Advertisement

ನ್ಯೂಜಿಲೆಂಡ್‌ ಕರಾವಳಿಯಲ್ಲಿ ದಡಕ್ಕಪ್ಪಳಿಸಿದ ತಿಮಿಂಗಿಲಗಳು

03:45 AM Feb 11, 2017 | |

ವೆಲ್ಲಿಂಗ್ಟನ್‌: ನ್ಯೂಜಿಲೆಂಡ್‌ನ‌ ವೆಲ್ಲಿಂಗ್ಟನ್‌ನ ಗೋಲ್ಡನ್‌ ಬೇ ಪ್ರದೇಶದಲ್ಲಿರುವ ಸಮುದ್ರ ತೀರದಲ್ಲಿರುವವರಿಗೆ ಶುಕ್ರವಾರ ಅಚ್ಚರಿ ಕಾದಿತ್ತು. ಬೆಳ್ಳಂಬೆಳಗ್ಗೇ 400ಕ್ಕೂ ಅಧಿಕ ತಿಮಿಂಗಿಲಗಳು ತೀರ ಪ್ರದೇಶದಲ್ಲಿ ಬಿದ್ದಿದ್ದವು. 

Advertisement

ಈ ಪೈಕಿ ಶೇ.70ರಷ್ಟು ದಡ ಸೇರುವಷ್ಟರಲ್ಲಿಯೇ ಅಸುನೀಗಿದ್ದವು. ಜೀವಂತವಾಗಿದ್ದ ಕೆಲವನ್ನು ಸ್ಥಳೀಯ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ವಯಂ ಸೇವಾ ಸಂಘಟನೆಗಳು ಮತ್ತೆ ಕಡಲಿನತ್ತ ಸೇರಿಸಲು ಪ್ರಯತ್ನ ಮಾಡಿದರು. ಗಮನಾರ್ಹ ಅಂಶವೆಂದರೆ ನ್ಯೂಜಿಲ್ಯಾಂಡ್‌ ಕರಾವಳಿ ಪ್ರದೇಶದಲ್ಲಿ ಇಂಥ ಬೆಳವಣಿಗೆ ಸಾಮಾನ್ಯವಾಗಿದೆ. 

500ಕ್ಕೂ ಹೆಚ್ಚು ಸ್ವಯಂ ಸೇವಾ ಸಂಘಟನೆಗಳ ಸದಸ್ಯರು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಜೀವಂತವಾಗಿ ಉಳಿದಿರುವ ತಿಮಿಂಗಿಲಗಳನ್ನು ಮತ್ತೆ ಸಮುದ್ರ ಸೇರಿಸುವ ಪ್ರಯತ್ನ ಮಾಡಿದ್ದಾರೆ. ಅಸುನೀಗಿರುವ ತಿಮಿಂಗಿಲಗಳನ್ನು ತೀರ ಪ್ರದೇಶದಲ್ಲಿಯೇ ಬಿಟ್ಟರೆ ಸಮುದ್ರದಲ್ಲಿರುವ ಇತರ ಜೀವಿಗಳಿಗೆ ತೊಂದರೆಯಾಗಬಹುದು. ಅವುಗಳನ್ನು ವಿಲೇವಾರಿ ಮಾಡುವಲ್ಲಿ ಹರ ಸಾಹಸ ಪಟ್ಟರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಪ್ರಕ್ರಿಯೆಯನ್ನು ಫೇರ್‌ವೆಲ್‌ ಸ್ಪಿಟ್‌ ಎಂದು ಕರೆಯುತ್ತಾರೆ. ಕಳೆದ ಹಲವು ದಶಕಗಳಲ್ಲಿ ಸುಮಾರು ಒಂಭತ್ತು ಇಂಥ ಪ್ರಕ್ರಿಯೆಗಳು ನಡೆದಿವೆ.
 

Advertisement

Udayavani is now on Telegram. Click here to join our channel and stay updated with the latest news.

Next