Advertisement

ಏನಿದು ಸ್ವಯಂ ಮದುವೆ? ಹೊರದೇಶಗಳಲ್ಲಿ ಈ ಟ್ರೆಂಡ್‌ ಹೇಗಿದೆ?

12:36 PM Jun 04, 2022 | Team Udayavani |

ಗುಜರಾತ್‌ನ ವಡೋದರದ ಯುವತಿ ಕ್ಷಮಾ ಬಿಂದು ದಿಢೀರನೇ ಸುದ್ದಿಯಲ್ಲಿದ್ದಾಳೆ. ತನಗೆ ತಾನೇ ವಿವಾಹವಾಗುವುದಾಗಿ ಹೇಳಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾಳೆ. ಹಾಗಾದರೆ ಈ ಸೋಲೋಗಮಿ ವಿವಾಹವೆಂದರೇನು? ಹೊರದೇಶಗಳಲ್ಲಿ ಈ ಟ್ರೆಂಡ್‌ ಹೇಗಿದೆ? ಈ ಬಗ್ಗೆ ಒಂದು ಸೂಕ್ಷ್ಮ ನೋಟ ಇಲ್ಲಿದೆ…

Advertisement

ಸೋಲೋಗಮಿ ವಿವಾಹವೆಂದರೇನು?
ಸಾರ್ವಜನಿಕವಾಗಿ ತನ್ನನ್ನು ತಾನೇ ವಿವಾಹವಾಗುವುದಕ್ಕೆ ಸ್ವಯಂ ವಿವಾಹ ಅಥವಾ ಸೋಲೋಗಮಿ ಮದುವೆ ಎಂದು ಕರೆಯಲಾಗುತ್ತದೆ. ಆದರೆ ಈ ವಿವಾಹಗಳಿಗೆ ಕಾನೂನಿನ ಮಾನ್ಯತೆ ಇರುವುದಿಲ್ಲ. ಆದರೆ ಸಾಂಕೇತಿಕವಾಗಿ ವಿವಾಹ ಸಮಾರಂಭ ನಡೆಯುತ್ತದೆ ಅಷ್ಟೇ.’

ಆರಂಭಿಸಿದ್ದು ಯಾರು?
1993ರಲ್ಲಿ ಅಮೆರಿಕದ ದಂತ ಶುಚಿತ್ವ ತಜ್ಞೆ ಲಿಂಡಾ ಬೇಕರ್‌ ಎಂಬವರು ಸ್ವಯಂ ವಿವಾಹವಾಗಿದ್ದರು. ಇದನ್ನೇ ಜಗತ್ತಿನ ಮೊದಲ ಸೋಲೋಗಮಿ ವಿವಾಹವೆಂದು ಕರೆಯಲಾಗುತ್ತದೆ. ಈ ವಿವಾಹದಲ್ಲಿ ಸುಮಾರು 75 ಮಂದಿ ಭಾಗಿಯಾಗಿದ್ದರು.

ಡೈವೋರ್ಸ್‌ಗೆ ಅವಕಾಶವಿದೆಯೇ?
ವಿಚಿತ್ರವೆನಿಸಿದರೂ ಸತ್ಯ. ಈ ಸ್ವಯಂ ವಿವಾಹದಲ್ಲಿ ಡೈವೋರ್ಸ್‌ ಕೂಡ ಉಂಟು. ಕಳೆದ ವರ್ಷವಷ್ಟೇ ಬ್ರೆಜಿಲ್‌ನ ಮಾಡೆಲ್‌ ಕ್ರಿಸ್‌ ಗೆಲೆರಾ ಎಂಬಾಕೆ, ವಿವಾಹವಾದ 90 ದಿನಗಳ ಬಳಿಕ ತನಗೆ ತಾನೇ ಡೈವೋರ್ಸ್‌ ಕೊಟ್ಟುಕೊಂಡಿದ್ದಳು. ಏಕೆಂದರೆ ಈಕೆಗೆ ಒಬ್ಬ ಬಾಯ್‌ಫ್ರೆಂಡ್‌ ಸಿಕ್ಕಿದ್ದನಂತೆ.

ರೀತಿ ರಿವಾಜುಗಳಿವೆಯೇ?
ಈ ವಿವಾಹವನ್ನು ಇಂಥದ್ದೇ ರೀತಿಯಲ್ಲಿಯೇ ಆಗಬೇಕು ಎಂದೇನಿಲ್ಲ. ಆದರೂ ವಿವಾಹ ಸಂದರ್ಭದಲ್ಲಿ ಆಗುವ ಎಲ್ಲ ಸಂಪ್ರದಾಯಗಳನ್ನುಪಾಲಿಸುವುದಾಗಿ ಬಿಂದು ಹೇಳಿಕೊಂಡಿದ್ದಾಳೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next