Advertisement

ರಾಜಕೀಯ ಹತ್ಯೆಗೆ ರಾಹುಲ್‌ ಉತ್ತರವೇನು?: ಜಾವಡೇಕರ್‌

06:25 AM Feb 11, 2018 | |

ದಾವಣಗೆರೆ: ಕರ್ನಾಟಕದಲ್ಲಿ ರಾಜಕೀಯ ಉದ್ದೇಶದ ಹತ್ಯೆ ನಡೆಯುತ್ತಿರುವುದಕ್ಕೆ ಉತ್ತರ ಏನು ಎಂದು ಕೇಂದ್ರದ ಮಾನವ ಸಂಪನ್ಮೂಲ ಇಲಾಖೆ ಸಚಿವ, ರಾಜ್ಯ ಬಿಜೆಪಿ ಉಸ್ತುವಾರಿ ಪ್ರಕಾಶ್‌ ಜಾವಡೇಕರ್‌ ಅಖೀಲ ಭಾರತ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ. 

Advertisement

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಾತನಾಡಿದ ಅವರು,  ರಾಜಕೀಯ ಪ್ರೇರಿತ ಹತ್ಯೆಗಳ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಬಿಜೆಪಿ ಶಾಸಕ ಸಿ.ಟಿ. ರವಿ, ಮುಂದಿನ ಹತ್ಯೆ ಯಾರದ್ದು…? ಎಂಬುದಾಗಿ ಪ್ರಶ್ನಿಸಿದಾಗ ಕಾಂಗ್ರೆಸ್‌ನ ಸಚಿವರೊಬ್ಬರು ಸಿ.ಟಿ. ರವಿ ಅವರದ್ದೇ ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿ ರಾಜಕೀಯ ಉದ್ದೇಶದ ಹತ್ಯೆಗಳು ನಡೆಯುತ್ತಿವೆ ಎನ್ನುವುದಕ್ಕೆ ಇದು ಸ್ಪಷ್ಟ ಉದಾಹರಣೆ ಎಂದರು. 

ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ, ಧರ್ಮ ವಿಭಜಿಸುವ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಸ್ಪಷ್ಟ ಉದಾಹರಣೆ ವೀರಶೈವ ಮತ್ತು ಲಿಂಗಾಯತ ಧರ್ಮದ ವಿಚಾರ. ಇವೆರಡು ಧರ್ಮ ಎಂದು ವಿಭಜಿಸುವ ವಿಚಾರದಲ್ಲಿ ಅವರು ವಿಫ‌ಲರಾಗಿದ್ದಾರೆ. ಸಿದ್ದರಾಮಯ್ಯ ಮಠ-ಮಂದಿರ- ದೇವಸ್ಥಾನಗಳ ಮೇಲೆ ನಿಯಂತ್ರಣಕ್ಕೆ ಮುಂದಾಗಿದ್ದರು. ಜನರ ವಿರೋಧದಿಂದ ಅದೂ ಕೈತಪ್ಪಿತು ಎಂದು ಹೇಳಿದರು.

ರಾಜೀವ್‌ ಹೇಳಿದ್ದು ಒಂದೇ ಸತ್ಯ…
ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರು ಒಮ್ಮೆ ದೆಹಲಿಯಿಂದ 100 ರೂ. ಕಳಿಸಿದರೆ ಬಡವರಿಗೆ 15 ರೂ. ಮಾತ್ರವೇ ತಲುಪುತ್ತದೆ ಎಂದು ಹೇಳಿದ್ದರು. ರಾಜೀವ್‌ ಗಾಂಧಿ ಹೇಳಿದ್ದು ಅದೊಂದೇ ಸತ್ಯ. ಆಗ ಅನೇಕ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿತ್ತು. ದೆಹಲಿಯಿಂದ ಬಿಡುಗಡೆಯಾಗುತ್ತಿದ್ದ 100 ರೂ. ಯಲ್ಲಿ 85 ರೂ. ಕಾಂಗ್ರೆಸ್‌ ಪಾಲಾಗುತ್ತಿತ್ತು. ಈಗ ಅಂತಹ ವಾತಾವರಣ ಇಲ್ಲ. ದೆಹಲಿಯಿಂದ ಬಿಡುಗಡೆಯಾಗುವ 100 ರೂ. ನೇರವಾಗಿಯೇ ಬಡವರಿಗೆ ತಲುಪುತ್ತಿದೆ ಎಂದು ಪ್ರಕಾಶ್‌ ಜಾವಡೇಕರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next