Advertisement

ಸಂಚಾರ ನಿಯಮ ಉಲ್ಲಂಘಿಸಿದರೆ, ಮನೆಗೆ ಬರಲಿದೆ ಪೊಲೀಸ್‌ ತಂಡ

10:51 AM Nov 05, 2020 | sudhir |

ಕೆ.ಆರ್‌.ಪುರ: ಸಂಚಾರ ನಿಯಮಗಳನ್ನು ಉಲ್ಲಂಘಿಸಿ ದಂಡ ಪಾವತಿಸದವರಿಗೆ ಬಿಸಿ ಮುಟ್ಟಿಸಲು ಕೆ.ಆರ್‌ ಪುರ ಸಂಚಾರ ಪೊಲೀಸರು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ದಂಡ ಪಾವತಿ ಬಾಕಿ ಉಳಿಸಿಕೊಂಡಿರುವ ವಾಹನ ಸವಾರರ ಮನೆಗಳಿಗೆ ಭೇಟಿ ನೀಡುತ್ತಿರುವ ಪೊಲೀಸರು ದಂಡ ವಸೂಲು ಮಾಡುತ್ತಿದ್ದಾರೆ.

Advertisement

ಠಾಣೆಯ ಇನ್ಸ್‌ಪೆಕ್ಟರ್‌ ಎಂ.ಎ ಅಹಮದ್‌, ಪಿಎಸ್‌ಐ, ಎಎಸ್‌ಐಗಳ ನೇತೃತ್ವದಲ್ಲಿ ಹಲವು ತಂಡಗಳನ್ನು ರಚಿಸಿದ್ದಾರೆ. ದಂಡ ವಸೂಲಾಗದ ಬಾಕಿ ಪ್ರಕರಣಗಳನ್ನು ಗುರಿಯಾಗಿಸಿಕೊಂಡು ವಾಹನ ಮಾಲೀಕರನ್ನು ಪತ್ತೆ ಹಚ್ಚುವುದು ಜತೆಗೆ ಅವರಿಂದ ದಂಡ ಸಂಗ್ರಹದ ಜವಾಬ್ದಾರಿ ವಹಿಸಲಾಗಿದೆ. ಕಳೆದ ಮೂರು ದಿನಗಳಿಂದ ಪೊಲೀಸರ ಈ ಕಾರ್ಯಚರಣೆ ಬಿರುಸುಗೊಂಡಿದ್ದು ಇದುವರೆಗೂ ಎರಡೂವರೆ ಲಕ್ಷ ರೂ. ಗಳಿಗೂ ಅಧಿಕ ಮೊತ್ತ ಸಂಗ್ರಹಿಸಲಾಗಿದೆ.

ಇದನ್ನೂ ಓದಿ:ಕೊಲೆ ಮಾಡಲು…ಎಷ್ಟು ಬೆಲೆ? ಉತ್ತರಪ್ರದೇಶದಲ್ಲಿ ಗೂಂಡಾಗಿರಿ ದರಪಟ್ಟಿ ವೈರಲ್!

ಬುಧವಾರದ ಕಾರ್ಯಾಚರಣೆಯಲ್ಲಿ ಎಎಸ್‌ಐ ರಾಮಾನಾಯಕ್‌ ಅವರು, ಬೈಕ್‌ ಸವಾರನೊಬ್ಬ 61 ಸಂಚಾರ ನಿಯಮಗಳನ್ನು ಉಲ್ಲಂ ಸಿ ದಂಡ ಬಾಕಿ ಉಳಿಸಿಕೊಂಡಿದ್ದು, ಮಾಲೀಕನ ಪತ್ತೆ ಹಚ್ಚಿ, 32 ಸಾವಿರ ದಂಡಸಂಗ್ರಹಿಸಿದ್ದಾರೆ .

Advertisement

Udayavani is now on Telegram. Click here to join our channel and stay updated with the latest news.

Next