ಚಿಕಿತ್ಸೆ ಪಡೆಯಬೇಕು?
ಸುದಂತ ಯೋಜನ ಚಿಕಿತ್ಸೆಯ ಗುರಿ ಎಂದರೆ ಸುಂದರ ನಗು ಮತ್ತು ಉತ್ತಮ ಜಗಿತ – ಅರ್ಥಾತ್ ಎದುರು ದವಡೆಯ ಹಲ್ಲುಗಳೊಂದಿಗೆ ಸರಿಯಾಗಿ ಸಂಯೋಜನೆ ಹೊಂದುವ ನೇರ, ಸುಂದರವಾದ ಹಲ್ಲುಗಳು. ಉತ್ತಮ ಜಗಿತವು ನಿಮಗೆ ಜಗಿಯುವುದಕ್ಕೆ, ಚೀಪುವುದಕ್ಕೆ ಮತ್ತು ಮಾತನಾಡುವುದಕ್ಕೆ ಅನುಕೂಲ ಮಾಡಿಕೊಡುತ್ತದೆ. ಸುಂದರ ನಗು ಆತ್ಮ ಗೌರವ, ಆತ್ಮವಿಶ್ವಾಸಕ್ಕೆ ಕೊಡುಗೆಯಾಗುವ ಮೂಲಕ ಅನೇಕರಿಗೆ ಒಳ್ಳೆಯ ಭವಿಷ್ಯರೂಪಕವಾಗುತ್ತದೆ. ನಾವು ಇಂದು ಹೆಚ್ಚು ಸ್ಪರ್ಧಾತ್ಮಕವಾದ ಜಗತ್ತಿನಲ್ಲಿ ಬದುಕುತ್ತಿದ್ದೇವೆ, ಒಳ್ಳೆಯ ನಗು ನಮ್ಮ ವ್ಯಕ್ತಿತ್ವಕ್ಕೊಂದು ಹೊಸ ಹೊಳಪನ್ನು ನೀಡುತ್ತದೆ.
ಬಹಳಷ್ಟು ಬಾರಿ ಸುದಂತ ಯೋಜನ ಚಿಕಿತ್ಸೆಯು ಸಮಗ್ರ ದಂತ ಆರೈಕೆ ಯೋಜನೆಯ ಭಾಗವಾಗಿರುತ್ತದೆ. ಅಗತ್ಯವಾದಾಗ ಸುದಂತ ಯೋಜನ ಚಿಕಿತ್ಸೆಯೊಂದಿಗೆ ಉತ್ತಮ ಆರೈಕೆಯಿಂದ ಹಲ್ಲುಗಳು ಜೀವನಪರ್ಯಂತ ಚೆನ್ನಾಗಿರುತ್ತವೆ.
ಇನ್ನೂ ಬೆಳವಣಿಗೆಯ ಹಂತದಲ್ಲಿರುವ ಮಕ್ಕಳು ಅಥವಾ ಹದಿವಯಸ್ಕರಲ್ಲಿ ಚಿಕಿತ್ಸೆಯು ಈಗಾಗಲೇ ಮುಖ ಮತ್ತು ದವಡೆಗಳು ಸಂಪೂರ್ಣ ಬೆಳವಣಿಗೆ ಹೊಂದಿದವರಿಗಿಂತ ಹೆಚ್ಚು ಒಳ್ಳೆಯ ಫಲಿತಾಂಶವನ್ನು ನೀಡುತ್ತವೆ.
Advertisement
ನೀವು ಚಿಕಿತ್ಸೆ ಪಡೆಯುತ್ತಿರುವಾಗ ಎಷ್ಟು ಸಮಯಕ್ಕೊಮ್ಮೆ ಸುದಂತ ಯೋಜನ ತಜ್ಞ ವೈದ್ಯರನ್ನು ಕಾಣಬೇಕು?
ನಿಮ್ಮ ಚಿಕಿತ್ಸೆಯ ಅವಧಿಯಲ್ಲಿ ಸರಾಸರಿ 5-6 ವಾರಗಳಿಗೆ ಒಮ್ಮೆ ನೀವು ಸುದಂತ ಯೋಜನ ತಜ್ಞ ವೈದ್ಯರನ್ನು ಕಾಣಬೇಕು. ಇದರಿಂದ ನಿಮ್ಮ ಸುದಂತ ಯೋಜನ ತಜ್ಞ ವೈದ್ಯರಿಗೆ ಚಿಕಿತ್ಸೆಯ ಅವಧಿಯಲ್ಲಿ ಅಗತ್ಯ ಬದಲಾವಣೆಗಳು ಪ್ರಗತಿ ಹೊಂದುವಂತೆ ಮಾಡುವುದಕ್ಕೆ, ನಿಮ್ಮ ಚಿಕಿತ್ಸಾ ಪ್ರಗತಿಯ ಮೇಲೆ ಗಮನವಿರಿಸುವುದಕ್ಕೆ ಹಾಗೂ ನಿಮ್ಮ ಹಲ್ಲುಗಳು ಮತ್ತು ವಸಡುಗಳ ಆರೋಗ್ಯದ ಮೇಲೆ ನಿಗಾ ಇರಿಸುವುದಕ್ಕೆ ಸಾಧ್ಯವಾಗುತ್ತದೆ.
Related Articles
ಚಿಕಿತ್ಸೆಯ ಅವಧಿ ನಿರ್ದಿಷ್ಟ ರೋಗಿಯ ವ್ಯಕ್ತಿಗತ ಸಮಸ್ಯೆಯನ್ನು ಅವಲಂಬಿಸಿರುತ್ತದೆ. ಸರಳ ಪ್ರಕರಣಗಳಿಗೆ ಚಿಕಿತ್ಸೆ ನೀಡುವುದಕ್ಕೆ ಕೆಲವು ತಿಂಗಳುಗಳ ಕಾಲಾವಕಾಶ ಸಾಕು; ಇದೇವೇಳೆ ಸಂಕೀರ್ಣ ಜಗಿತ ಸರಿಪಡಿಸುವಿಕೆಯಂತಹ ಚಿಕಿತ್ಸೆಗಳಿಗೆ 2-3 ವರ್ಷ ತಗಲಬಹುದು. ಅತ್ಯಂತ ಕನಿಷ್ಟ ಅವಧಿಯಲ್ಲಿ ನಿಮ್ಮ ಮುಖದಲ್ಲಿ ಆರೋಗ್ಯಯುತವಾದ ಸುಂದರ ನಗುವನ್ನು ಅರಳಿಸುವುದಕ್ಕೆ ಅಗತ್ಯವಾದಂತಹ ಕೌಶಲ ಮತ್ತು ಸಲಕರಣೆಗಳನ್ನು ನಿಮ್ಮ ಸುದಂತ ಯೋಜನ ತಜ್ಞ ವೈದ್ಯರು ಹೊಂದಿರುತ್ತಾರೆ.
Advertisement
ಡಾ| ರಿತೇಶ್ ಸಿಂಗ್ಲಾ ,ಅಸೊಸಿಯೇಟ್ ಪ್ರೊಫೆಸರ್, ಆಥೊìಡಾಂಟಿಕ್ಸ್ ವಿಭಾಗ,
ಮಣಿಪಾಲ ದಂತ ವೈದ್ಯಕೀಯ ಕಾಲೇಜು, ಮಣಿಪಾಲ.