ಗುರುಮಠಕಲ್: ಚಿಂಚೋಳಿ ನನ್ನ ಕರ್ಮ ಭೂಮಿ. ಅಲ್ಲಿನ ಜನ ಎರಡು ಬಾರಿ ಶಾಸಕನಾಗಿ ಆರಿಸಿ ಕಳುಹಿಸಿದ್ದಾರೆ. ಅಲ್ಲಿನ ಜನರೊಂದಿಗೆ ಬೆರೆಯುವುದು ತಪ್ಪಾ? ಚಿಂಚೋಳಿ ಏನು ಪಾಕಿಸ್ತಾನದಲ್ಲಿದೆಯೇ ಎಂದು ಕಲಬುರಗಿ ಬಿಜೆಪಿ ಅಭ್ಯರ್ಥಿ ಡಾ| ಉಮೇಶ ಜಾಧವ್ ಪ್ರಿಯಾಂಕ ಖರ್ಗೆ ವಿರುದ್ಧ ಹರಿಹಾಯ್ದರು.
Advertisement
ತಾಲೂಕಿನ ಬೋರಬಂಡಾದಲ್ಲಿ ಬಂಜಾರ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಸಚಿವ ಪ್ರಿಯಾಂಕ ಖರ್ಗೆಅವರ ವಿರುದ್ಧ ವೈಯಕ್ತಿಕವಾಗಿ ಏಕವಚನದಲ್ಲಿ ಲೇವಡಿ ಮಾಡಿದರು. ಸಚಿವ ಪ್ರಿಯಾಂಕ ಯಾವ ಹಳ್ಳಿಯಲ್ಲಿ ಮಲಗಿದ್ದಾರೆ. ಯಾರ ಸಮಸ್ಯೆ ಆಲಿಸಿದ್ದಾರೆ. ನಾನು ಹಳ್ಳಿಯಲ್ಲಿ ಮಲಗಿ ಜನರ ಸಮಸ್ಯೆ ಆಲಿಸಿದ್ದೀನಿ ಎಂದು ಹೇಳಿದರು.
ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿಯಿದೆ. ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರೊಂದಿಗೆ ಮಾತನಾಡಿದ್ದು, ಉತ್ತಮ ಸ್ಪಂದನೆ ದೊರೆತಿದೆ. ಗುರುಮಠಕಲ್, ಸೇಡಂ, ಚಿಂಚೋಳಿ ಕ್ಷೇತ್ರದ ಜನ ದುಡಿಯಲು ಹೋಗುತ್ತಾರೆ. ಜನರಿಗೆ ಉದ್ಯೋಗ ಸೃಷ್ಟಿಸುವ ಮಾತು ಕೊಟ್ಟಿದೆ. ಕಲಬುರಗಿಯಲ್ಲಿ 10 ಸಾವಿರ ಕೋಟಿ ಹೂಡಿಕೆಯ ಮೆಗಾ ಟೆಕ್ಸ್‌ಟೈಲ್ ಪಾರ್ಕ್ 1 ಲಕ್ಷ ಜನರಿಗೆ ನೇರ ಉದ್ಯೋಗ, 2 ಲಕ್ಷ ಜನರಿಗೆ ಅವಲಂಬಿತ ಉದ್ಯೋಗ ಸೃಷ್ಟಿಯಾಗಲಿದೆ ಎಂದರು.
Related Articles
ರಾಠೊಡ, ರಮೇಶ ರಾಠೊಡ ಹಾಜರಿದ್ದರು.
Advertisement
ತನಗಿಂತ ಮೊದಲು ಬಿಜೆಪಿ ಸೇರಿದ್ದು ಬಾಬುರಾವ ಚಿಂಚನಸೂರ. ನನಗೆ ಬಿಜೆಪಿ ಸೇರಿಸಿದ್ದೆ ಚಿಂಚನಸೂರ. ಅವರು ಸುಳ್ಳುಹೇಳುವುದರಲ್ಲಿ ಮಿತಿಮೀರಿ ಹೋಗಿದ್ದಾರೆ. ತಾಂಡಾ ಜನರು ಅಮಾಯಕರು. ನಾನು ತಾಂಡಾಕ್ಕೆ ಬಂದಿಲ್ಲ ಎಂದು ದಾರಿ
ತಪ್ಪಿಸುತ್ತಿದ್ದಾರೆ. ಸಂಸದರ ಕೆಲಸ ಏನು ಎನ್ನುವುದು ಜನರಿಗೆ ತಿಳಿಹೇಳಲಾಗುವುದು. ಬಂಜಾರ ಸಮಾಜ ಎಸ್‌ಸಿ ಇಂದ
ತೆಗೆಯಲು ಕಸರತ್ತು ನಡೆಯುತ್ತಿದೆ. ನಾನು ಇರುವವರೆಗೆ ಏನು ಮಾಡಲಾಗಲ್ಲ. ಜನ ಪ್ರಬುದ್ಧರಿದ್ದಾರೆ. ಜನರಿಗೆ ಏನು
ಮಾಡಬೇಕು ಎನ್ನುವುದು ಗೊತ್ತು ಎಂದರು. ಅಪ್ಪ ರಾಜ್ಯಸಭಾ ಸದಸ್ಯ, ಪ್ರಿಯಾಂಕ ವಿಧಾನಸಭೆ, ಮಾವ ಎಂಪಿ ಆಗಬೇಕು
ಎನ್ನುವಂತೆ ತಮ್ಮ ಕುಟುಂಬದಲ್ಲಿಯೇ ರಾಜಕೀಯ ಅಧಿಕಾರದಲ್ಲಿ ಇರಬೇಕು ಎನ್ನುವುದು ಕುಟುಂಬ ರಾಜಕೀಯ. ಅಧಿ
ಕಾರ ವಿಕೇಂದ್ರೀಕರಣ ಆಗಬೇಕು ಎಂದರು.