Advertisement
ಇದರಿಂದಾಗಿ ಹೂಡಿಕೆದಾರರ ಪ್ರಮಾಣ ಹೆಚ್ಚಳವಾಗಲಿದ್ದು, ಇದರಿಂದಾಗಿ ಹೊಸ ಕಂಪನಿಗಳ ಮಾರುಕಟ್ಟೆ ಮೌಲ್ಯ ಹೆಚ್ಚಳವಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ಕಳೆದ ಸೆಪ್ಟೆಂಬರ್‌ನಲ್ಲೇ ಆದಾಯ ತೆರಿಗೆ ಇಲಾಖೆ ಹೊಸ ನಿಯಮವನ್ನು ಜಾರಿ ಮಾಡಿತ್ತು. ಈಗಾಗಲೇ 1.17 ಲಕ್ಷ ಸ್ಟಾರ್ಟ್‌ಅಪ್ ಸರ್ಕಾರದ ಜೊತೆ ನೋಂದಣಿ ಮಾಡಿಕೊಂಡಿದ್ದು, ಈ ಕಂಪನಿಗಳ ಬಂಡವಾಳ ಹೆಚ್ಚಳಕ್ಕೆ ಈ ಘೋಷಣೆ ನೆರವು ನೀಡಲಿದೆ.
ಯಾವುದೇ ಕಂಪನಿಗಳು ಷೇರುಗಳ ನ್ಯಾಯವಾದ ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಅದರ ಮೇಲೆ ವಿಧಿಸಲಾಗುತ್ತಿದ್ದ ಹೆಚ್ಚುವರಿ ತೆರಿಗೆಯನ್ನು ಏಂಜಲ್ ತೆರಿಗೆ ಎನ್ನಲಾಗುತ್ತದೆ. ಕಾಂಗ್ರೆಸ್ ನಾಯಕ ಪ್ರಣಬ್ ಮುಖರ್ಜಿ ವಿತ್ತ ಸಚಿವರಾಗಿದ್ದ ವೇಳೆ 2012ರಲ್ಲಿ ಏಂಜಲ್ ತೆರಿಗೆ ವಿಧಿಸುವ ಪದ್ಧತಿ ಜಾರಿಗೊಳಿಸಲಾಗಿತ್ತು. ಸ್ಟಾರ್ಟ್‌ಅಪ್ ಗಳಲ್ಲಿ ಅಕ್ರಮ ಹಣಹೂಡಿಕೆಯನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು.