Advertisement
ಹಿಂದಿನ ಐದು ವರ್ಷಗಳ ಕಾಲ ಮೈಸೂರಿನವರೇ ಆದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದರಿಂದ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳಾಗಿದೆ. ಜೊತೆಗೆ ವಿಧಾನಸಭೆ ಚುನಾವಣೆಗೆ ಮುನ್ನ ಸಿದ್ದರಾಮಯ್ಯ ಅವರು ಮಂಡಿಸಿದ್ದ 2018-19ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದ್ದ ಸಾಕಷ್ಟು ಯೋಜನೆಗಳು ಇನ್ನೂ ಕಾರ್ಯಗತ ವಾಗಬೇಕಿದೆ.
Related Articles
Advertisement
ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿ ಸುವುದು ಮಾತ್ರವಲ್ಲ. ಖರೀದಿ ಭದ್ರತೆ ಯನ್ನೂ ನೀಡಬೇಕು. ಜೊತೆಗೆ ಹಣ್ಣು- ತರಕಾರಿ ಸೇರಿದಂತೆ ರೈತ ಬೆಳೆದ ಎಲ್ಲ ಉತ್ಪನ್ನಗಳಿಗೂ ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು. ಕಬ್ಬು ಬೆಳೆಗಾರರ ಅನುಕೂಲಕ್ಕಾಗಿ ಕಾನೂನು ತಿದ್ದುಪಡಿತಂದು ಬಾಕಿ ಪಾವತಿಸದ ಸಕ್ಕರೆ ಕಾರ್ಖಾನೆ ಮಾಲಿಕರಿಗೆ ಜೈಲು ಶಿಕ್ಷೆ ವಿಧಿಸುವ ಕಾನೂನು ತರಬೇಕು ಎಂದು ಮನವಿ ಮಾಡಲಾಗಿದೆ.
ದಸರಾ ಪ್ರಾಧಿಕಾರ: ರಾಜ್ಯದ ಪ್ರಮುಖ ಪ್ರವಾಸಿ ತಾಣ ವಾದ ಮೈಸೂರು ನಗರಕ್ಕೆ ನಿಯಮಿತವಾಗಿ ಪ್ರವಾಸಿಗರನ್ನು ಆಕರ್ಷಿಸಲು ಪೂರಕ ಕಾರ್ಯಕ್ರಮಗಳ ಆಯೋಜನೆ ಜೊತೆಗೆ ತರಾತುರಿಯಲ್ಲಿ ದಸರಾ ಸಿದ್ಧತೆ ಮಾಡುವ ಬದಲು ದಸರಾ ಪ್ರಾಧಿಕಾರ ರಚಿಸುವಂತೆ ಬಹು ವರ್ಷಗಳ ಬೇಡಿಕೆ ಇದೆ.
ನಿವೇಶನಗಳ ಕೊರತೆಯಿಂದ ಬಡ ವರ್ಗದವರಿಗೆ ವಸತಿ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಲಾಗು ತ್ತಿಲ್ಲ. ಸಮ್ಮಿಶ್ರ ಸರ್ಕಾರ ದಸರಾ ಪ್ರಾಧಿಕಾರ ರಚನೆ ಮಾಡ ಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಜೊತೆಗೆ ಜಿಲ್ಲೆಯವರೇ ಪ್ರವಾಸೋದ್ಯಮ ಸಚಿವರಾಗಿರುವುದರಿಂದ ಜಿಲ್ಲೆಗೆ ಯಾವ ಹೊಸ ಪ್ರವಾಸಿ ಯೋಜನೆಗಳನ್ನು ತರಲಿ ದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಆದಿವಾಸಿಗಳಿಗೆ ಸೌಲಭ್ಯ: ಜಿಲ್ಲೆಯಲ್ಲಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿರುವ ಆದಿವಾಸಿಗಳ ಕುಟುಂಬ ಗಳಿಗಾಗಿ ಹೊಸ ಹಾಡಿಗಳ ನಿರ್ಮಾಣ, ಕೃಷಿಭೂಮಿ, ಮನೆ ಒದಗಿಸುವುದು, ಆದಿವಾಸಿಗಳು ಹೆಚ್ಚಿರುವ ಹುಣಸೂರು, ಎಚ್.ಡಿ.ಕೋಟೆ, ಪಿರಿಯಾಪಟ್ಟಣ ತಾಲೂಕುಗಳಲ್ಲಿ ಬಿರ್ಸಾ ಮುಂಡಾ ಭವನ ನಿರ್ಮಾಣ,
ಆದಿವಾಸಿಗಳ ಹಾಡಿಗಳಲ್ಲಿ ಶಿಶುಪಾಲನ ಕೇಂದ್ರಗಳನ್ನು ತೆರೆಯುವುದು, ಅರಣ್ಯ ಹಕ್ಕು ಸಮಿತಿಗಳ ಬಲವರ್ಧನೆ, ಮೊರ,ಕುಕ್ಕೆ, ಲಾಂಟನ ಕಡ್ಡಿಯಲ್ಲಿ ಪೀಠೊಪಕರಣ ಮಾಡುವ ಸಾಂಪ್ರದಾಯಿಕ ಕೌಶಲ್ಯ ಹೊಂದಿರುವ ಆದಿವಾಸಿ ಕುಟುಂಬಗಳಿಗೆ ನೆರವು ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ.