ಇಂತಹುದೊಂದು ವಿಚಿತ್ರ ಸಲಹೆ ನೀಡಿದ್ದು ಬಿಹಾರದ ಔರಂಗಾಬಾದ್ ಜಿಲ್ಲೆಯ ಜಿಲ್ಲಾಧಿಕಾರಿ ಕನ್ವಾಲ್
ತನೂಜ್. ಶೌಚಾಲಯ ನಿರ್ಮಿಸದ ಜನರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವ ಭರದಲ್ಲಿ ಜಿಲ್ಲಾಧಿಕಾರಿ ಈ ಮಾತುಗಳನ್ನು ಆಡಿದ್ದಾರೆ. “ಮನೆಗೊಂದು ಶೌಚಾಲಯವಿಲ್ಲದ ಕಾರಣ, ಮಹಿಳೆಯರು ಬಯಲಿಗೆ ಹೋಗಬೇಕಾ ಗುತ್ತದೆ. ಅವರ ಘನತೆಯನ್ನು ರಕ್ಷಿಸಲು ಪುರುಷರಿಗೆ ಸಾಧ್ಯವಿಲ್ಲ ಎಂದ ಮೇಲೆ ಪತ್ನಿಯರನ್ನೇ ಇಟ್ಟುಕೊಳ್ಳಬೇಕು. ನಿಮ್ಮಿಂದ ಟಾಯ್ಲೆಟ್ ನಿರ್ಮಾಣ ಸಾಧ್ಯವಾಗದಿದ್ದರೆ, ಪತ್ನಿಯನ್ನು ಮಾರಿಬಿಡಿ,’ ಎಂದು ಆಕ್ರೋ ಶಭರಿತರಾಗಿ ನುಡಿದಿದ್ದಾರೆ ತನೂಜ್.
Advertisement
ಸ್ವಂತ ಶೌಚಾಲಯ ಹೊಂದುವ ಕುರಿತು ಜಾಗೃತಿ ಮೂಡಿಸುವ ರ್ಯಾಲಿಯಲ್ಲಿ ಜಿಲ್ಲಾಧಿಕಾರಿ ಈ ಮಾತುಗಳನ್ನಾಡಿದ್ದಾರೆ. ಆರಂಭದಲ್ಲಿ ತನೂಜ್, “ಯಾರೆಲ್ಲ ನಿಮ್ಮ ಪತ್ನಿಯರ ಮೌಲ್ಯವು 12 ಸಾವಿರ ರೂ.ಗಿಂತ ಕಡಿಮೆ ಎಂದು ಭಾವಿಸಿದ್ದೀರೋ ಅವರೆಲ್ಲ ಕೈ ಎತ್ತಿ’ ಎಂದು ಹೇಳಿದರು. ಅಷ್ಟರಲ್ಲಿ, ಅಲ್ಲಿದ್ದ ಯಾರೋ ಒಬ್ಬರು “ನಮ್ಮಲ್ಲಿ ಹಣವಿಲ್ಲ’ ಎಂದು ಕೂಗಿದರು. ಅದಕ್ಕೆ ಕೋಪಗೊಂಡ ತನೂಜ್, “ಇದುವೇ ನಿಮ್ಮೆಲ್ಲರ ಮನಸ್ಥಿತಿ ಎಂದಾದರೆ, ನಿಮ್ಮ ಪತ್ನಿಯರನ್ನು ಹರಾಜಿಗಿಡಿ. ಟಾಯ್ಲೆಟ್ ನಿರ್ಮಾಣ ಸಾಧ್ಯವಿಲ್ಲ ಎಂದು ಸರ್ಕಾರಕ್ಕೆ ಹೋಗಿ ಹೇಳಿ’ ಎಂದು ನುಡಿದರು. ಜಿಲ್ಲಾಧಿಕಾರಿ ಬಾಯಿಯಿಂದ ಇಂತಹ ಮಾತು ಹೊರಬೀಳುತ್ತಿದ್ದಂತೆ, ಅಲ್ಲಿ ಸೇರಿದ್ದ ಎಲ್ಲರೂ ಮೌನಕ್ಕೆ ಶರಣಾಗಿದ್ದು ಕಂಡುಬಂತು.