂತ ಲುಪ್ತವಾಗಿತ್ತು. ಸನಾತನ ವೈದಿಕ ಧರ್ಮ ಸಂಕಷ್ಟದ ಪರಿಸ್ಥಿತಿಯಲ್ಲಿರುವ ಸಂದರ್ಭದಲ್ಲಿ ಶ್ರೀ ಮಧ್ವಾಚಾರ್ಯರು ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿ ಸನಾತನ ವೈದಿಕ ಧರ್ಮಪ್ರತಿಷ್ಠಾಪಿಸಿದರು. ಶ್ರೀ ಮಧ್ವಾಚಾರ್ಯ ಸಿದ್ಧಾಂತದಲ್ಲಿ ಪ್ರಮುಖವಾಗಿ ಶ್ರೀ ವಿಷ್ಣು ಭಗವಾನರ ಪೂಜೆ ನಡೆಸಲಾಗುತ್ತದೆ ಎಂದರು.