Advertisement
ಏನಿದು ನಾಗೋರ್ನೊ-ಕರಾಬಖ್ ಸಂಘರ್ಷ?
Related Articles
Advertisement
1922ರಲ್ಲಿ ಅರ್ಮೇನಿಯಾ ಮತ್ತು ಅಜರ್ ಬೈಜಾನ್ ಸೋವಿಯತ್ ಒಕ್ಕೂಟದ ಗಣರಾಜ್ಯಗಳಾಗಿದ್ದವು. 20ನೇ ಶತಮಾನದ ಅಂತ್ಯದ ವೇಳೆಗೆ ಸೋವಿಯತ್ ಒಕ್ಕೂಟ ಒಡೆದು ಹೋಳಾದ ನಂತರ ಅರ್ಮೇನಿಯನ್ನರು ಮತ್ತು ಅಜರ್ ಬೈಜಾನಿಗಳ ನಡುವೆ ನಾಗೋರ್ನೊ-ಕರಾಬಖ್ ಪ್ರದೇಶ ವಶಪಡಿಸಿಕೊಳ್ಳಲು ಸಂಘರ್ಷ ಆರಂಭವಾಗಿತ್ತು.
ಎರಡು ಜನಾಂಗದ ನಡುವೆ 1988ರಿಂದ 1994ರವರೆಗೂ ಯುದ್ಧ ನಡೆದಿದ್ದು, ಸುಮಾರು 3,000 ಜನರ ಸಾವಿಗೆ ಕಾರಣವಾಗಿತ್ತು. ಅಲ್ಲದೇ ಹತ್ತು ಲಕ್ಷಕ್ಕಿಂತಲೂ ಹೆಚ್ಚು ಜನರನ್ನು ಬಲವಂತವಾಗಿ ಸ್ಥಳಾಂತರಿಸಲಾಗಿತ್ತು ಎಂದು ವರದಿ ವಿವರಿಸಿದೆ.
2020ರಲ್ಲಿ ಅಜರ್ ಬೈಜಾನ್ ಮಿಲಿಟರಿ ದಾಳಿ ಆರಂಭಿಸುವ ಮೂಲಕ ಎರಡನೇ ಬಾರಿಗೆ ಕರಾಬಖ್ ಸ್ವಾಧೀನಕ್ಕಾಗಿ ಯುದ್ಧವನ್ನು ಹುಟ್ಟು ಹಾಕಿತ್ತು. ಈ ಸಂದರ್ಭದಲ್ಲಿ ಅಜರ್ ಬೈಜಾನ್ ಸೇನೆ ಶೀಘ್ರವಾಗಿ ಅರ್ಮೇನಿಯನ್ ಪಡೆಗಳನ್ನು ಸೋಲಿಸಿತ್ತು. ಕೇವಲ 44 ದಿನಗಳ ಯುದ್ಧದಲ್ಲಿ ಸುತ್ತಮುತ್ತಲಿನ ಏಳು ಜಿಲ್ಲೆಗಳು ಮತ್ತು ನಾಗೋರ್ನೊ-ಕರಾಬಖ್ ನ ಮೂರನೇ ಒಂದರಷ್ಟು ಭಾಗದ ಮೇಲೆ ಅಜರ್ ಬೈಜಾನ್ ನಿಯಂತ್ರಣ ಸಾಧಿಸಿತ್ತು. ಈ ಯುದ್ಧದಲ್ಲಿ ಅಂದಾಜು 6,500 ಜನರು ಸಾವನ್ನಪ್ಪಿದ್ದರು.
ಏತನ್ಮಧ್ಯೆ ರಷ್ಯಾದ ಮಧ್ಯಸ್ಥಿಕೆಯ ಕದನ ವಿರಾಮ ಒಪ್ಪಂದದ ಮೂಲಕ ಈ ಪ್ರದೇಶದಲ್ಲಿ ಶಾಂತಿ ನೆಲೆಸಿತ್ತು. ನಂತರ ಅರ್ಮೇನಿಯಾದ ನಿಯಂತ್ರಣದಲ್ಲಿ ಇಲ್ಲದ ನಾಗೋರ್ನೊ-ಕರಾಬಖ್ ಅನ್ನು ಸಂಪರ್ಕಿಸುವ ರಸ್ತೆಯಾದ ಲಾಚಿನ್ ಕಾರಿಡಾರ್ ಗೆ ರಷ್ಯಾ 1,960 ಶಾಂತಿಪಾಲಕರನ್ನು ನಿಯೋಜಿಸಿತ್ತು.
2023ರಲ್ಲಿ ಬಿರುಸುಗೊಂಡ ಸಂಘರ್ಷ:
2023ರ ಸೆಪ್ಟೆಂಬರ್ 19ರಂದು ಅಜರ್ ಬೈಜಾನ್ ನಾಗೋರ್ನೊ-ಕರಾಬಖ್ ಪ್ರದೇಶದಲ್ಲಿ ಭಾರೀ ಮಿಲಿಟರಿ ಕಾರ್ಯಾಚರಣೆ ಕೈಗೊಂಡಿತ್ತು. ಅರ್ಮೇನಿಯನ್ ನಮ್ಮ ಇಬ್ಬರು ನಾಗರಿಕರು ಹಾಗೂ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಹತ್ಯೆಗೈದಿದ್ದು, ಇದು ಭಯೋತ್ಪಾದಕ ಕೃತ್ಯವಾಗಿದೆ. ಇದಕ್ಕೆ ಪ್ರತೀಕಾರವಾಗಿ ಸೇನಾ ಕಾರ್ಯಾಚರಣೆ ನಡೆಸಿರುವುದಾಗಿ ಅಜರ್ ಬೈಜಾನ್ ರಕ್ಷಣಾ ಸಚಿವಾಲಯ ತಿಳಿಸಿತ್ತು. ಈ ಹೇಳಿಕೆಯ ಪರಿಣಾಮ ಎರಡೂ ದೇಶಗಳ ನಡುವೆ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿತ್ತು.