Advertisement
ಪತ್ತೆಯಾಗಿದ್ದು ಯಾವಾಗ?ಇತ್ತೀಚಿನ ದಿನಗಳಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿದ್ದವು. ಹಾಗಾಗಿ, ಅಲ್ಲಿನ ಆರೋಗ್ಯ ಇಲಾಖೆ ಹೆಚ್ಚಿನ ಮಟ್ಟದ ತಪಾಸಣೆಗಳನ್ನು ನಡೆಸುತ್ತಿತ್ತು. ನ. 22-23ರಂದು ಅಲ್ಲಿ ಎರಡೇ ದಿನಗಳಲ್ಲಿ 2,465 ಪ್ರಕರಣಗಳು ಪತ್ತೆಯಾಗಿದ್ದವು. ಅವರಿಂದ ಪಡೆಯಲಾದ ಸ್ಯಾಂಪಲ್‌ಗಳಲ್ಲಿ ಈ ಹೊಸ ರೂಪಾಂತರಿ ಪತ್ತೆಯಾಗಿತ್ತು.
ಕೊರೊನಾ ವೈರಾಣುವಿನ ಮೇಲೆ ಮುಳ್ಳಿನಾಕಾರದ ಪ್ರೊಟೀನ್ ಯುಕ್ತ ಅಂಗಾಶಗಳಿವೆ. ಇವನ್ನು ಸ್ಪೈಕ್‌ಗಳೆಂದು ಕರೆಯುತ್ತಾರೆ. ಮನುಷ್ಯನ ದೇಹದಲ್ಲಿನ ಜೀವಾಂಶಗಳಿಗೆ ಅಂಟಿಕೊಳ್ಳಲು ಈ ಪ್ರೊಟೀನ್ ಸ್ಪೈಕ್‌ಗಳೇ ಕಾರಣ. ಒಮಿಕ್ರಾನ್ ರೂಪಾಂತರಿಯಲ್ಲಿ ಇರುವ ಈ ಸ್ಪೈಕ್‌ಗಳಲ್ಲಿನ ಪ್ರೊಟೀನ್ 30 ಬಾರಿ ರೂಪಾಂತರ ಹೊಂದಿದ್ದು, ಇವು ಹಿಂದಿನ ರೂಪಾಂತರಿಗಿಂತ ಹೆಚ್ಚು ಬಲಿಷ್ಠವಾಗಿವೆ. ಇದನ್ನೂ ಓದಿ:ಹೊಸ ರೂಪಾಂತರಿಯಿಂದ ಆತಂಕ : ಹಲವು ದೇಶಗಳಲ್ಲಿ ಕಟ್ಟೆಚ್ಚರ, ವಿಮಾನಯಾನಕ್ಕೆ ನಿಷೇಧ
Related Articles
ಪ್ರೊಟೀನ್ ಸ್ಪೈಕ್‌ಗಳ ತುದಿಯಲ್ಲಿರುವ ರಿಸಿಪ್ಟರ್ ಬೈಡಿಂಗ್ ಡೊಮೇನ್ (ಆರ್‌ಬಿಡಿ) 10 ಬಾರಿ ರೂಪಾಂ ತರ ಹೊಂದಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ಹಿಂದಿನ ಕೊರೊನಾ ರೂಪಾಂತರಿಯಾದ ಡೆಲ್ಟಾದಲ್ಲಿ ಕೇವಲ 2 ಬಾರಿ ರೂಪಾಂತರಗೊಂಡ ಆರ್‌ಬಿಡಿ ಇತ್ತು.
Advertisement
ಇದು ಅಪಾಯಕಾರಿ ಹೇಗೆ?ಅಸಲಿಗೆ, ನಮ್ಮಲ್ಲಿರುವ ಕೊರೊನಾ ಲಸಿಕೆಗಳಲ್ಲಿರುವ ಪ್ರತಿ ಕಾಯಗಳು ಈ ಸ್ಪೈಕ್‌ಗಳನ್ನು ಸುತ್ತುವರಿದೆ ಅವುಗಳು ಮನು ಷ್ಯನ ದೇಹದ ಜೀವಕಣಗಳ ರಿಸಿಪ್ಟರ್‌ಗಳೊಂದಿಗೆ ಸಂಯೋಗ ಹೊಂದುವುದನ್ನು ತಡೆಯುತ್ತದೆ. ಆದರೆ ಒಮಿಕ್ರಾನ್‌ನಲ್ಲಿರುವ ಸ್ಪೈಕ್‌ಗಳು ಕನಿಷ್ಟ 30 ಪೀಳಿಗೆಯನ್ನು (ರೂಪಾಂತರ) ದಾಟಿ ಬಂದಿರುವುದರಿಂದ ಇವು ಹೆಚ್ಚು ಬಲಿಷ್ಠವಾಗಿದೆ. ಅಂದರೆ, ಈಗ ಲಭ್ಯವಿರುವ ಲಸಿಕೆಗಳು ಈ ಪ್ರೋಟೀನ್‌ಗಳನ್ನು ನಿಷ್ಕ್ರಿಯ ಗೊಳಿಸುವುದು ಅನುಮಾನ ಎಂದು ಹೇಳಲಾಗಿದೆ. ಆದರೆ ಇದರ ಬಗ್ಗೆ ಈಗಲೇ ಹೇಳಲಾಗದು. ಸೂಕ್ತ ಅಧ್ಯಯನಗಳನ್ನು ನಡೆಸಬೇಕಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.