Advertisement
ಏನಿದು ಶರಿಯಾ ಕಾನೂನು?
Related Articles
Advertisement
ಆಧುನಿಕ ಯುಗದ ಕಾನೂನುಗಳಂತೆ ಶರಿಯಾ ಕಾನೂನುಗಳು ಲಿಖೀತ ರೂಪದಲ್ಲಿಲ್ಲ. ಅದನ್ನು ಸರ್ಕಾರ ಕೂಡ ಜಾರಿ ಮಾಡುವುದಿಲ್ಲ. ಜತೆಗೆ ನ್ಯಾಯಾಲಯಗಳಲ್ಲಿ ಕೂಡ ಅದರ ಬಗ್ಗೆ ವಿಮರ್ಶೆ ಮಾಡಲಾಗುವುದಿಲ್ಲ.
ಶರಿಯಾ ಕಾನೂನು ವ್ಯಾಪ್ತಿಯಲ್ಲಿ ಏನೇನು ಅಪರಾಧಗಳು?
ತಜೀರ್
ಈ ವಿಭಾಗದಲ್ಲಿ ಬರುವ ಅಪರಾಧಗಳು ಅತ್ಯಂತ ಗಂಭೀರವಲ್ಲದ ಅಪರಾಧಗಳು. ಅವುಗಳಿಗೆ ಶಿಕ್ಷೆ ನೀಡಬೇಕೋ ಬೇಡವೋ ಎಂಬ ಅಂಶ ನ್ಯಾಯಾಧೀಶರ ವಿವೇಚನೆಯಲ್ಲಿರುತ್ತದೆ. ಅಂದರೆ, ಈ ವಿಭಾಗದಲ್ಲಿ ನಡೆದ ಅಪರಾಧಗಳಿಗೆ ನ್ಯಾಯಾಧೀಶರೇ ಪರಾಮರ್ಶೆ ನಡೆಸಿ ಶಿಕ್ಷೆ ವಿಧಿಸುತ್ತಾರೆ. ಈ ವಿಭಾಗದಲ್ಲಿ ಬರುವ ಅಪರಾಧಗಳೆಂದರೆ, ಬಂಧುಗಳ ಮನೆಯಿಂದಲೇ ಕಳವು ಅಥವಾ ಕಳವು ಮಾಡಲು ಯತ್ನ, ಸುಳ್ಳು ಪ್ರಮಾಣ ಮಾಡುವುದು ,ಸಾಲ ನೀಡುವುದು.
ಖೀಸಾಸ್
ಈ ವ್ಯಾಪ್ತಿಯಲ್ಲಿಒಬ್ಬವ್ಯಕ್ತಿಯಿಂದ ಮತ್ತೂಬ್ಬ ತೊಂದರೆಗೆ ಒಳಗಾದರೆ, ನೋವು ಅನುಭವಿಸಿದ ವ್ಯಕ್ತಿಯೇ ಶಿಕ್ಷೆ ವಿಧಿಸುವ ವ್ಯವಸ್ಥೆ. ಅಂದರೆ, ಸಂತ್ರಸ್ತರೇ ಅಪರಾಧಿಗೆ ಶಿಕ್ಷಿಸುವ ಮೂಲಕ ಪ್ರತೀಕಾರ ತೀರಿಸುವುದು. ಉದಾಹರಣೆಗೆ ವ್ಯಕ್ತಿ ಮತ್ತೂಬ್ಬನಿಗೆ ಥಳಿಸಿದ್ದರೆ, ನೋವಿಗೆ ಒಳಗಾದ ವ್ಯಕ್ತಿ ಥಳಿಸಿದಾತನಿಗೆ ಅದೇ ಮಾದರಿಯಲ್ಲಿ ಶಿಕ್ಷೆ ನೀಡುತ್ತಾನೆ. ಒಂದು ವೇಳೆ, ವ್ಯಕ್ತಿ ಮತ್ತೂಬ್ಬನನ್ನು ಕೊಲೆ ಮಾಡಿದರೆ, ಆತನ ಸಮೀಪದವರು ಕೃತ್ಯವೆಸಗಿದವನನ್ನು ಕೊಲ್ಲಲು ಅನುಮತಿ ನೀಡಲಾಗುತ್ತದೆ. ಹೀಗೆ ಮಾಡಲು ನ್ಯಾಯಾಲಯದ ಒಪ್ಪಿಗೆ ಬೇಕಾಗುತ್ತದೆ.
ಹುದೂದ್
ಇದು ಕುರಾನ್‌ನಲ್ಲಿ ಉಲ್ಲೇಖಗೊಂಡಿರುವ ಘೋರ ಶಿಕ್ಷೆ. ಈ ವ್ಯಾಪ್ತಿಯಲ್ಲಿ ನಡೆಯುವ ಅಪರಾಧ ಕೃತ್ಯಗಳು ಭಗವಂತನ ವಿರುದ್ಧ ನಡೆಸಿದ್ದು ಎಂದು ಪರಿಗಣಿಸಲಾಗುತ್ತದೆ. ದ್ರಾಕ್ಷಾರಸ ಸೇವನೆ, ಮದ್ಯಪಾನ, ವ್ಯಭಿಚಾರ, ಅಕ್ರಮವಾಗಿ ಲೈಂಗಿಕ ಸಂಬಂಧ ಇರಿಸಿದ್ದಾರೆ ಎಂದು ಸುಳ್ಳು ಆರೋಪ ಮಾಡುವುದು, ರಸ್ತೆಗಳಲ್ಲಿ ಕಳವು, ದರೋಡೆಈ ವ್ಯಾಪ್ತಿಗೆ ಬರುತ್ತದೆ. ಈ ಕೃತ್ಯ ನಡೆಸಿದವರಿಗೆ ಛಡಿಯೇಟು, ಕಲ್ಲುಎಸೆದು ಶಿಕ್ಷೆ ನೀಡುವುದು, ಅಂಗಾಂಗ ಕತ್ತರಿಸುವುದು, ಗಡಿಪಾರುಅಥವಾ ಮರಣದಂಡನೆ ಶಿಕ್ಷೆಯನ್ನು ನೀಡಲಾಗುತ್ತದೆ.