Advertisement

ವಿಶ್ವಕಪ್ ವೈಭವ: ಕೆರಿಬಿಯನ್ನರಿಗೆ ಮೊದಲ ಕಪ್‌

06:07 PM May 17, 2019 | keerthan |

ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಕ್ರಾಂತಿಯ ಹೆಜ್ಜೆ ಮೂಡಿದ್ದು 1973ರ ಜುಲೈ 25ರಂದು. ಲಂಡನ್‌ನಲ್ಲಿ ನಡೆದ ಐಸಿಸಿ ವಾರ್ಷಿಕ ಅಧಿವೇಶನದಲ್ಲಿ mಇಂಗ್ಲೆಂಡಿನ “ಟೆಸ್ಟ್‌ ಆ್ಯಂಡ್‌ ಕೌಂಟಿ ಕ್ರಿಕೆಟ್‌ ಬೋರ್ಡ್‌’ ಮಹತ್ವದ ಪ್ರಸ್ತಾವವೊಂದನ್ನು ಮುಂದಿಟ್ಟಿತು. ಟೆಸ್ಟ್‌ ಮಾನ್ಯತೆ ಪಡೆದಿರುವ ರಾಷ್ಟ್ರಗಳ ನಡುವೆ ಏಕದಿನ ಪಂದ್ಯಾವಳಿಯೊಂದನ್ನು ಆಯೋಜಿಸಬಾರದೇಕೆ ಎಂಬ ಈ ಪ್ರಸ್ತಾವ ಕ್ರಿಕೆಟ್‌ ರಾಷ್ಟ್ರಗಳಲ್ಲಿ ಭಾರೀ ಸಂಚಲನ ಮೂಡಿಸಿತು. ಐಸಿಸಿ ಇದಕ್ಕೆ ಕೂಡಲೇ ಸಮ್ಮತಿಸಿತು.

Advertisement

ಆದರೆ ಪಂದ್ಯಾವಳಿಯನ್ನು ಯಾವ ರೀತಿ ನಡೆಸಬೇಕೆಂಬ ಬಗ್ಗೆ ಸಾಕಷ್ಟು ಚರ್ಚೆಗಳಾದವು. ಟೆಸ್ಟ್‌ ಮಾನ್ಯತೆ ಪಡೆದಿರುವ 6 ದೇಶಗಳ ಜತೆಗೆ ಐಸಿಸಿ ಸದಸ್ಯತ್ವ ಹೊಂದಿರುವ 2 ರಾಷ್ಟ್ರಗಳನ್ನು ಸೇರಿಸಿ ಕೂಟವನ್ನು ನಡೆಸಲು ನಿರ್ಧರಿಸಲಾಯಿತು. ಹೆಚ್ಚುವರಿ ತಂಡಗಳ ಅದೃಷ್ಟ ಶ್ರೀಲಂಕಾ ಮತ್ತು ಪೂರ್ವ ಆಫ್ರಿಕಾ ಪಾಲಾಯಿತು. ಕ್ರಿಕೆಟ್‌ ಜನಕರ ನಾಡಾದ ಇಂಗ್ಲೆಂಡಿನಲ್ಲೇ ಇದನ್ನು ನಡೆಸಲು ಯಾರ ವಿರೋಧವೂ ವ್ಯಕ್ತವಾಗಲಿಲ್ಲ. “ಜಿಲೆಟ್‌ ಕಪ್‌’ ಮಾದರಿಯಲ್ಲಿ ತಲಾ 60 ಓವರ್‌ಗಳ ಪಂದ್ಯಗಳನ್ನು ನಡೆಸಲು ತೀರ್ಮಾನಿಸಲಾಯಿತು.

ಆಗಲೇ 1972ರಲ್ಲಿ ಇಂಗ್ಲೆಂಡ್‌-ಆಸ್ಟ್ರೇಲಿಯ ನಡುವಿನ 3 ಪಂದ್ಯಗಳ ಏಕದಿನ ಸರಣಿಗೆ “ಪ್ರುಡೆನ್ಶಿಯಲ್‌ ಕಂಪೆನಿ’ ಪ್ರಾಯೋಜನೆ ಮಾಡಿದ್ದರಿಂದ ವಿಶ್ವಕಪ್‌ ಸ್ಪಾನ್ಸರ್‌ ಕೂಡ ಈ ಕಂಪೆನಿ ಪಾಲಾಯಿತು.

ಬಹುಮಾನ 4 ಸಾವಿರ ಪೌಂಡ್‌
1975ರ ಜೂನ್‌ನಲ್ಲಿ 8 ತಂಡಗಳ ನಡುವೆ ವಿಶ್ವಕಪ್‌ ಹಣಾಹಣಿ ಮೊದಲ್ಗೊಂಡಿತು. 4 ತಂಡಗಳನ್ನು 2 ವಿಭಾಗಗಳನ್ನಾಗಿ ವಿಂಗಡಿಸಲಾಯಿತು. ಒಂದೇ ಸುತ್ತಿನ ಸ್ಪರ್ಧೆ ಇದಾಗಿತ್ತು. “ಎ’ ವಿಭಾಗದಲ್ಲಿ ಇಂಗ್ಲೆಂಡ್‌ ಮತ್ತು ನ್ಯೂಜಿಲ್ಯಾಂಡ್‌ ಮೊದಲೆರಡು ಸ್ಥಾನ ಪಡೆದು ಸೆಮಿಫೈನಲ್‌ ಪ್ರವೇಶಿಸಿದವು. ಮೂರರಲ್ಲಿ ಒಂದು ಪಂದ್ಯ ಗೆದ್ದ ಭಾರತ ಮತ್ತು ಮೂರನ್ನೂ ಸೋತ ಪೂರ್ವ ಆಫ್ರಿಕಾ ಹೊರಬಿದ್ದವು. “ಬಿ’ ವಿಭಾಗದಲ್ಲಿ ವೆಸ್ಟ್‌ ಇಂಡೀಸ್‌ ಮತ್ತು ಆಸ್ಟ್ರೇಲಿಯ ಸೆಮಿಗೆ ಲಗ್ಗೆಯಿಟ್ಟವು. ಪಾಕಿಸ್ಥಾನ, ಶ್ರೀಲಂಕಾ ನಿರ್ಗಮಿಸಿದವು. ಸಣ್ಣ ಮೊತ್ತದ ಮೊದಲ ಸೆಮಿ ಫೈನಲ್‌ನಲ್ಲಿ ಆತಿಥೇಯ ಇಂಗ್ಲೆಂಡನ್ನು ಆಸ್ಟ್ರೇಲಿಯ ಪರಾಭವಗೊಳಿಸಿತು. ಇನ್ನೊಂದರಲ್ಲಿ ವಿಂಡೀಸ್‌ ಕಿವೀಸ್‌ಗೆ ಆಘಾತವಿಕ್ಕಿತು. ಫೈನಲ್‌ನಲ್ಲಿ ಆಸ್ಟ್ರೇಲಿಯವನ್ನು 17 ರನ್ನುಗಳಿಂದ ಕೆಡವಿದ ವೆಸ್ಟ್‌ ಇಂಡೀಸ್‌ ಚಾಂಪಿಯನ್‌ ಆಗಿ ಮೂಡಿಬಂತು. ಅಂದು ಚಾಂಪಿಯನ್‌ ತಂಡಕ್ಕೆ ಲಭಿಸಿದ ಬಹುಮಾನದ ಮೊತ್ತ ಕೇವಲ 4 ಸಾವಿರ ಪೌಂಡ್‌!


ಸ್ಕೋರ್ ಕಾರ್ಡ್; 21 ಜೂನ್‌, 1975

ವೆಸ್ಟ್‌ ಇಂಡೀಸ್‌
ರಾಯ್‌ ಫ್ರೆಡ್ರಿಕ್ಸ್‌ ಹಿಟ್‌ ವಿಕೆಟ್‌ ಲಿಲ್ಲಿ 7
ಗಾರ್ಡನ್‌ ಗ್ರೀನಿಜ್‌ ಸಿ ಮಾರ್ಷ್‌ ಬಿ ಥಾಮ್ಸನ್‌ 13
ಅಲ್ವಿನ್‌ ಕಾಳೀಚರಣ್‌ ಸಿ ಮಾರ್ಷ್‌ ಬಿ ಗಿಲ್ಮೋರ್‌ 12
ರೋಹನ್‌ ಕನ್ಹಾಯ್‌ ಬಿ ಗಿಲ್ಮೋರ್‌ 55
ಕ್ಲೈವ್‌ ಲಾಯ್ಡ ಸಿ ಮಾರ್ಷ್‌ ಬಿ ಗಿಲ್ಮೋರ್‌ 102
ವಿವಿಯನ್‌ ರಿಚರ್ಡ್ಸ್‌ ಬಿ ಗಿಲ್ಮೋರ್‌ 5
ಕೀತ್‌ ಬಾಯ್ಸ ಸಿ ಜಿ.ಚಾಪೆಲ್‌ ಬಿ ಥಾಮ್ಸನ್‌ 34
ಬೆಮಾರ್ಡ್‌ ಜೂಲಿಯನ್‌ ಔಟಾಗದೆ 26
ಡೆರಿಕ್‌ ಮರ್ರೆ ಸಿ ಮತ್ತು ಬಿ ಗಿಲ್ಮೋರ್‌ 14
ವಾನ್‌ಬರ್ನ್ ಹೋಲ್ಡರ್‌ ಔಟಾಗದೆ 6
ಇತರ 17
ಒಟ್ಟು (60 ಓವರ್‌ಗಳಲ್ಲಿ 8 ವಿಕೆಟಿಗೆ) 291
ವಿಕೆಟ್‌ ಪತನ: 1-12, 2-27, 3-50, 4-199, 5-206, 6-209, 7-261, 8-285.
ಬೌಲಿಂಗ್‌:
ಡೆನ್ನಿಸ್‌ ಲಿಲ್ಲಿ 12-1-55-1
ಗ್ಯಾರಿ ಗಿಲ್ಮೋರ್‌ 12-2-48-5
ಜೆಫ್ ಥಾಮ್ಸನ್‌ 12-1-44-2
ಮ್ಯಾಕ್ಸ್‌ ವಾಕರ್‌ 12-1-71-0
ಗ್ರೆಗ್‌ ಚಾಪೆಲ್‌ 7-0-33-0
ಡಗ್‌ ವಾಲ್ಟರ್ 5-0-23-0

Advertisement

ಆಸ್ಟ್ರೇಲಿಯ
ಅಲನ್‌ ಟರ್ನರ್‌ ರನೌಟ್‌ 40
ರಿಕ್‌ ಮೆಕಾಸ್ಕರ್‌ ಸಿ ಕಾಳೀಚರಣ್‌ ಬಿ ಬಾಯ್ಸ 7
ಇಯಾನ್‌ ಚಾಪೆಲ್‌ ರನೌಟ್‌ 62
ಗ್ರೆಗ್‌ ಚಾಪೆಲ್‌ ರನೌಟ್‌ 15
ಡಗ್‌ ವಾಲ್ಟರ್ ಬಿ ಲಾಯ್ಡ 35
ರಾಡ್ನಿ ಮಾರ್ಷ್‌ ಬಿ ಬಾಯ್ಸ 11
ರಾಸ್‌ ಎಡ್ವರ್ಡ್ಸ್‌ ಸಿ ಫ್ರೆಡ್ರಿಕ್ಸ್‌ ಬಿ ಬಾಯ್ಸ 28
ಗ್ಯಾರಿ ಗಿಲ್ಮೋರ್‌ ಸಿ ರೋಹನ್‌ ಬಿ ಬಾಯ್ಸ 14
ಮ್ಯಾಕ್ಸ್‌ ವಾಕರ್‌ ರನೌಟ್‌ 7
ಜೆಫ್ ಥಾಮ್ಸನ್‌ ರನೌಟ್‌ 21
ಡೆನ್ನಿಸ್‌ ಲಿಲ್ಲಿ ಔಟಾಗದೆ 16
ಇತರ 18
ಒಟ್ಟು (58.4 ಓವರ್‌ಗಳಲ್ಲಿ ಆಲೌಟ್‌) 274
ವಿಕೆಟ್‌ ಪತನ: 1-25, 2-81, 3-115, 4-162, 5-170, 6-195, 7-221, 8-231, 9-233.
ಬೌಲಿಂಗ್‌: ಬೆಮಾರ್ಡ್‌ ಜೂಲಿಯನ್‌ 12-0-58-0
ಆ್ಯಂಡಿ ರಾಬರ್ಟ್ಸ್ 11-1-45-0
ಕೀತ್‌ ಬಾಯ್ಸ 12-0-50-4
ವಾನ್‌ಬರ್ನ್ ಹೋಲ್ಡರ್‌ 11.4-1-65-0
ಕ್ಲೈವ್‌ ಲಾಯ್ಡ 12-1-38-1

ಪಂದ್ಯಶ್ರೇಷ್ಠ: ಕ್ಲೈವ್‌ ಲಾಯ್ಡ

Advertisement

Udayavani is now on Telegram. Click here to join our channel and stay updated with the latest news.

Next