Advertisement
ಸಬ್ ಸ್ಕ್ರೈಬರ್ ಐಡೆಂಟಿಟಿ ಮೋಡ್ಯೂಲ್ ಎಂಬ ಹೆಸರಿನಿಂದ ಕರೆಯಲ್ಪಡುವ ಸಿಮ್ ಕಾರ್ಡ್ ಗಳು ಗ್ರಾಹಕರ ಮೊಬೈಲ್ ಸಂಖ್ಯೆಯನ್ನು ಒಳಗೊಂಡಂತೆ, ಎಲ್ಲಾ ವಿಧವಾದ ಸಂವಹನದ ಮಾಹಿತಿಗಳನ್ನು ಸಂಗ್ರಹಿಸಿಟ್ಟುಕೊಂಡಿರುತ್ತದೆ. ಇ-ಸಿಮ್ ಕಾರ್ಡ್ ತಂತ್ರಜ್ಞಾನಕ್ಕೆ ಸುದೀರ್ಘ ಇತಿಹಾಸವಿದ್ದು, ಇದು ರಿಮೂವೆಬಲ್ ಮತ್ತು ನಾನ್ ರಿಮೂವೆಬಲ್ ಆವೃತ್ತಿಯಲ್ಲಿ ಜನರಿಗೆ ಲಭ್ಯವಾಗುತ್ತದೆ.
Related Articles
Advertisement
ಇ-ಸಿಮ್ ಎಂಬುದು ಸ್ಮಾರ್ಟ್ ಫೋನಿನಲ್ಲಿರುವ ವಿದ್ಯುನ್ಮಾನ ಅಥವಾ ಎಂಬೆಡ್(embed) ಸಿಮ್ ಆಗಿದ್ದು, ಇದಕ್ಕಾಗಿ ಯಾವುದೇ ಭೌತಿಕ ಸಿಮ್ ಅಳವಡಿಸುವ ಅಗತ್ಯವಿರುವುದಿಲ್ಲ. ಬದಲಾಗಿ ಗ್ರಾಹಕರಿಗೆ ನೆಟ್ವರ್ಕ್ ಸಂಸ್ಥೆಗಳು ಡಿಜಿಟಲ್ ವ್ಯವಸ್ಥೆಯ ಮೂಲಕ ಸಿಮ್ ಡೌನ್ ಲೋಡ್ ಮಾಡಿಕೊಳ್ಳುವ ಅವಕಾಶ ಕಲ್ಪಿಸಿದೆ. ಅಲ್ಲದೆ ಇಲ್ಲಿ ನೀವು ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಒಂದಕ್ಕಿಂತ ಹೆಚ್ಚು ಸಿಮ್ ಅನ್ನು ಡೌನ್ ಲೋಡ್ ಮಾಡಿ ಸಂವಹನ ನಡೆಸಬಹುದಾಗಿದೆ.
ಇ-ಸಿಮ್ ನ ಅನುಕೂಲಗಳೇನು?
- ಅಂತರಾಷ್ಟ್ರೀಯ ಪ್ರಯಾಣ ಮಾಡುವವರು ತಮ್ಮ ಅನುಕೂಲಕ್ಕೆ ತಕ್ಕಂತೆ ತಮ್ಮ ಸಿಮ್ ಆಯ್ಕೆ ಮಾಡಬಹುದು.
- ಬೇರೊಂದು ಸಿಮ್ ನ ಅವಶ್ಯಕತೆ ಇದ್ದಾಗ ಅದನ್ನು ಖರೀದಿಸಲು ಮೊಬೈಲ್ ಶಾಪ್ ಗಳಿಗೆ ತೆರಳುವ ಅನಿವಾರ್ಯತೆ ಇರುವುದಿಲ್ಲ. ಹಾಗಾಗಿ ಅತ್ಯಮೂಲ್ಯ ಸಮಯದ ಉಳಿತಾಯವಾಗುತ್ತದೆ.
- ಇ-ಸಿಮ್ ಕಾರ್ಡ್ ಅನ್ನು ಅತ್ಯಂತ ಸುಲಭವಾಗಿ ಡೌನ್ ಲೋಡ್ ಮಾಡಬಹುದಾಗಿದ್ದು, ಸಿಮ್ ಬದಲಿಸಲು ಯಾವುದೇ ವಿಧದ ಭೌತಿಕ ಟೂಲ್ ಗಳನ್ನು ಬಳಸುವ ಅವಶ್ಯಕತೆ ಎದುರಾಗುವುದಿಲ್ಲ.