Advertisement

ಪಾಶ್ಚಾತ್ಯ ಸಂಸ್ಕೃತಿಯಿಂದ ಸಮಾಜಕ್ಕೆ ಧಕ್ಕೆ

12:48 PM Jan 04, 2017 | |

ಧಾರವಾಡ: ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವ ವಿದ್ಯಾರ್ಥಿನಿಯರಿಂದ ಸಮಾಜದ ಸ್ವಾಸ್ಥ ಹದೆಗೆಡುತ್ತಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ ಆತಂಕ ವ್ಯಕ್ತಪಡಿಸಿದರು. 

Advertisement

ನಗರದ ಆಲೂರು ವೆಂಕಟರಾವ್‌ ಸಭಾಂಗಣದಲ್ಲಿ ಕರ್ನಾಟಕ ದಲಿತ ಮಹಿಳಾ ಒಕ್ಕೂಟ ಹಾಗೂ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಸಹಯೋಗದಲ್ಲಿ ಸಾವಿತ್ರಿಬಾಯಿ ಪುಲೆ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಬೃಹತ್‌ ದಲಿತ ಮಹಿಳಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಸಾವಿತ್ರಿಬಾಯಿ ಪುಲೆ ಅವರಂತೆ ಕೆಲ ಹೋರಾಟಗಾರ್ತಿಯರು ಸಮಾಜದಲ್ಲಿ ಬದಲಾವಣೆಗೆ ಮಾಡಿದ ಹೋರಾಟದ ಪ್ರತಿಫಲವಾಗಿ ಇಂದು ಹೆಣ್ಣುಮಕ್ಕಳು ಶಿಕ್ಷಣ ಪಡೆಯುವಂತಾಗಿದೆ. ಆದರೆ ಶಿಕ್ಷಣ ಪಡೆದ ಕೆಲ ವಿದ್ಯಾರ್ಥಿನಿಯರು ಅದರ ನೈಜ ಲಾಭ ಪಡೆದುಕೊಳ್ಳದೇ ನಮ್ಮ ಸಂಪ್ರದಾಯ ಬಿಟ್ಟು ಪಾಶ್ಚಾತ್ಯ ಸಂಪ್ರದಾಯಕ್ಕೆ ಮಾರು ಹೋಗುತ್ತಿದ್ದಾರೆ. 

ಹೀಗಾಗಿ ಈ ಕುರಿತು ಪಾಲಕರು ಮಕ್ಕಳಿಗೆ ಬುದ್ಧಿ ಹೇಳುವುದು ಅಗತ್ಯವಿದೆ ಎಂದರು. ಪ್ರಾಧ್ಯಾಪಕಿ ಡಾ| ಜಯದೇವಿ ಗಾಯಕವಾಡ ಮಾತನಾಡಿ, ಮಹಿಳೆಯರಿಗೆ ಶಿಕ್ಷಣ ನೀಡಲು ತಮ್ಮ ಜೀವನ ಸವೆಸುವ ಮೂಲಕ ದೇಶದಲ್ಲಿ ಮೊದಲ ಮಹಿಳಾ ಶಾಲೆ ಆರಂಭಿಸಿದ ಸಾವಿತ್ರಿಭಾಯಿ ಪುಲೆ ಅವರ  ಜನ್ಮದಿನವನ್ನು ಶಿಕ್ಷಕಿಯರ ದಿನವನ್ನಾಗಿ ಆಚರಿಸಬೇಕು ಎಂದರು.

ಮನ್ಸೂರು ರೇವಣಸಿದ್ಧೇಶ್ವರ ಮಠದ ಬಸವರಾಜ ದೇವರು ಸಾನ್ನಿಧ್ಯ ವಹಿಸಿದ್ದರು. ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿ ಪುಷ್ಪಾವತಿ ಹಲಗಿ ಅಧ್ಯಕ್ಷತೆ ವಹಿಸಿದ್ದರು. ಪರಶುರಾಮ ನೀಲನಾಯಕ, ಲಕ್ಷ್ಮೀಗುಂಟ್ರಾಳ, ಆರ್‌.ಮೋಹನರಾಜ, ಚಿನ್ನಮ್ಮ ಶಿರಹಟ್ಟಿ, ಮಧುಲತಾ ಹಾಗೂ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next